ಚಂದ್ರವಳ್ಳಿ ನ್ಯೂಸ್, ಬಳ್ಳಾರಿ:
ಹೆಚ್ಎಲ್ ಸಿ ಕಾಲುವೆ ಬಳಿ ಕಾರು ತೊಳೆಯುವಾಗ ಆಕಸ್ಮಿಕವಾಗಿ ಕಾಲುವೆಗೆ ಜಾರಿದ ಕಾರು ಕೊಚ್ಚಿ ಹೋಗಿರುವ ಘಟನೆ ಬಳ್ಳಾರಿ ಹೊರವಲಯದ ಅಲ್ಲಿಪುರ ಬಳಿಯ ತುಂಗಭದ್ರಾ ಜಲಾಶಯದ ಕಾಲುವೆಯಲ್ಲಿ ಜರುಗಿದೆ.
ಕಾರಿನಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳೀಯರು ಮತ್ತು ಅಗ್ನಿಶಾಮಕ ದಳದ ಸಹಾಯದಿಂದ ಕಾಲುವೆಯಲ್ಲಿ ಕೊಚ್ಚು ಹೋಗುತ್ತಿದ್ದ ಕಾರನ್ನು ಹೊರತೆಗೆಯಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ದೃಷ್ಯ ಸಖತ್ ವೈರಲ್ ಆಗಿದೆ.

