ಸಾಲುಮರದ ತಿಮ್ಮಕ್ಕ ಹೆಸರಲ್ಲಿ ಗಿಡನೆಡುವ ಆಂದೋಲನಕ್ಕೆ ಸರ್ಕಾರ ಮುಂದಾಗಲಿ

News Desk

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ತನ್ನ ಬದುಕಿನುದ್ದಕ್ಕೂ ಸುಮಾರು ಐದು ಸಾವಿರ ಸಸಿಗಳನ್ನು ನೆಟ್ಟು ಅವುಗಳನ್ನು ಮಕ್ಕಳಂತೆ ಪೋಷಿಸಿ
, ಹಲವಾರು ಪ್ರತಿಷ್ಠಿತ ಪ್ರಶಸ್ತಿಗೆ ಪಾತ್ರರಾದ ಸಾಲುಮರದ ತಿಮ್ಮಕ್ಕನ ನಿಧನ ಅಘಾತತಂದಿದೆ. ವಿಶೇಷವಾಗಿ ತನ್ನೆಲ್ಲಾ ಬದುಕನ್ನು ಗಿಡಗಳ ಸಂರಕ್ಷಣೆಗೆ ಮುಡಿಪಾಗಿಟ್ಟ ಸಾಲುಮರದ ತಿಮ್ಮಕ್ಕ ಎಲ್ಲರಿಗೂ ಮಾದರಿ ಎಂದು ಕರ್ನಾಟಕ ರಾಜ್ಯರೈತ ಸಂಘ ಹಾಗೂ ಹಸಿರು ಸೇನೆ(ಪ್ರೊ.ಬಣ)ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿವೀರಣ್ಣ ತಿಳಿಸಿದರು. ಅವರು ಭಾನುವಾರ ಚಿತ್ರದುರ್ಗ ರಸ್ತೆಯ ಸಾಲುಮರದತಿಮ್ಮಕ್ಕ ಉದ್ಯಾನವನದಲ್ಲಿ ರೈತ ಸಂಘ ಹಾಗೂ ಕೆಆರ್‌ಎಸ್‌ಪಕ್ಷದ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಸಾಲುಮರದ ತಿಮ್ಮಕ್ಕ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಸುಮಾರು ಐವತ್ತು ವರ್ಷಗಳಿಂದ ಗಿಡಗಳನ್ನು ನೆಟ್ಟು ಪೋಷಿಸುವ ಕಾಯಕ ಪ್ರಾರಂಭಿಸಿದ ತಿಮ್ಮಕ್ಕ ತನ್ನ ಜೀವನ ಕೊನೆಉಸಿರು ಇರುವವರೆಗೂ ಗಿಡಗಳಸಂರಕ್ಷಣೆಯಲ್ಲಿ ತೊಡಗಿದ್ದರು. ಅವರಲ್ಲಿದ್ದ ಪರಿಸರ ಪ್ರೇಮ, ಅಭಿಮಾನ, ಪ್ರೀತಿಗೆ ಬೆಲೆಕಟ್ಟಲು ಸಾಧ್ಯವಿಲ್ಲ. ಗ್ರಾಮೀಣ ಭಾಗದಲ್ಲಿ ಜನಿಸಿ ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ವಿಶೇಷವಾಗಿ ಸಾರ್ವಜನಿಕ ರಸ್ತೆಗಳ ಎರಡೂ ಬದಿಯಲ್ಲಿ ಯಾರಸಹಾಯವನ್ನು ಪಡೆಯದೆ ತನ್ನಷ್ಟಕ್ಕೆ ತಾನೇಗಿಡಗಳನ್ನು ನೆಟ್ಟು ಪೋಷಿಸಿದಳು. ಪ್ರಾರಂಭದಲ್ಲಿ ತಿಮ್ಮಕ್ಕನ ಕಾರ್ಯ ಕೆಲವರಿಗೆ ಸೋಜಿಗವೆನ್ನಿಸಿದರು ಕಾಲಕ್ರಮೇಣ ಸಾಲುಮರದ ತಿಮ್ಮಕ್ಕ ಮಾಡಿದ ಮಹಾನ್‌ಕಾರ್ಯಕ್ಕೆ ಎಲ್ಲರೂ ತಲೆದೂಗಬೇಕಾಯಿತು.

- Advertisement - 

ಸರ್ಕಾರ ಸಾಲುಮರದ ತಿಮ್ಮಕ್ಕ ಹೆಸರಿನಲ್ಲಿ ರಾಜ್ಯದೆಲ್ಲೆಡೆ ಉದ್ಯಾನವನಗಳನ್ನು ನಿರ್ಮಿಸಿ ಅವರ ಹೆಸರನ್ನು ಶಾಶ್ವತವಾಗಿಡಬೇಕು. ಸಾಲುಮರದ ತಿಮ್ಮಕ್ಕ ರೈತ ಸಮುದಾಯಕ್ಕೆ ಮಾದರಿಯಾಗಿದ್ಧಾರೆ. ಕಾರಣ, ಕೃಷಿಯನ್ನು ಆಧರಿಸಿ ಬದುಕುತ್ತಿರುವ ರೈತರಿಗೆ ಮರಗಿಡಗಳೇ ಆಧಾರ. ಅದ್ದರಿಂದ ಸಾಲುಮರದ ತಿಮ್ಮಕ್ಕ ಶಾಶ್ವತವಾಗಿ ಎಲ್ಲರ ನೆನಪಿನಲ್ಲೂ ಉಳಿಯುತ್ತಾರೆಂದರು.

ಕೆಆರ್‌ಎಸ್ ಪಕ್ಷದ ರಾಜ್ಯ ಕಾರ್ಯದರ್ಶಿ ನಗರಂಗೆರೆ ಮಹೇಶ್ ಮಾತನಾಡಿ, ಸಾಲುಮರದ ತಿಮ್ಮಕ್ಕನವರಿಗೆ ನಾವು ಕೇವಲ ಶ್ರದ್ಧಾಂಜಲಿ ಅರ್ಪಿಸಿದರೆ ಸಾಲದು ಅವರು ತಮ್ಮ ಜೀವಿತಾವಧಿಯಲ್ಲಿ ಐದು ಸಾವಿರ ಗಿಡಗಳನ್ನು ನೆಟ್ಟುಪೋಷಣೆ ಮಾಡಿದ್ಧಾರೆ. ನಾವು ಕಡೆಪಕ್ಷ ವರ್ಷಕ್ಕೆ ಒಂದುಗಿಡವಾದರೂ ನೆಟ್ಟುಪೋಷಿಸುವ ಕಾರ್ಯವನ್ನು ಮಾಡಬೇಕು.

- Advertisement - 

ನಮ್ಮ ಮನೆಗಳಲ್ಲಿ ಆಗುವ ಹಬ್ಬ, ಉತ್ಸವ ಹಾಗೂ ಇನ್ನಿತರ ಸಮಾರಂಭಗಳಲ್ಲಿ ಗಿಡಗಳನ್ನು ನೆಡುವಪರಿಪಾಠವನ್ನು ಬೆಳೆಸಿಕೊಳ್ಳಬೇಕಿದೆ. ಸರ್ಕಾರ ಅರಣ್ಯ ಇಲಾಖೆ ಸಹಯೋಗದೊಂದಿಗೆ ಸಾಲುಮರದತಿಮ್ಮಕ್ಕ ಹೆಸರಿನಲ್ಲಿ ಗಿಡನೆಡುವ ವಿಶೇಷ ಅಂದೋಲನ ಕಾರ್ಯಕ್ರಮವನ್ನು ರೂಪಿಸಿದರೆ ಮಾತ್ರ ಸಾಲುಮರದ ತಿಮ್ಮಕ್ಕನವರ ಕಾರ್ಯಕ್ಕೆ ಹೆಚ್ಚುಗೌರವ ಸಲ್ಲಿಸಿದಂತಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ಅಧ್ಯಕ್ಷ ರಾಜಣ್ಣ, ಉಪಾಧ್ಯಕ್ಷ ತಿಪ್ಪೇಸ್ವಾಮಿ, ಚಿಕ್ಕಹಳ್ಳಿತಿಮ್ಮಣ್ಣ, ಚಿಕ್ಕಣ್ಣ, ಸಣ್ಣಪಾಲಯ್ಯ, ಮೈರಾಡಚಂದ್ರಣ್ಣ, ಉಳ್ಳಾರ್ತಿತಿಪ್ಪೇಸ್ವಾಮಿ, ಗುರುಮೂರ್ತಿ, ಶ್ರೀನಿವಾಸ್, ಈರಣ್ಣಮುರುಳಿ, ಮಂಜುನಾಥ ಮುಂತಾದವರು ಭಾಗವಹಿಸಿದ್ದರು.

 

 

Share This Article
error: Content is protected !!
";