ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ನಗರದ ಸರಸ್ವತಿಪುರಂ ಮೊದಲನೇ ಮುಖ್ಯ ರಸ್ತೆಯಲ್ಲಿರುವ ಮಹಾತ್ಮ ಪುಲೆ ಅಧ್ಯಯನ ಕೇಂದ್ರದಲ್ಲಿ ಜಂಬೂದ್ವೀಪ ಕರ್ನಾಟಕದ ವತಿಯಿಂದ ಎಲ್ಲಾ ವರ್ಗದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ KEA/KAS/KSP/ Group C ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಮತ್ತು ರಿಯಾಯಿತಿಯಲ್ಲಿ ತರಬೇತಿಯನ್ನು ನೀಡಲಾಗುತ್ತಿದೆ.
ಈಗಾಗಲೇ ಯಶಸ್ವಿ ಮೂರು ಬ್ಯಾಚ್ ಗಳಿಗೆ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗಿದೆ. ಈಗ ನಾಲ್ಕನೇ ಬ್ಯಾಚನ್ನು ಡಿಸೆಂಬರ್ ಮೊದಲನೇ ವಾರದಲ್ಲಿ ಪ್ರಾರಂಭಿಸಲಾಗುತ್ತಿದೆ.
ಈಗಾಗಲೇ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬೋಧನಾ ಅವಧಿಯನ್ನು ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ ಮತ್ತು ಪದವಿ ಪೂರೈಸಿದ ಅಭ್ಯರ್ಥಿಗಳಿಗೆ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆವರೆಗೆ ನಿಗದಿಪಡಿಸಲಾಗಿದೆ.
ಕೇಂದ್ರವು ಸುಸಜ್ಜಿತವಾದ ಗ್ರಂಥಾಲಯ ಹೊಂದಿದ್ದು ನುರಿತ ಅನುಭವಿ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಮತ್ತು ಮಾರ್ಗದರ್ಶನ ನೀಡಲಾಗುತ್ತಿದೆ. ಪ್ರತಿ ಭಾನುವಾರ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ನೀಡಿ ಅಣಕು ಪರೀಕ್ಷೆಗಳನ್ನು ನಡೆಸಿ ಪರೀಕ್ಷೆಗೆ ಸಜ್ಜುಗೊಳಿಸಲಾಗುತ್ತದೆ ಆಸಕ್ತರು ಖುದ್ದಾಗಿ ಅಥವಾ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಸಂಘಟಕರು ಕೋರಿದ್ದಾರೆ.
ವಿಳಾಸ:-
ಮಹಾತ್ಮಪುಲೆ ಅಧ್ಯಯನ ಕೇಂದ್ರ ಮೊದಲನೇ ಮುಖ್ಯ ರಸ್ತೆ ಸರಸ್ವತಿಪುರಂ ಚಳ್ಳಕೆರೆ ಗೇಟ್ ಹತ್ತಿರ ಚಿತ್ರದುರ್ಗ, ಸಂಪರ್ಕಿಸಿ 9242843504, 9740108588, 9972446430.
Apply through online link https://forms.gle/8bjR3hMKSNgDmnwG8

