ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಈ ಸುಂದರ, ಅರ್ಥಪೂರ್ಣ ಮರಳುಶಿಲ್ಪ ರಚಿಸಿದ ಕಲಾವಿದರಿಗೆ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ಧನ್ಯವಾದಗಳನ್ನು ತಿಳಿಸಿದ್ದಾರೆ.
ಸಮರ್ಪಣಾ ಭಾವದಿಂದ ದುಡಿಮೆ ಮಾಡುವ ಅಸಂಖ್ಯಾತ ಕಾರ್ಯಕರ್ತರು, ಅಭಿಮಾನಿಗಳಿಂದಲೇ ಜೆಡಿಎಸ್ ಪಕ್ಷವು ಹೆಮ್ಮರವಾಗಿ ಬೆಳೆದು ಸಾರ್ಥಕ ಪಯಣದೊಂದಿಗೆ ರಜತ ಮಹೋತ್ಸವ ಸಂಭ್ರಮಕ್ಕೆ ಅಣಿಯಾಗಿದೆ.
ಪಕ್ಷದ ಮೇಲೆ ನಿಮ್ಮ ಪ್ರೀತಿ, ವಿಶ್ವಾಸ ಹೀಗೆಯೇ ಇರಲಿ ಎಂದು ಜನತಾದಳ ಜಾತ್ಯತೀತ ರಾಜ್ಯಾಧ್ಯಕ್ಷರು ಹಾಗೂ ಕೇಂದ್ರ ಸಚಿವ ಕುಮಾರಸ್ವಾಮಿ ಕೋರಿದ್ದಾರೆ.

