ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಾಗಲಕೋಟ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ತೋಟಗಾರಿಕೆ, ಕೃಷಿ ಇಲಾಖೆ ಹಾಗೂ ಇತರೆ ಅಭಿವೃದ್ಧಿ ಇಲಾಖೆಗಳ ಸಹಯೋಗದೊಂದಿಗೆ ತೋಟಗಾರಿಕೆ ಮೇಳ-2025 ನ್ನು “ಮೌಲ್ಯವರ್ಧನೆ ಮತ್ತು ರಫ್ತು ಅವಕಾಶಗಳಿಗಾಗಿ ನಿಖರ ತೋಟಗಾರಿಕೆ” ಎಂಬ ಧೈಯ ವಾಕ್ಯದೊಂದಿಗೆ ಬಾಗಲಕೋಟೆಯ ವಿಶ್ವವಿದ್ಯಾಲಯದ ಮುಖ್ಯ ಆವರಣದಲ್ಲಿ 2025 ನೇ ಡಿಸೆಂಬರ್ 21, 22 ಮತ್ತು 23 ರವರೆಗೆ ಹಮ್ಮಿಕೊಳ್ಳಲಾಗಿದೆ.
ಈ ಮೂರು ದಿನಗಳ ಮೇಳದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳು, ಸಚಿವರು, ಶಾಸಕರು ಹಾಗೂ ರಾಜ್ಯದ ವಿವಿಧ ಜಿಲ್ಲೆಗಳ ಐದು ಲಕ್ಷಕ್ಕೂ ಅಧಿಕ ರೈತರು ಆಗಮಿಸುವರು, ಜನರು ಆಗಮಿಸುವುದರಿಂದ ಸದರಿ ಮೇಳದಲ್ಲಿ ಯಂತ್ರೋಪಕರಣಗಳ ಮಳಿಗೆ (20×20)/ಸುಸಜ್ಜಿತ ಮಳೆಗೆ (10×10) / ಮಿತವ್ಯಯ ಮಳಿಗೆ (10×10) ಹಾಗೂ ಆಹಾರ ಮಳಿಗೆ (20×20 ಮತ್ತು 20×10) ಗಳನ್ನು ಕಾಯ್ದಿರಿಸಲು/ನೊಂದಾಯಿಸಲು ಅರ್ಜಿಯನ್ನು ಆಹ್ವಾನಿಸಲಾಗಿದೆ.
ಆಸಕ್ತಿಯುಳ್ಳವರು ತಮ್ಮ ಮಳಿಗೆಯನ್ನು 2025 ರ ನವೆಂಬರ್ 28 ರ ಒಳಗಾಗಿ ಕಾಯ್ದಿರಿಸಬಹುದು. ಮೊದಲು ಬಂದವರಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಬಾಗÀಲಕೋಟ ತೋಟಗಾರಿಕಾ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಡಾ.ರುದ್ರೇಶ ಡಿ.ಎಲ್. ಮೊಬೈಲ್ ಸಂಖ್ಯೆ 9538243305, ಶ್ರೀಪಾದ ವಿಶ್ವೇಶ್ವರ –ಮೊಬೈಲ್ ಸಂಖ್ಯೆ 9448344103, ಡಾ.ಶಶಿಧರ ದೊಡಮನಿ ಮೊಬೈಲ್ ಸಂಖ್ಯೆ 7795674153 ಹಾಗೂ ಪಿ.ಬಿ.ದೇಸೂರ ಮೊಬೈಲ್ ಸಂಖ್ಯೆ 8884612692 ನ್ನು ಸಂಪರ್ಕಿಸಬಹುದು.

