ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಗ್ರಾಮಾಂತರ ದೊಡ್ಡಬೆಳವಂಗಲ ಹೋಬಳಿ ಹುಲ್ಲಕುಂಟೆ ಸರ್ಕಾರಿ ಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನಾ ಹಾಗು ಹಳೆಯ ವಿದ್ಯಾರ್ಥಿಗಳು ಸ್ನೇಹ ಸಮ್ಮಿಲನ ಹಾಗು ರಕ್ತದಾನ ಕಾರ್ಯಕ್ರಮ ಅಯೋಜನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಹುಲ್ಲುಕುಂಟೆ ಸರ್ಕಾರಿ ಶಾಲೆಯ ನಿವೃತ್ತ ಶಿಕ್ಷಕ ಕೆ.ಎನ್.ಆಂಜಿನಪ್ಪ ಮಾತನಾಡಿ ಸರ್ಕಾರಿ ಶಾಲೆ ಉಳಿಯಬೇಕಾದರೆ ದಾನಿಗಳು ಹಾಗು ಕನ್ನಡದ ಅಭಿಮಾನ ದಿಂದ ಸಾಧ್ಯ ಅನ್ಯ ಭಾಷೆಗಳಿಗೆ ಜೋತು ಬಿಳುವುದು ಬಿಟ್ಟು ಕನ್ನಡ ಭಾಷಾಭಿಮಾನವು ಕನ್ನಡ ಭಾಷೆಯನ್ನು ಪ್ರೀತಿಸುವ ಮತ್ತು ಗೌರವಿಸುವ ಮನೋಭಾವವಾಗಿದೆ.
ಇದು ಕನ್ನಡ ಭಾಷೆಯ ಬಗ್ಗೆ ಹೆಮ್ಮೆ ಪಡುವ, ಅದರ ಬಳಕೆಯನ್ನು ಉತ್ತೇಜಿಸುವ ಮತ್ತು ಉಳಿಸಿಕೊಳ್ಳುವ ಆಸಕ್ತಿಯನ್ನು ಒಳಗೊಂಡಿದೆ. ಉದಾಹರಣೆಗೆ, ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಪ್ರೋತ್ಸಾಹಿಸುವುದು, ಕನ್ನಡದಲ್ಲಿ ಆಡಳಿತವನ್ನು ಸುಧಾರಿಸುವುದು ಮತ್ತು ಕನ್ನಡವನ್ನು ದೈನಂದಿನ ಜೀವನದಲ್ಲಿ ಬಳಸುವುದನ್ನು ಬೆಂಬಲಿಸುವುದು ಭಾಷಾಭಿಮಾನವನ್ನು ಹೆಚ್ಚುಸುತ್ತೆ ಎಂದರು.
ನಂತರ ನಿವೃತ್ತ ಶಿಕ್ಷಕ ಸರ್ದಾರ್ ಅಹಮದ್ ನಮ್ಮ ಶಾಲೆಯಲ್ಲಿ 1987ರಿಂದ ಇಲ್ಲಿಯವರೆಗೆ ಕರ್ತವ್ಯ ನಿರ್ವಹಿಸಿದ ಸುಮಾರು 50 ಕ್ಕೂ ಹೆಚ್ಚಿನ ಶಿಕ್ಷಕರನ್ನು ಗೌರವಿಸುವ ಕಾರ್ಯಕ್ರಮ ಶ್ಲಾಘನಾರ್ಹ ಎಂದು ತಿಳಿಸಿದರು.
ಈಗ ವಿದ್ಯಾಭ್ಯಾಸ ಮಾಡುತ್ತಿರುವ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ನಗರೂರು ಬಿ.ಜಿ.ಎಸ್ ಆಸ್ಪತ್ರೆಯ ವತಿಯಿಂದ ಹಳೆಯ ವಿದ್ಯಾರ್ಥಿಗಳಿಂದ ರಕ್ತದಾನ ಶಿಭಿರವನ್ನು ಆಯೋಜಿಸಿದ್ದು ಉತ್ತಮ ಬೆಳವಣೆಗೆ ಎಂದರು.
ಹಿರಿಯ ವಿದ್ಯಾರ್ಥಿ ಹಾಗೂ ಉದ್ಯಮಿ ಪ್ರಸನ್ನ ಕುಮಾರ್ ಮಾತನಾಡಿ, ನಗರೂರಿನ ಬಿ.ಜಿ.ಎಸ್ ಆಸ್ಪತ್ರೆಯ ವೈದ್ಯರು ಹುಲುಕುಂಟೆ ಹಾಗೂ ಸುತ್ತಮುತ್ತಲಿನ ಗ್ರಾಮಗಳ 250 ಕ್ಕೂ ಹೆಚ್ಚಿನ ಜನರಿಗೆ ಆರೋಗ್ಯ ತಪಾಸಣೆ ಮಾಡಿ ಔಷದ ವಿತರಿಸಲಾಯಿತು.
ಹಳೆಯ ವಿದ್ಯಾರ್ಥಿಗಳಾದ ಅನುರಾಧ, ಗಂಗಮ್ಮ, ದಿನೇಶ, ಸುಧಾಮಣಿ, ಸುಜಾತ, ಚಿಕ್ಕಲಿಂಗಮ್ಮ, ಚಂದ್ರಾವತಿ, ಉಷಾದೇವಿ ರೇಣುಕಾ ಸೇರಿದಂತೆ 100 ಕ್ಕೂ ಹೆಚ್ಚು ಹೆಚ್ಚು ವಿದ್ಯರ್ಥಿಗಳು ಎಲ್ಲಾ ಶಿಕ್ಷಕರನ್ನೂ ಹುಲುಕುಕುಂಟೆ ಬಸ್ ನಿಲ್ದಾಣದಿಂದ ಬೇಟೆ ರಂಗನಾಥ ಸ್ವಾಮಿ ದೇವಸ್ಥಾನದವರೆಗೆ ಹಾಗೂ ಬೇಟೆ ರಂಗನಾಥ ಸ್ವಾಮಿ ದೇವಸ್ಥಾನದಿಂದ ಶಾಲಾ ಆವರಣದವರೆಗೆ ವೀರಗಾಸೆ ಮತ್ತು ಕಲಾ ತಂಡದೊಂದಿಗೆ ಪೂರ್ಣ ಕುಂಭ ಸ್ವಾಗತ ಮಾಡಿ ಮೆರವಣಿಗೆ ಮೂಲಕ ಕರೆದೊಯ್ಯಲಾಯಿತು.
ಇದೇ ಸಂದರ್ಭದಲ್ಲಿ ಹಳೆಯ ವಿದ್ಯಾರ್ಥಿಗಳು ತಾವು ಓದಿದ ಶಾಲೆಗೆ ಕೈಲಾದ ನೆರವನ್ನು ಪ್ರತಿವರ್ಷ ನೀಡಲು ನಿರ್ಣಯ ಮಾಡಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಬಿ.ಜಿ.ಎಸ್.ಆಸ್ಪತ್ರೆಯ ಸಾಮಾನ್ಯ ರೋಗ ತಜ್ಞರಾದ ಡಾ. ಕಾರ್ತಿಕ್, ಸ್ತ್ರೀರೋಗದ ಡಾ. ಯೋಗಾಂಜನೇಯ, ಕೀಲು ಮೂಳೆ ತಜ್ಞ ಡಾ. ಕಲ್ಯಾಣ್, ನೇತ್ರ ಚಿಕಿತ್ಸಾ ತಜ್ಞ ಡಾ. ಸಂಜಯ್, ಸುನಿಲ್ , ಮಕ್ಕಳ ತಜ್ಞರು ಡಾ. ಪೂಜಾ, ಕಿವಿ ಮೂಗು ಗಂಟಲು ತಜ್ಞರು ಮತ್ತು ಸಾರ್ವಜನಿಕ ಸಂಪರ್ಕ ಅಧಿಕಾರಿ ಸುಹಾಸ್, ಸಂಜಯ್, ಗಂಗನರಸಯ್ಯ, ಮನು, ಶಿವರಾಜು ಮತ್ತು ಶುಶ್ರೂಷಕ ಸಂತೋಷ್ ಮತ್ತು ಮುಂತಾದವರು ಹಾಜರಿದ್ದರು.

