ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ಅಭಿವೃದ್ಧಿ ಪ್ರಾಧಿಕಾರ ಚಂಪಾ ಷಷ್ಠಿ ಪ್ರಯುಕ್ತ ಶ್ರೀ ಸುಬ್ರಹ್ಮಣ್ಯ ಸ್ವಾಮಿಯವರಿಗೆ ಬೆಳಗ್ಗೆ 5:00 ಗಂಟೆಗೆ ವಿಶೇಷ ಅಭಿಷೇಕ ನಂತರ ಮಹಾಮಂಗಳಾರತಿ ಸುಬ್ರಹ್ಮಣ್ಯ ಸ್ವಾಮಿರವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
ದೇವಾಲಯಕ್ಕೆ ಬಂದ ಭಕ್ತಾದಿಗಳು ಹುತ್ತಕ್ಕೆ ಹಾಲು ಮತ್ತು ಮೊಸರು ತುಪ್ಪದಿಂದ ಪೂಜೆಯನ್ನು ನೆರವೇರಿಸಿದರು.ಈ ಸಂದರ್ಭದಲ್ಲಿ ದೇವಾಲಯದ ಕಾರ್ಯದರ್ಶಿ ಹಾಗೂ ಉಪಯುಕ್ತ ಪಿ. ದಿನೇಶ್ ಮುಜರಾಯಿ ಇಲಾಖೆಯ ತಹಶೀಲ್ದಾರ್ ಜಿ.ಜೆ ಹೇಮಾವತಿ ಪ್ರಧಾನ ಅರ್ಚಕರು ಶ್ರೀನಿಧಿ ಅಭಿರುದ್ದಿ ಪ್ರಾಧಿಕಾರದ ಸದಸ್ಯ ನಂಜಪ್ಪ ದೇವಾಲಯದ ಸಿಬ್ಬಂದಿ ಉಪಸ್ಥಿತರಿದ್ದರು.

