ಕೈಗಾರಿಕೋದ್ಯಮಿಗಳಿಗೆ ಆರ್ಥಿಕ ಸಾಕ್ಷರತೆ ಅಗತ್ಯ- ಜೆಡಿ ಆನಂದ್

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ವಿಶ್ವ ಬ್ಯಾಂಕ್‍ನ ನೆರವಿನೊಂದಿಗೆ ಭಾರತ ಸರ್ಕಾರದ ನೇತೃತ್ವದಲ್ಲಿ RAMP ಯೋಜನೆಯಡಿ (Raising and Accelerating MSME Performance)  ಕಾರ್ಯಕ್ರಮಗಳನ್ನು ದೇಶಾದ್ಯಂತ ಕಾರ್ಯಗತಗೊಳಿಸಿದ್ದು, ಹಾಲಿ ಕೈಗಾರಿಕೋದ್ಯಮಿಗಳಿಗೆ ಹಾಗೂ ಭಾವಿ ಉದ್ಯಮದಾರರಿಗೆ ತಾಂತ್ರಿಕ ಸಾಮರ್ಥ್ಯ ವ್ಯದ್ಧಿಸುವುದು,

ತಂತ್ರಜ್ಞಾನ ಅಳವಡಿಕೆ, ಮಾರುಕಟ್ಟೆ ಪ್ರವೇಶಿಸುವಲ್ಲಿ ಸಹಾಯ ಮತ್ತು ಆರ್ಥಿಕ ಸಾಕ್ಷರತೆಯಲ್ಲಿ ಮಾರ್ಗದರ್ಶನ ನೀಡುವ ಕಾರ್ಯಕ್ರಮವಾಗಿದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಬಿ.ಆನಂದ್ ಹೇಳಿದರು.

- Advertisement - 

ನಗರದ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರ ಕಚೇರಿಯಲ್ಲಿ ಸೋಮವಾರ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಟೆಕ್ಸಾಕ್, ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ಕೆಸಿಟಿಯು ಸಂಯುಕ್ತಾಶ್ರಯದಲ್ಲಿ ಜರುಗಿದ ಕೇಂದ್ರ ಸರ್ಕಾರದ ಯೋಜನೆಯಾದ RAMP BUSINESS DEVELOPMENT SERVICE PROVIDER (BDSP) ಯೋಜನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೇಂದ್ರ ಸರ್ಕಾರದ ಆರ್‍ಎಎಂಪಿ ಯೋಜನೆಯ ಸದುಪಯೋಗವನ್ನು ಎಲ್ಲ ಉದ್ಯಮಿದಾರರು ಪಡೆದುಕೊಳ್ಳಬೇಕು ಎಂದು ಕೈಗಾರಿಕೋದ್ಯಮಿಗಳಿಗೆ ಸಲಹೆ ನೀಡಿದರು.

- Advertisement - 

ಜಿಲ್ಲಾ ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಜಿ.ಡಿ.ಕೆಂಚವೀರಪ್ಪ ಮಾತನಾಡಿ, ಸರ್ಕಾರವು ಹಾಲಿ ಕೈಗಾರಿಕೋದ್ಯಮಿಗಳ ಮತ್ತು ಭಾವಿ ಕೈಗಾರಿಕೋದ್ಯಮಿಗಳ ಕಾರ್ಯಕ್ಷಮತೆ ಸುಧಾರಿಸಲು, ಬ್ಯಾಂಕುಗಳಿಂದ ಸಾಲ ಸೌಲಭ್ಯಗಳನ್ನು ಪಡೆದು ಉದ್ಯಮ ಸ್ಥಾಪಿಸುವಲ್ಲಿ ಉತ್ತೇಜಿಸುವುದು,

ನೆರವು ನೀಡುವುದು ಈ ಯೋಜನೆಯ ಮೂಲ ಉದ್ದೇಶ ಹಾಗೂ ಈ ಕಾರ್ಯಕ್ರಮದ ಪ್ರಮುಖ ಅಂಶವಾಗಿದೆ. ಇಂತಹ ಯೋಜನೆಗಳ ಲಾಭಗಳನ್ನು ಪಡೆದುಕೊಳ್ಳಬೇಕೆಂದು ಭಾಗವಹಿಸಿದ ಉದ್ಯಮಿದಾರರಿಗೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಸಿಡಾಕ್ ಉಪ ನಿರ್ದೇಶಕ ಶಿವಾನಂದ ಏಲಿಗಾರ, ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕ ಬಿ.ಕೆ.ಮಂಜುನಾಥ ಸ್ವಾಮಿ ಸೇರಿದಂತೆ ಮತ್ತಿತರರು ಇದ್ದರು.

 

Share This Article
error: Content is protected !!
";