ಬಸವಣ್ಣನವರ ಆತ್ಮ ಜ್ಯೋತಿ ಬೆಳಗಿಸಿದವರು ಮುರುಘೇಂದ್ರ ಶಿವಯೋಗಿಗಳು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಣ್ಣ ಬಸವಣ್ಣನವರ ಆತ್ಮ ಜ್ಯೋತಿಯನ್ನು ಬೆಳಗಿಸಿದವರು ಅಥಣಿಯ ಮುರುಘೇಂದ್ರ ಶಿವಯೋಗಿಗಳು” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದರು.

ಬೆಂಗಳೂರಿನ ವಿಜಯನಗರದ ಹಂಪಿನಗರ ಕ್ರೀಡಾಂಗಣದಲ್ಲಿ ಅಥಣಿಯ ಸುಕ್ಷೇತ್ರ ಶ್ರೀ ಗಚ್ಚಿನ ಮಠ ಹಾಗೂ ರಾಷ್ಟ್ರೀಯ ಬಸವ ತತ್ವ ಪರಿಷತ್ತಿನ ವತಿಯಿಂದ ಆಯೋಜಿಸಿದ್ದ ಬಸವೋತ್ಸವ ಹಾಗೂ ಅಥಣಿ ಶ್ರೀ ಮುರುಘೇಂದ್ರ ಶಿವಯೋಗಿಗಳ ಜಯಂತೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

- Advertisement - 

ವಚನ ಸಾಹಿತ್ಯದ ಮೂಲಕ ಬಸವಾದಿ ಶರಣರ ಸಂದೇಶಗಳನ್ನು, ಬದುಕುವ ಮಾರ್ಗದ ಸೂತ್ರಗಳನ್ನು ಜಗತ್ತಿಗೆ ತಲುಪಿಸುವ ಮಹಾನ್ ಕಾರ್ಯವನ್ನು ಮಠಮಾನ್ಯಗಳು ಮಾಡಿಕೊಂಡು ಬಂದಿವೆ. ಅದರಲ್ಲೂ ಅಥಣಿ  ಶ್ರೀ ಮುರುಘೇಂದ್ರ ಶ್ರೀಗಳು ಬಸವ ತತ್ವದ ಸಂದೇಶಗಳ ಮಹಾ ರಥವನ್ನು ಎಳೆಯಲೆಂದೇ ಈ ಭೂಮಿಗೆ ಅವತರಿಸಿ ಬಂದವರು, ಅನೇಕರ ಬಾಳಿಗೆ ತಮ್ಮ ದರ್ಶನಿಕತೆಯಿಂದ ಬೆಳಕಾಗಿ ಮಾರ್ಗದರ್ಶನ ನೀಡಿದವರು.

ಈ ನಿಟ್ಟಿನಲ್ಲಿ ಅಥಣಿಯ ಸುಕ್ಷೇತ್ರ ಶ್ರೀ ಗಚ್ಚಿನ ಮಠ ಹಾಗೂ ರಾಷ್ಟ್ರೀಯ ಬಸವ ತತ್ವ ಪರಿಷತ್ತು ಪೂಜ್ಯ ಶ್ರೀ ಮುರುಘೇಂದ್ರ ಶಿವಯೋಗಿಗಳ ಹೆಸರಿನಲ್ಲಿ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಬಸವ ತತ್ವದ ಪ್ರತಿಪಾದನೆ, ವಚನ ಸಾಹಿತ್ಯದ ಶ್ರೇಷ್ಠತೆ ಹಾಗೂ ಮನುಷ್ಯನ ಬದುಕಿಗೆ ಬೇಕಾದಂತಹ ಆಧ್ಯಾತ್ಮಿಕ ಚಿಂತನೆಯನ್ನು ಉಣಬಡಿಸುವ ಕೆಲಸ ಮಾಡುತ್ತಿರುವುದು ನಮ್ಮ ಸಮಾಜಕ್ಕೆ ಹಾಗೂ ಈ ನಾಡಿಗೆ ಅತ್ಯಂತ ಸೌಭಾಗ್ಯದ ಹಾಗೂ ಕೃತಜ್ಞತೆ ಸಲ್ಲಿಸುವ ಮಹಾನ್ ಕಾರ್ಯವಾಗಿದೆ.

- Advertisement - 

ಈ ಸಂದರ್ಭದಲ್ಲಿ ಅಥಣಿ ಗಚ್ಚಿನ ಮಠದ ಪರಮಪೂಜ್ಯ ಶಿವಬಸವ ಶ್ರೀಗಳು, ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಶ್ರೀಗಳು, ವಚನಾನಂದ ಶ್ರೀಗಳು, ಶ್ರೀ ನಿರಂಜನಾನಂದಪುರಿ ಶ್ರೀಗಳು, ಡಾ.ಬಸವ ಕುಮಾರ ಶ್ರೀಗಳು, ಮಹಾಂತ ಶ್ರೀಗಳು, ಮಾದಾರ ಚೆನ್ನಯ್ಯ ಶ್ರೀಗಳು, ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು, ಸಿದ್ದರಾಮ ತೋಂಟದಾರ್ಯ ಶ್ರೀಗಳು, ಹರಗುರು ಚರಮೂರ್ತಿಗಳು, ಶಾಸಕರಾದ ಕೃಷ್ಣಪ್ಪ, ಮುಖಂಡರಾದ ರವೀಂದ್ರ, ಪುಟ್ಟರಾಜು, ಉಮೇಶ್ ಶೆಟ್ಟಿ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.

 

Share This Article
error: Content is protected !!
";