ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ವಿವಿಧ ಮೊಕದ್ದಮೆಗಳಲ್ಲಿ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲಾಗಿರುವ ಒಟ್ಟು 08 ಮೋಟಾರು ವಾಹನಗಳ ಬಹಿರಂಗ ಹರಾಜು ಪ್ರಕ್ರಿಯೆ ನ್ಯಾಯಾಲಯದ ಆದೇಶದಂತೆ ನ. 26 ರಂದು ಬೆಳಿಗ್ಗೆ 10.30 ಗಂಟೆಗೆ ಚಿತ್ರದುರ್ಗದ 2ನೇ ಅಪರ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‍ಸಿ ನ್ಯಾಯಾಲಯ ಆವರಣದಲ್ಲಿ ನಡೆಯಲಿದೆ.
ಹೀರೋಹೋಂಡಾ ಸ್ಪ್ಲೆಂಡರ್ ಪ್ಲಸ್, ಎಲ್‍ಎಂಎಲ್ ಫ್ರೀಡಂ, ಬಜಾಜ್ ಮ್ಯಾಕ್ಸ್, ಗುಜ್ರಾತ್ ನರ್ಮದಾ ವಾಹನಗಳು ಹಾಗೂ 17 ಕೀಪ್ಯಾಡ್ ಮೊಬೈಲ್ ಮತ್ತು ಯುಪಿಎಸ್ ಚಾರ್ಜರ್ ಲೈಟ್ ಸೇರಿದಂತೆ ಒಟ್ಟು 08 ಮೋಟಾರು ವಾಹನಗಳನ್ನು ಬಹಿರಂಗ ಹರಾಜು ಮೂಲಕ ವಿಲೇ ಮಾಡಲಾಗುತ್ತಿದ್ದು,
ಆಸಕ್ತರು ನಿಯಮಾನುಸಾರ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಬಹುದಾಗಿದೆ ಎಂದು ನ್ಯಾಯಾಲಯದ ಹರಾಜು ಪ್ರಕಟಣೆ ತಿಳಿಸಿದೆ.

