ದಯವಿಟ್ಟು ಕಾಯಿರಿ, ನಾನು ಕರೆ ಮಾಡುತ್ತೇನೆ-ರಾಹುಲ್ ಗಾಂಧಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಕಾಂಗ್ರೆಸ್‌ ಸರ್ಕಾರದಲ್ಲಿ ನಾಯಕತ್ವ ಬದಲಾವಣೆ ಮತ್ತು ಸಂಪುಟ ಪುನಾರಚನೆ ಕುರಿತ ಚರ್ಚೆಗಳು ನಡೆಯುತ್ತಿದ್ದು ಎರಡು ಕಡೆಯಿಂದಲೂ ತಂತ್ರ ಪ್ರತಿ ತಂತ್ರಗಳು ಜೋರಾಗಿ ನಡೆಯುತ್ತಿವೆ.

ಈ ನಡುವೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷದ ಹೈಕಮಾಂಡ್‌ನೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ರಾಹುಲ್ ಗಾಂಧಿ ಅವರಿಂದ ಡಿಕೆಶಿವಕುಮಾರ್ ಗೆ ದಯವಿಟ್ಟು ಕಾಯಿರಿ ನಾನು ಕರೆ ಮಾಡುತ್ತೇನೆ ಎಂಬ ಸಂದೇಶ ಬಂದಿರೋದು ರಾಜಕೀಯ ವಲಯದಲ್ಲಿ ಭಾರಿ ಕುತೂಹಲ ಮೂಡಿಸಿದೆ.

- Advertisement - 

ಸಿಎಂ ಸಿದ್ದರಾಮಯ್ಯ ಅಥವಾ ಡಿಸಿಎಂ ಡಿ.ಕೆ. ಶಿವಕುಮಾರ್ ಇಬ್ಬರನ್ನೂ ಕಾಂಗ್ರೆಸ್ ಹೈಕಮಾಂಡ್ ಕಡೆಗಣಿಸುವ ಸ್ಥಿತಿಯಲ್ಲಿಲ್ಲ. ಕರ್ನಾಟಕದಲ್ಲಿ ಪಕ್ಷ ಗಟ್ಟಿಯಾಗಿ ನಿಲ್ಲಬೇಕಾದರೆ ಇಬ್ಬರ ಸಹಭಾಗಿತ್ವ ಅತ್ಯಂತ ಪ್ರಮುಖ ಎಂದು ವರಿಷ್ಠರು ನಂಬಿದ್ದಾರೆ. ಹೀಗಾಗಿ ಡಿ.ಕೆ. ಶಿವಕುಮಾರ್ ಅವರನ್ನು ಸಮಾಧಾನಪಡಿಸುವುದು ರಾಹುಲ್ ಗಾಂಧಿಯವರ ಮೊದಲ ಆದ್ಯತೆ ಎನ್ನಲಾಗಿದೆ.

 

- Advertisement - 

Share This Article
error: Content is protected !!
";