ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮತಗಳ್ಳತನ ಎಂದು ಹಾದಿ ಬೀದಿಯಲ್ಲಿ ಗಂಟಲು ಹರಿದುಕೊಂಡರೆ, ನ್ಯಾಯ ಸಿಗುತ್ತದಯೇ ಎಐಸಿಸಿ ಕಾಂಗ್ರೆಸ್ಸಿಗರೇ? ಎಂದು ಜೆಡಿಎಸ್ ತೀಕ್ಷ್ಣವಾಗಿ ಪ್ರಶ್ನಿಸಿದೆ.
ಸಂವಿಧಾನದ ಮೇಲೆ ನಂಬಿಕೆ ಇದ್ದರೇ, ಮೊದಲು ಕೋರ್ಟ್‌ಗೆ ಹೋಗಿ ದಾಖಲೆ ಸಲ್ಲಿಸಿ, ಮತಗಳ್ಳತನ ಸಾಬೀತು ಪಡಿಸಿ. #VoteChori ಎಂದು ಸ್ಟೇಜ್‌ಶೋ ಮಾಡುವ ಬದಲು ರಾಹುಲ್ ಗಾಂಧಿ, ಆರೋಪಕ್ಕೆ ಸಂಬಂಧಿಸಿದ ದಾಖಲೆಗಳೊಂದಿಗೆ ಪ್ರಮಾಣ ಪತ್ರವನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಲಿ ಎಂದು ಜೆಡಿಎಸ್ ತಾಕೀತು ಮಾಡಿದೆ.
ಮತಗಳ್ಳತನ ಆಗಿದೆ ಎಂಬ ರಾಹುಲ್‌ಗಾಂಧಿಯ ಆಧಾರ ರಹಿತ ಆರೋಪಕ್ಕೆ ಕಾಂಗ್ರೆಸ್‌ಪಕ್ಷವನ್ನೇ ಹೀನಾಯವಾಗಿ ಸೋಲಿಸಿ ಬಿಹಾರದ ಮತದಾರರು ಕಪಾಳ ಮೋಕ್ಷ ಮಾಡಿದ್ದಾರೆ ಎಂದು ಜೆಡಿಎಸ್ ದೂರಿದೆ.
ದೇಶದಲ್ಲಿ ಮತ ಕಳ್ಳತನ ವಿರೋಧಿಸಿ ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ವತಿಯಿಂದ ಶನಿವಾರ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಲಾಯಿತು. ಇದರ ವಿರುದ್ಧ ಜೆಡಿಎಸ್ ಟಾಂಗ್ ನೀಡಿ ಹೇಳಿಕೆ ನೀಡಿದೆ.

