ಕೆಪಿಎಸ್‍ಸಿ: ಭೂ ಮಾಪಕರ ಹುದ್ದೆಗಳ ಅಧಿಸೂಚನೆ ರದ್ದು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಲೋಕಸೇವಾ ಆಯೋಗವು ಅಧಿಸೂಚಿಸಿದ್ದ ಭೂ ಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯಲ್ಲಿನ ಭೂಮಾಪಕರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಆಯೋಗದಿಂದ ಪ್ರಕಟಿಸಲಾದ ಅಧಿಸೂಚನೆ / ಸೇರ್ಪಡೆ/ ತಿದ್ದುಪಡಿ ಅಧಿಸೂಚನೆಗಳನ್ನು ಸಂಖ್ಯೆ:  KPSCKA/EXA2/EXMF/4/2025-EXAM 2/1013 ªÀÄvÀÄÛ KPSCKA/ EXA2 /EXMF/ 4/ 2025-EXAM2/1014 ದಿನಾಂಕ:19-11-2025 ರಂದು ಆಯೋಗದ ಅಧಿಸೂಚನೆಗಳನ್ನು ರದ್ದುಗೊಳಿಸಲಾಗಿದೆ.

ಆಯೋಗದ ಅಧಿಸೂಚನೆ ಸಂಖ್ಯೆ: ಇ(2)581 & 582/2023-24/ಪಿಎಸ್ ಸಿ, ದಿನಾಂಕ:29-02-2024, ಸೇರ್ಪಡೆ ಅಧಿಸೂಚನೆ ಸಂಖ್ಯೆ: ಇ(2)1023 & 1024/2024-25/ಪಿಎಸ್ ಸಿ, ದಿನಾಂಕ:22-11-2024 ಮತ್ತು ತಿದ್ದುಪಡಿ ಅಧಿಸೂಚನೆ ಸಂಖ್ಯೆ: ಇ(2)1026 & 1025/2024-25/ಪಿಎಸ್ ಸಿ, ದಿನಾಂಕ:22-11-2024 ರನ್ವಯ ಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯಲ್ಲಿನ ಭೂ ಮಾಪಕರ ಉಳಿಕೆ ಮೂಲ ವೃಂದದ-560 ಹಾಗೂ ಹೈದ್ರಾಬಾದ್-ಕರ್ನಾಟಕ ವೃಂದದ-190 ಹುದ್ದೆಗಳಿಗೆ ಅಧಿಸೂಚನೆಗಳನ್ನು ಹೊರಡಿಸಿ, ಅಭ್ಯರ್ಥಿಗಳಿಂದ ಅರ್ಜಿಗಳನ್ನು ಸ್ವೀಕರಿಸಲಾಗಿತ್ತು.

- Advertisement - 

ಪ್ರಸ್ತುತ ಸರ್ಕಾರದ ಸುತ್ತೋಲೆ ಸಂಖ್ಯೆ: ಸಿಆಸುಇ 388 ಸೆನೆನಿ 2024 ಭಾ-3, ದಿನಾಂಕ: 04-09-2025 ರನ್ವಯ ದಿನಾಂಕ: 28-10-2024ರ ನಂತರ ಹೊರಡಿಸಲಾಗಿರುವ ಅಧಿಸೂಚನೆ/ಸೇರ್ಪಡೆ/ತಿದ್ದುಪಡಿ ಅಧಿಸೂಚನೆಗಳನ್ನು ರದ್ದುಗೊಳಿಸಿ, ಪರಿಶಿಷ್ಟ ಜಾತಿ ಒಳ ಮೀಸಲಾತಿಯನ್ನು ಅಳವಡಿಸಿಕೊಂಡು ಹೊಸದಾಗಿ ನೇಮಕಾತಿ ಅಧಿಸೂಚನೆಗಳನ್ನು ಹೊರಡಿಸಬೇಕಾಗಿರುತ್ತದೆ.

ಆದ್ದರಿಂದ, ಭೂ ಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯಲ್ಲಿನ ಭೂಮಾಪಕರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಆಯೋಗದಿಂದ ಪ್ರಕಟಿಸಲಾದ ಅಧಿಸೂಚನೆ / ಸೇರ್ಪಡೆ / ತಿದ್ದುಪಡಿ ಅಧಿಸೂಚನೆಗಳನ್ನು ಸಂಖ್ಯೆ: KPSCKA/EXA2/EXMF/4/2025-EXAM 2/1013 ಮತ್ತು KPSCKA/ EXA2/EXMF/4/ 2025-EXAM2/1014 ¢£ÁAPÀ:19-11-2025  ಆಯೋಗದ ಅಧಿಸೂಚನೆಗಳಲ್ಲಿ ಆಯೋಗದ ವೆಬ್‍ಸೈಟ್ http://kpsc.kar.nic.in/Notification  ನಲ್ಲಿ ರದ್ದುಗೊಳಿಸಿ ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಲಾಗಿದೆ ಎಂದು ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement - 

Share This Article
error: Content is protected !!
";