ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ಕರ್ನಾಟಕ ತಾಂತ್ರಿಕ ಸಲಹಾ ಸಂಸ್ಥೆ (ಟೆಕ್ಸಾಕ್) ಹಾಗೂ
ಕೆಸಿಟಿಯು ಇವರ ಸಂಯುಕ್ತಾಶ್ರಯದಲ್ಲಿ ಕೇಂದ್ರ ಸರ್ಕಾರದ ಆರ್‍ಎಎಂಪಿ ಯೋಜನೆಯಡಿ ತಂತ್ರಜ್ಞಾನ ಚಿಕಿತ್ಸಾಲಯ ಕುರಿತು ಕೈಗಾರಿಕೋದ್ಯಮಿಗಳಿಗೆ ದೇಶಾದ್ಯಂತ ಪ್ರಸಿದ್ಧಿ ಪಡೆದಿರುವ ಮೊಳಕಾಲ್ಮುರು ಸೀರೆಯ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಎರಡು ದಿನಗಳ ಕಾರ್ಯಕ್ರಮವನ್ನು
ಇದೇ ನ.28 ಮತ್ತು 29ರಂದು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಮೊಳಕಾಲ್ಮುರು ಪಟ್ಟಣದ ಸರ್ವೋದಯ ಶಾಲೆಯ ಮುಂಭಾಗದ ಪಾಂಚಜನ್ಯ ಕಾಂಪ್ಲೆಕ್ಸ್‍ನ 2ನೇ ಮಹಡಿಯಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮಕ್ಕೆ ಕೈಗಾರಿಕೋದ್ಯಮಿಗಳು ಪಾಲ್ಗೊಂಡು ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಬಿ.ಆನಂದ್ ತಿಳಿಸಿದ್ದಾರೆ.

