ವೃಕ್ಷಥಾನ್ ಫಲಶ್ರುತಿಯ ಹಸಿರುಗಾಥೆ!

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವೃಕ್ಷಥಾನ್ ಫಲಶ್ರುತಿ. ವಿಜಯಪುರದ ಹಸಿರುಗಾಥೆ!
ಜಲ, ವೃಕ್ಷ, ಶಿಕ್ಷಣದ ನಮ್ಮ ಧ್ಯೇಯದಂತೆ ಕಳೆದ 9 ವರ್ಷಗಳ ಹಿಂದೆ ವಿಜಯಪುರವನ್ನು ಹಸಿರನ್ನಾಗಿಸಲು ಆರಂಭಿಸಿದ ವೃಕ್ಷಥಾನ್ ಹಸಿರು ಜಾಗೃತಿ ಕಾರ್ಯಕ್ರಮವು ಇಂದು ವಿಜಯಪುರದ ಹಸಿರುಗಾಥೆಯನ್ನು ಹೇಳುತ್ತಿದೆ.

ಈ ಯಶೋಗಾಥೆಯು ದೂರದ ಅಮೇರಿಕಾಗೂ ತಲುಪಿದೆ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ಹೇಳಿದರು.

- Advertisement - 

ವೃಕ್ಷಥಾನ್ ಮತ್ತು ಕೋಟಿ ವೃಕ್ಷ ಅಭಿಯಾನದ ಫಲಶ್ರುತಿ ಇಂದು ಎಲ್ಲರ ಮುಂದಿದೆ. ಕಳೆದ 9 ವರ್ಷಗಳಲ್ಲಿ 1.5 ಕೋಟಿ ಸಸಿಗಳನ್ನು ವಿಜಯಪುರದಾದ್ಯಂತ ನೆಡಲಾಗಿದೆ. ವಿಜಯಪುರದಲ್ಲೀಗ ಹಸಿರು ಮೂಡಿದೆ. ಪರಿಣಾಮ ಬಿಸಿಲನಾಡೆಂದು ಕರೆಸಿಕೊಳ್ಳುತ್ತಿದ್ದ ವಿಜಯಪುರದ ತಾಪಮಾನದಲ್ಲಿ 0.5 ಡಿಗ್ರಿ ಇಳಿಕೆಯಾಗಿದೆ. ಮಳೆಯ ಪ್ರಮಾಣವೂ ಹೆಚ್ಚಾಗಿದೆ ಎಂದು ಸಚಿವರು ತಿಳಿಸಿದರು.

ಗಾಳಿಯ ಮಾಲಿನ್ಯವು ದೇಶದಲ್ಲಿ ಸುದ್ದಿ ಮಾಡುತ್ತಿರುವ ಈ ಹೊತ್ತಿನಲ್ಲಿ ನಮ್ಮ ವಿಜಯಪುರವು ಪರಿಶುದ್ಧ ಗಾಳಿಯಲ್ಲಿ ದೇಶದಲ್ಲೇ 3ನೇ ಸ್ಥಾನ ಪಡೆದಿರುವುದು ಹೆಮ್ಮೆ ತಂದಿದೆ. ಅರಣ್ಯೀಕರಣದಿಂದಾಗಿ ಪಶು ಪಕ್ಷಿ ಸಂಕುಲ ಎಲ್ಲೆಡೆ ಕಾಣುತ್ತಿದೆ. ಅಳಿವಿನಂಚಿನಲ್ಲಿರುವ ಪ್ರಾಣಿ ಪಕ್ಷಿ ಪ್ರಭೇದಗಳಲ್ಲಿ ಗಣನೀಯ ಏರಿಕೆಯಾಗಿರುವುದನ್ನು ದಾಖಲೆಗಳು ಹೇಳುತ್ತಿವೆ.

- Advertisement - 

ಈ ಹಸಿರೀಕರಣವನ್ನು ಮುಂದುವರೆಸಿಕೊಂಡು ಹೋಗುವ ಆಶಯ ನಮ್ಮದು. ವೃಕ್ಷಥಾನ್ ಹೆರಿಟೇಜ್ ರನ್ ಮತ್ತೆ ಬಂದಿದೆ. ಬನ್ನಿ, ಎಲ್ಲರೂ ಜೊತೆಯಾಗಿ ಹೆಜ್ಜೆ ಹಾಕೋಣ ಎಂದು ಸಚಿವ ಎಂ.ಬಿ ಪಾಟೀಲ್ ಕರೆ ನೀಡಿದರು.

 

Share This Article
error: Content is protected !!
";