ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಕೃತಕ ಆಭರಣಗಳ ತಯಾರಿಕೆ (ಪರಿಸರ ಸ್ನೇಹಿ) ಕುರಿತು ಅಕ್ಸೆಂಚರ್ & ಭಾರತೀಯ ಉದ್ಯಮಶೀಲತಾ ಅಭಿವೃದ್ಧಿ ಸಂಸ್ಥೆ (EDII) ವತಿಯಿಂದ ಉಚಿತ ತರಬೇತಿಯ ಉದ್ಘಾಟನಾ ಸಮಾರoಭ ಆಯೋಜನೆ ಮಾಡಲಾಗಿತ್ತು.
ನಗರದ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಸಭಾಂಗಣದಲ್ಲಿ ಅಯೋಜನೆ ಮಾಡಲಾದ ಕೃತಕ ಅಭರಣ.ತಯಾರಕಾ ಘಟಕವನ್ನು ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ , ಕೌಶಲ್ಯ ಸದಸ್ಯರು ಚಂದ್ರಕಲಾ, ಖಾದಿ ಉಧ್ಘಾಟನೆ ಮಾಡಿ ಅವರು ಮಾತನಾಡಿ ಗುಡಿ ಕೈಗಾರಿಕೆ ಎಂದರೆ ಮನೆಯಲ್ಲಿ ಅಥವಾ ಸಣ್ಣ ಪ್ರಮಾಣದಲ್ಲಿ ಸರಕುಗಳನ್ನು ಉತ್ಪಾದಿಸುವ ಉದ್ಯಮವಾಗಿದೆ, ಇದು ದೊಡ್ಡ ಕಾರ್ಖಾನೆ ಗಳಲ್ಲದೆ ನಡೆಯುತ್ತದೆ. ಈ ಉದ್ಯಮಗಳು ಅರೆಕಾಲಿಕ ಅಥವಾ ಪೂರ್ಣಕಾಲಿಕ ಕೆಲಸಗಾರರ ಅಗತ್ಯವಿರುವ ಅನನ್ಯ ವಸ್ತುಗಳನ್ನು ತಯಾರಿಸುವತ್ತ ಗಮನ ಹರಿಸುತ್ತವೆ,
ಇದಕ್ಕೆ ಕಡಿಮೆ ಬಂಡವಾಳ ಸಾಕು. ಉದಾಹರಣೆಗಳೆಂದರೆ ಮರಗೆಲಸ, ಕಮ್ಮಾರಿಕೆ, ಅಕ್ಕ ಸಾಲಿಗಿಕೆ, ಬಿದಿರು ಮತ್ತು ಬೆತ್ತದ ಕೆಲಸಗಳು, ಕುಂಬಾರಿಕೆ, ಕೃತಕ ಆಭರಣಗಳ ತಯಾರಿಕೆ ಮತ್ತು ವಿವಿಧ ಗೃಹೋಪಯೋಗಿ ವಸ್ತುಗಳ ತಯಾರಿಕೆ.ತರಬೇತಿ ಕೂಡಲಾಗುತ್ತೆ ಎಂದರು.
ದೊಡ್ಡಬಳ್ಳಾಪುರದಲ್ಲಿ 26 ದಿನಗಳ ಕಾಲ ಉಚಿತ ತರಬೇತಿಯನ್ನು ಕೃತಕ ಆಭರಣಗಳ ತಯಾರಿಕೆ (ಪರಿಸರ ಸ್ನೇಹಿ) ಕುರಿತು ತರಬೇತಿಯನ್ನು.ಅಕ್ಸೆಂಚರ್ & ಭಾರತೀಯ ಉದ್ಯಮ ಶ್ರೀಲತಾ ಅಭಿವೃದ್ಧಿ ಸಂಸ್ಥೆ (EDII) ಸಂಸ್ಥೆಯ ಮೂಲಕ ಇಂದು ಚಾಲನೆ ನೀಡಲಾಯಿತು. ಈ ತರಬೇತಿಗೆ ಸುಮಾರು 50ಹೆಚ್ಚು ಮಹಿಳೆಯರು ಬಾಗವಹಿಸಿ ಪ್ರಯೋಜನವನ್ನು ಪಡೆದುಕೊಂಡರು.
ಮೊದಲನೆ ದಿನವಾಗಿ ವಾಲೆ, ಜುಮುಕಿಗಳ ತಯಾರಿ ಬಗ್ಗೆ ತರಬೇತಿ ನೀಡಲಾಯಿತ್ತು ಹಾಗೂ ಫಲಾನುಭವಿಗಳು ಇದರ ಬಗ್ಗೆ ಕಲಿತುಕೊಂಡು ವಾಲೆ, ಜುಮುಕಿ ಗಳನ್ನು ತಯಾರಿಸಿದರು.
ದೊಡ್ಡಬಳ್ಳಾಪುರ ಹಾಗೂ ಸುತ್ತಮುತ್ತಲಿನ ಭಾಗದ ಮಹಿಳೆಯರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ತರಬೇತಿಯ ಸೌಲಭ್ಯವನ್ನು ಪಡೆದುಕೊಳ್ಳಬಹುದು ಎಂದು ಎಂಟರ್ಪ್ರೈನೆರ್ಷಿಪ್ ಡೆವಲಪ್ಮೆಂಟ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಯ ಪ್ರಾಜೆಕ್ಟ್ ಕೋಆರ್ಡಿನೇಟರ್ ಲಲಿತ ಇವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ, ಕೃತಕ ಆಭರಣಗಳ ತರಬೇತಿಯ ಸಂಪನ್ಮೂಲ ವ್ಯಕ್ತಿ ತುಳಸಮ್ಮ, ಮಹಿಳಾ ಸಾಮಾಜಿಕ ಸಂಘಟನಾಗರಾದ ಅಂಬಿಕಾ. ಶೆರ್ಲಿ ಮಾರ್ಗರೇಟ್, ಪ್ರಕಾಶ್ ಶ್ರೀಕಾಂತ್ ಹಾಗೂ ಫಲಾನುಭವಿಗಳು ಹಾಜರಿದ್ದರು.

