ಚಂದ್ರವಳ್ಳಿ ನ್ಯೂಸ್, ಶಿರಾ:
ಗೋಧಿ ತುಂಬಿದ ಲಾರಿ ಪಲ್ಟಿಯಾಗಿದ್ದು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ಗೋಧಿ ಎತ್ತಿಕೊಳ್ಳಲು ಸಾರ್ವಜನಿಕರು ಮುಗಿ ಬಿದ್ದಿರುವ ಘಟನೆ ತುಮಕೂರು ಜಿಲ್ಲೆ ಶಿರಾ ತಾಲೂಕಿನ ಹುಳಿಯಾರು ರಸ್ತೆಯ ಹುಯಿಲ್ ದೊರೆ ಸೇತುವೆ ಬಳಿ ಜರುಗಿದೆ.
ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಗೋಧಿ ರಸ್ತೆ ತುಂಬ ಚೆಲ್ಲಿದೆ. ಅಪಘಾತದ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಚೀಲಗಳೊಂದಿಗೆ ಬಂದು ಲಾರಿಯಿಂದ ಬಿದ್ದ ಗೋಧಿಯನ್ನು ಬಾಚಿಕೊಂಡು ಹೋಗಿದ್ದಾರೆ.
ಕೆಲವರಂತೂ ಗೋಧಿಯನ್ನು ಬಾಚಿ ಚೀಲದಲ್ಲಿ ತುಂಬಿಕೊಂಡು ಹೋಗಿದ್ದಾರೆ. ಈ ಘಟನೆ ಶಿರಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

