ಜನತಾ ಪರಿವಾರದ ಹಿರಿಯರಾದ ಕಮಲಾದೇವಿ ಪ್ರೇಮರಾಜ್ ಇನ್ನಿಲ್ಲ
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ನಗರದ ಹಳೆ ಅಂಚೆ ಕಚೇರಿ ರಸ್ತೆಯ ಮರ್ಚೆಂಟ್ಸ ಬ್ಯಾಂಕ್ ಮುಖ್ಯ ಕಚೇರಿ ಹತ್ತಿರದ ನಿವಾಸಿ ಕಮಲಾ ದೇವಿ ಪ್ರೇಮ್ ರಾಜ್ ಠಾಕೂರ್(98) ಅವರು ಭಾನುವಾರ ಸಂಜೆ ನಿಧನರಾದರು.
ಮೃತರಿಗೆ ಪುತ್ರ ಬಿಜೆಪಿ ಮುಖಂಡರಾದ ವಕೀಲ ಲೀಲಾಧರ ಠಾಕೂರ್ ಸೇರಿದಂತೆ 6 ಜನ ಮಕ್ಕಳಲ್ಲಿ, 5 ಗಂಡು, 1 ಹೆಣ್ಣು ಮಕ್ಕಳಿದ್ದಾರೆ. ಮೃತರು ಜನತಾ ಪರಿವಾರದ ಮುಖಂಡರಾಗಿದ್ದು
ರಾಮಕೃಷ್ಣ ಹೆಗಡೆ ಲೀಲಾವತಿ ಪ್ರಸಾದ್, ಬಿ.ಎಲ್ ಗೌಡ, ಡಿ. ಮಂಜುನಾಥ್, ಏಕಾಂತಯ್ಯ ಜೊತೆ ಸಮಾಜ ಸೇವೆ ಮಾಡಿದ್ದಾರೆ. ರಜಪೂತ ಸಮಾಜದವರಾಗಿದ್ದಾರೆ.
ಸೋಮವಾರ ಮಧ್ಯಾಹ್ನ12.30ಕ್ಕೆ ನಗರದ ಮುಕ್ತಿಧಾಮದಲ್ಲಿ ಅಂತ್ಯ ಸಂಸ್ಕಾರ ಮಾಡಲಾಗುತ್ತದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

