ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರುನಾಡಿಗೆ ಕೇಂದ್ರದಿಂದ ಅನುದಾನ ಬೇಕು, ಅನುಮೋದನೆ ಬೇಕು, ರಾಜಕೀಯ ಬೇಡ! ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಒತ್ತಾಯಿಸಿದ್ದಾರೆ.
ರಾಜ್ಯದಿಂದ ಆಯ್ಕೆಯಾಗಿರುವ ಬಿಜೆಪಿ ಸಂಸದರು ಮತ್ತು ಕೇಂದ್ರ ಮಂತ್ರಿಗಳು ನೀರಾವರಿ ವಿಷಯದಲ್ಲಿ ಕೇಂದ್ರದಿಂದ ನಮ್ಮ ರಾಜ್ಯಕ್ಕೆ ಆಗುತ್ತಿರುವ ಮಲತಾಯಿ ಧೋರಣೆಯ ವಿರುದ್ಧ ಧ್ವನಿ ಎತ್ತಬೇಕಿದೆ.
ರಾಜ್ಯ ಸರ್ಕಾರವನ್ನು ಟೀಕಿಸುವ ಬದಲು, ಕೇಂದ್ರದಿಂದ ನಮ್ಮ ನಾಡಿಗೆ ಸಿಗಬೇಕಾದ ಅನುದಾನ ಮತ್ತು ಅನುಮೋದನೆಗಳನ್ನು ತರುವ ಜವಾಬ್ದಾರಿಯನ್ನು ಬಿಜೆಪಿ ಸಂಸದರು ಹಾಗೂ ಮಂತ್ರಿಗಳು ನಿರ್ವಹಿಸಬೇಕು. ಪ್ರಧಾನಿಯವರನ್ನು ಮೆಚ್ಚಿಸುವ ಕೆಲಸವನ್ನು ಬಿಟ್ಟು, ಕರುನಾಡಿನ ಅಭಿವೃದ್ಧಿಗಾಗಿ ಕೆಲಸಗಳನ್ನು ಮಾಡಬೇಕಿದೆ ಎಂದು ಡಿಸಿಎಂ ಶಿವಕುಮಾರ್ ತಾಕೀತು ಮಾಡಿದ್ದಾರೆ.

