“ಅವಳು ಬಿಟ್ಟು ಕೆಟ್ಟವಳಾ? ಪ್ರೀತಿಸಿ ಕೆಟ್ಟವಳಾ?” 

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅವಳು ಬಿಟ್ಟು ಕೆಟ್ಟವಳಾ? ಪ್ರೀತಿಸಿ ಕೆಟ್ಟವಳಾ?” 

ಅವಳು ತನ್ನ ಬದುಕನ್ನ
ತಾನೇ ಇಷ್ಟಪಟ್ಟ ರೀತಿಯಲ್ಲಿ
ನಿಧಾನ
ಶಾಂತನೋವಿಲ್ಲದ ಹಾದಿಯಲ್ಲಿ ಸಾಗಿಸುತ್ತಿದ್ದಳು. 

- Advertisement - 

ಅವಳ ಬರೋಬ್ಬರಿ ಜಗತ್ತೇ
ಅವಳ ಕುಟುಂಬ
, ಅವಳ ಕನಸುಗಳು,
ಮತ್ತು ದೇವರಿಗಷ್ಟೇ ಸಲ್ಲಿಸುವ
ಒಂದು ನಿಷ್ಕಪಟವಾದ ಪುಟ್ಟ ಹೃದಯ.

ಅವಳು ಯಾವಾಗಲೂ ಕೇಳಿದ್ದೇಕೆಂದ್ರೆ
ನನ್ನನ್ನು ದೇವರಂತೆ ಕಾಣಿಸುವ ಒಬ್ಬ,
ನನ್ನನ್ನು ನೋಯಿಸದ ಒಬ್ಬ.

- Advertisement - 

ಇಷ್ಟೆ. ಇನ್ನೇನು ಬೇಡಿಕೆ ಇರಲಿಲ್ಲ ಅವಳಿಗೇ.
ಆದ್ರೆ
ಬದುಕು ಕೆಲವೊಮ್ಮೆ ಆಶೀರ್ವಾದವನ್ನೇ
ಪಾಠವಾಗಿ ಕಳುಹಿಸುತ್ತದೆ.

ಒಂದು ದಿನ
ಅವಳು ಯೋಚಿಸಿರಲಿಲ್ಲದ ದಾರಿಗೆ
ಒಬ್ಬ ಪೊಲೀಸ್ ಬಂದು ನಿಂತ.

ಅಪರಾಧದ ಕಾರಣಕ್ಕೆ ಅಲ್ಲ
ಅದೃಷ್ಟದ ವೇಷದಲ್ಲಿ ಬಂದು
ಅವಳ ಹೃದಯಕ್ಕೆ ಹತ್ತಿದ.

ಸ್ನೇಹವಾಗಿ ಶುರುವಾದದ್ದು
ಅವಳ ಹೃದಯದಲ್ಲಿ ಪ್ರೀತಿಯಾಗಿ ಮೊಳಕೆಯೊಡೆದದ್ದು.

ಅವಳು ಜಾಗರೂಕರಾಗಿರಬೇಕೆನ್ನಿಸಿ
ಸ್ವಲ್ಪ ಸಮಯ ಬೇಕುಎಂದಿದ್ದಳು.

ಅವನು ನಿನ್ನ ಪ್ರೀತಿಸ್ತೀನಿಅಂದಾಗ
ಅವಳು ತಕ್ಷಣ
ಹೌದುಅಂದ್ಲಿಲ್ಲ.

ಸ್ವಲ್ಪ ಸಮಯ ಬೇಕು ಅಂತ ಹೇಳಿದಳು-
ಅವಳಿಗೆ ಪ್ರೀತಿ ಬೇಗ ಆದರೆ ಹಾಳು ಆಗುತ್ತದೆ ಅನ್ನಿಸಿತ್ತು.

ಆದ್ರೆ ಅವಳಿಗೆ ಗೊತ್ತಿರಲಿಲ್ಲ-
ಕೆಲವರು ಸ್ನೇಹ ಕೇಳ್ತಾರೆ

ಆದ್ರೆ ಹೃದಯವನ್ನೇ ತೆಗೆದುಕೊಂಡು ಹೋಗ್ತಾರೆ.

ಅವನ ಕಾಲ್ ಮೆಸೇಜಸ್-
ಅವೆಲ್ಲವೂ ಅವಳ ದಿನಗಳನ್ನು
ಬೆಳಗಿನ ಬೆಳಕಿನಂತೆ ಹಸಿರಾಗಿಸಿತ್ತು.

ಅವಳು ಫ್ಯೂಚರ್ ನೋಡುತ್ತಿದ್ದಳು,
ಅವನೂ ಲಾಯಲ್ಟಿ ತೋರಿಸುತ್ತಾನೆ ಅನ್ನಿಸಿತ್ತು.

ಆದ್ರೆಒಂದೇ ಒಂದು ದಿನ
ಅವಳ ಹೃದಯದಲ್ಲಿ ಜ್ವಾಲೆಯಂತೆ ಹೊತ್ತಿಕೊಂಡು
ಒಂದು ಅನುಮಾನ ಹುಟ್ಟಿತು.

ಅದರ ಜ್ವಾಲೆ ನಿಧಾನವಾಗಿ
ಅವಳ ನಂಬಿಕೆ
, ಅವಳ ಭಾವನೆ,
ಅವಳ ಹೃದಯವನ್ನೇ ಸುಡೋಕೆ ಶುರು ಮಾಡಿತು.

ಯಾವುದೇ ಹುಡುಗಿಯರಿಗೆ ಬೇರೆ ಹುಡುಗಿಯ ಜೊತೆ ಚಾರ್ಟ್ಸ್ ಕಾಲ್ಸ್-
ಇವು ಕೇವಲ ಚಾರ್ಟ್ಸ್ ಅಲ್ಲ

ಅದು
ನೀನು ಸಾಕಾಗಲಿಲ್ಲಅನ್ನೋ ಗಾಯ.

ಅದು ಇನ್ಸೆಕ್ಯೂರಿಟಿ ಅಲ್ಲ-
ಅದು
ನೀನೇ ನನ್ನ ಜಗತ್ತೆಅನ್ನೋ ಪ್ರೀತಿಯ ತೀವ್ರತೆ.

ಹೌದುಅವಳು ಪಸೆಸಿವ್.
ಯಾಕಂದ್ರೆ
ಅವಳು ತನ್ನನ್ನು ಬೆಲೆಬಾಳುವವನಿಗೆ ಕೊಟ್ಟಳು.

ಅವಳು ತನ್ನ ಗೌರವ, ಕುಟುಂಬ, ಬ್ಯಾಗ್ರೌಂಡ್ನ್ ವ
ಎಲ್ಲಾ ಜವಾಬ್ದಾರಿಗಳನ್ನು ತನ್ನ ಬೆನ್ನ ಮೇಲೆ ಹೊತ್ತಿದ್ದಳು.

ಅವಳು ಏನ್ ಬೇಕಾದ್ರೂ ಮಾಡೋವಳುಅಲ್ಲ.
ಅವಳು
ಏನ್ ಆದರೂ ನಿಷ್ಠೆಯಿಂದ ನಿಂತುಕೊಳ್ಳೋವಳು.

ಆದ್ರೆಸಮಾಜ ಕೇಳೋದಿಲ್ಲ:
ನಿನ್ನನ್ನು ಯಾರು ಹೀಗೆ ಕಿತ್ತುಹಾಕಿದರು?”
ಒಮ್ಮೆ ಹುಡುಗಿಯ ನಂಬಿಕೆ ಒಡೆದರೆ

ಅದು ಹೂವನ್ನ ಮುರಿಯೋದಿಲ್ಲ-
ಹೂವಿನ ಸುಗಂಧವನ್ನೇ ಕಳೆದುಕೊಳ್ಳಿಸುವಷ್ಟು ನೋವು.

ಅವಳು ಮೆಲ್ಟ್  ಆಗಿ
ಒಮ್ಮೆ ತನ್ನ ಹೃದಯವನ್ನೇ ಕೊಟ್ಟಳು.

ಆದ್ರೆ ಆ ನಂಬಿಕೆ ಒಡೆದಾಗ
ಅದು
 ಹಾರ್ಟ್ ಬ್ರೇಕ್ ಅಲ್ಲ
ಅದು ಆತ್ಮವೇ ಕತ್ತಲಾದ ಕ್ಷಣ.

ಅವಳು ಕೇಳೋದು ಒಂದೇ:
ದ್ರೋಹ ಮಾಡ್ಬೇಡ
ನನ್ನ ಗೌರವ ಕಾಪಾಡು

ನನ್ನ ಜೊತೆ ನಡೆಯು
…”

ಇಷ್ಟು ಬೇಡಿಕೆಯೇ ಅಷ್ಟೊಂದು ದೊಡ್ಡದಾ?
ಒಮ್ಮೆ ಹುಡುಗಿಯ ಪ್ರೀತಿ ಮುರಿದರೆ
ಅವಳು ಮತ್ತೆ ನಗಲು ಕಲಿಯುತ್ತಾಳೆ
,
ಆದ್ರೆ ಹಳೆಯ ನಗುವಿನ ಸೌಂಡ್….
ಹಳೆಯ ಬ್ರೈಟ್ ನೆಸ್

ಮತ್ತೆ ಬರೋದಿಲ್ಲ.
ಅವಳ ಪಾಸ್ಟ್ ಬಗ್ಗೆ ಮಾತಾಡೋದಿಲ್ಲ
,

ಅವಳು ಪರಿಚಯ ಕೊಡುವುದಿಲ್ಲ-
ಆದ್ರೆ ಅವಳ ಕಣ್ಣಿನಲ್ಲಿ
ಅವಳು ಮರೆಮಾಡಿದ ನೋವಿನ
ಅಧ್ಯಾಯಗಳೇ ಅಧ್ಯಾಯಗಳು.

ಸಮಾಜ ಕೇಳುತ್ತದೆ:
ಅವಳು ಯಾಕೆ ಹೀಗೆ ಬದಲಾಯಿತಾಳೆ?”

ಆದ್ರೆ ಕೇಳುವುದಿಲ್ಲ:
ಯಾರು ಅವಳ ಇನೋಸೆಂಟ ಡ ಕಿತ್ತುಕೊಂಡರು?”

ಪ್ರೀತಿ ತಪ್ಪಲ್ಲ.
ನಿಷ್ಠೆ ತಪ್ಪಲ್ಲ.
ತಪ್ಪದು ದ್ರೋಹ ಮಾತ್ರ.

ಮತ್ತು-
ಅವಳನ್ನು
ಕೆಟ್ಟವಳುಎಂದು ಕರೆಯಬೇಡಿ.
ಅವಳು ಪ್ರೀತಿಸಿದಕ್ಕೆ ಕೆಟ್ಟವಳಲ್ಲ.
ಅವಳು ನಂಬಿದಕ್ಕೆ ಕೆಟ್ಟವಳಲ್ಲ.

ಕೆಟ್ಟವನು
ಅವಳ ನಿಷ್ಠೆಯಿಂದ ನಿಂತಿದ್ದ ಹೃದಯವನ್ನೇ
ಕೈಬಿಟ್ಟವನು.

ಅವಳನ್ನು ಬದಲಾಯಿಸಿದವರು ಯಾರು ಎಂಬುದೇ
ನಿಜವಾದ ಉತ್ತರ.
ಕವಿತೆ-ಸ್ಪೂರ್ತಿ ಎಸ್. ಆರ್,
ಹೊಳೆನರಸೀಪುರ,
[email protected]

Share This Article
error: Content is protected !!
";