ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ದೊಡ್ಡಬಳ್ಳಾಪುರ ದೇವಾಲಯಗಳ ಸ್ವಚ್ಚತಾ ಸಮಿತಿಯಿಂದ ದೊಡ್ಡಬಳ್ಳಾಪುರ ನಗರಕ್ಕೆ ಹೊಂದಿಕೊಂಡಿರುವ ನಂದಿಮೋರಿ ಬಳಿಯಿರುವ ಶ್ರೀ ಬೊಮ್ಮಲಿಂಗೇಶ್ವರ ದೇವಾಲಯಕ್ಕೆ ಹೊಂದಿಕೊಂಡಿರುವ ಕಲ್ಯಾಣಿಯ ಸ್ವಚ್ಚತಾ ಕಾರ್ಯ ನಡೆಯಿತು.
ಕಡೆಯ ಕಾರ್ತಿಕ ಸೋಮವಾರದ ಪ್ರಯುಕ್ತ ಈ ದೇವಾಲಯದಲ್ಲಿ ವಿಶೇಷಪೂಜೆ ನಡೆಯಲಿದ್ದು ಕಲ್ಯಾಣಿಯ ಬಳಿ ಗಂಗಾ ಪೂಜೆ ಹಾಗೂ ಲಕ್ಷದೀಪೋತ್ಸವ ಕಾರ್ಯಕ್ರಮ ನಡೆಯಲಿದೆ. ಸಹಸ್ರಾರು ಭಕ್ತರು ಈ ದೇವಾಲಯಕ್ಕೆ ಆಗಮಿಸಲಿದ್ದು ಬಂದಂತಹ ಭಕ್ತಾದಿಗಳಿಗೆ ಅನ್ನಪ್ರಸಾಧವಿರುತ್ತದೆ ಎಂದು ಮಡಿವಾಳ ಸಂಘದ ತಾಲ್ಲೂಕು ಅಧ್ಯಕ್ಷರಾದ ಶಂಕರ್ ತಿಳಿಸಿದರು.
ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಇರುವ ಕಾರಣ ದೇವಾಲಯಗಳ ಸ್ವಚ್ಚತಾ ಸಮಿತಿಗೆ ದೇವಾಲಯದ ಟ್ರಸ್ಟ್ ನ ಮಾಜಿ ಅಧ್ಯಕ್ಷರಾದ ರಂಗಸ್ವಾಮಿ ಹಾಗೂ ಶಂಕರ್ ಸ್ವಚ್ಚತೆಗೆ ಮನವಿ ಮಾಡಿದ್ದ ಹಿನ್ನಲೆಯಲ್ಲಿ ದೇವಾಲಯದ ಕಲ್ಯಾಣಿ ಸ್ವಚ್ಚತಾ ಕಾರ್ಯಕ್ಕೆ ಮುಂದಾಗಿದ್ದು ಕಳೆದ ಮೂರು ತಿಂಗಳಿಂದ ದೊಡ್ಡಬಳ್ಳಾಪುರದ ಹಲವೆಡೆ ತಂಡವು ಸತತವಾಗಿ ಶ್ರಮಧಾನ ಮಾಡುತ್ತಾ ಬಂದಿದೆ. ಮುಂದಿನ ದಿನಗಳಲ್ಲೂ ಸಹ ಸ್ವಚ್ಚತಾ ಕಾರ್ಯ ಮುಂದುವರಿಸಲಿದ್ದು ದೊಡ್ಡಬಳ್ಳಾಪುರ ತಾಲ್ಲೂಕಿನ ಯಾವುದಾದರೂ ಗ್ರಾಮ ಅಥವಾ ನಗರದಲ್ಲಿ ಸ್ವಚ್ಚತೆಯ ಅವಶ್ಯವಿದ್ದರೆ 9886685458 ಕೆಂಪೇಗೌಡ ಇವರಿಗೆ ತಿಳಿಸಬಹುದಾಗಿದೆ.
ಸ್ವಚ್ಚತಾ ಕಾರ್ಯದಲ್ಲಿ ದೇವಾಲಯದ ಮುಖಂಡರಾದ ಶಂಕರ್,ಆನಂದ್ ಬಾಲಾಜಿ, ಶಿವಕುಮಾರ್, ರಘು, ಚಂದ್ರು, ಹಾಗೂ ಇನ್ನಿತರರು ಹಾಗೂ ದೇವಾಲಯಗಳ ಸ್ವಚ್ಚತಾ ಸಮಿತಿಯ ಗಂಗರಾಜು, ಶ್ಯಾಮ್, ಕಿರಣ್, ರಾಜೇಶ್, ವಿಜಯಕುಮಾರ್, ಲಕ್ಷ್ಮಿ ಬೈರಸಂದ್ರಪಾಳ್ಯ, ರಾಮಸ್ವಾಮಿ, ಹಳ್ಳಿ ರೈತ ಅಂಬರೀಶ್ ಸೇರಿದಂತೇ ಬಹಳಷ್ಟು ಶ್ರಮದಾನಿಗಳು ಪಾಲ್ಗೊಂಡಿದ್ದರು.

