ಟಿ20 ವಿಶ್ವಕಪ್‌ ಗೆದ್ದು ಇತಿಹಾಸ ನಿರ್ಮಿಸಿದ ತಂಡಕ್ಕೆ ಸನ್ಮಾನಿಸಿದ ವಿಜಯೇಂದ್ರ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಂಧ ಮಹಿಳೆಯರ ಚೊಚ್ಚಲ T20 ವಿಶ್ವಕಪ್‌ಗೆದ್ದು ಇತಿಹಾಸ ನಿರ್ಮಿಸಿ, ದೇಶಕ್ಕೆ ಕೀರ್ತಿ ತಂದುಕೊಟ್ಟಿರುವ ಭಾರತ ತಂಡದ ಸದಸ್ಯರನ್ನು ಬೆಂಗಳೂರಿನಲ್ಲಿ ಇಂದು ಭೇಟಿ ಮಾಡಿ, ಹೃತ್ಪೂರ್ವಕವಾಗಿ ಅಭಿನಂದಿಸಿಹೆಮ್ಮೆಯಿಂದ ಸನ್ಮಾನಿಸಲಾಯಿತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದರು.

ನೇಪಾಳ ವಿರುದ್ಧದ ಅಂತಿಮ ಹಣಾಹಣಿಯಲ್ಲಿ 7 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿರುವ ಭಾರತ ತಂಡದ ಸಾಧನೆಯನ್ನು ಇಡೀ ದೇಶ ಸಂಭ್ರಮಿಸುತ್ತಿದೆ.

- Advertisement - 

ತಂಡದ ಎಲ್ಲ ಸದಸ್ಯರು ದೈಹಿಕ ಸವಾಲುಗಳನ್ನು ಮೀರಿ, ನಮ್ಮ ದೇಶಕ್ಕೆ ಐತಿಹಾಸಿಕ ಗೆಲುವನ್ನು ತಂದು ಕೊಟ್ಟು, ಕ್ರೀಡಾ ಕ್ಷೇತ್ರದಲ್ಲಿ ಭಾರತದ ಸ್ತ್ರೀಶಕ್ತಿಯ ಸಾಮರ್ಥ್ಯವನ್ನು ಮತ್ತು ಆತ್ಮವಿಶ್ವಾಸವನ್ನು ಜಗತ್ತಿಗೆ ತೋರಿಸಿದ್ದಾರೆ. ಅವರೆಲ್ಲರ ಅಸಾಧಾರಣ ದೃಢ ಸಂಕಲ್ಪಕ್ಕೆ ಇದು ನಿದರ್ಶನ ಮಾತ್ರವಲ್ಲ, ಎಲ್ಲರಿಗೂ ಅಪಾರ ಸ್ಫೂರ್ತಿ ನೀಡುವ ಸಾಧನೆಯಾಗಿದೆ. 

ಅದರಲ್ಲೂ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿ, ತಂಡಕ್ಕೆ ಸ್ಪೂರ್ತಿ, ಆತ್ಮಸ್ಥೈರ್ಯ ತುಂಬಿದ ನಾಯಕಿ ದೀಪಿಕಾ ರವರು ನಮ್ಮ ಕರ್ನಾಟಕದಲ್ಲೇ ಬೆಳೆದವರು ಎನ್ನುವುದು ಸಮಸ್ತ ಕನ್ನಡಿಗರಿಗೆ ಹೆಮ್ಮೆಯ ವಿಷಯ. ಹಾಗೆಯೇ, ಈ ವಿಜಯದಲ್ಲಿ ಮಹತ್ವದ ಪಾತ್ರ ವಹಿಸಿದ

- Advertisement - 

ಕ್ರಿಕೆಟ್ ಅಸೋಸಿಯೇಷನ್ ಫಾರ್ ದಿ ಬ್ಲೈಂಡ್ ಇನ್ ಇಂಡಿಯಾ (CABI) ಅಧ್ಯಕ್ಷರೂ ಮತ್ತು ಸ್ವತಃ ಮಾಜಿ ಕ್ರಿಕೆಟಿಗರಾದ ಮಹಾಂತೇಶ್ ಜಿ. ಕಿವಡಸಣ್ಣವರ್ ಅವರನ್ನೂ ಕೂಡ ಭೇಟಿ ಮಾಡಿ, ತಂಡದ ಜೊತೆಗೆ ವಿಶೇಷವಾಗಿ ಸನ್ಮಾನ ಸಲ್ಲಿಸಲಾಯಿತು. ಒಟ್ಟಾರೆ, ಈ ವಿಶಿಷ್ಟ ಸಾಧನೆಯು ಭಾರತದಲ್ಲಿ ಹೊಸ ಮೈಲುಗಲ್ಲಾಗಿದ್ದು, ನಮ್ಮ ಎಲ್ಲಾ ದಿವ್ಯಾಂಗ ಕ್ರೀಡಾಪಟುಗಳಿಗೆ ಹೆಚ್ಚಿನ ಭರವಸೆಯನ್ನು ಮತ್ತು ಉತ್ತಮ ಭವಿಷ್ಯವನ್ನು ಸೃಷ್ಟಿಸಲಿದೆ.

ಈ ಸಂದರ್ಭದಲ್ಲಿ ಬೆಂಗಳೂರು ಕೇಂದ್ರ ಸಂಸದ ಪಿ.ಸಿ ಮೋಹನ್, ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ಮುಖಂಡ ಹನುಮಂತೇಗೌಡ, ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ ಮತ್ತಿತರರು ಉಪಸ್ಥಿತರಿದ್ದರು.

 

 

 

 

Share This Article
error: Content is protected !!
";