ಶಾಲಾ ಮಕ್ಕಳಿಂದ ಸಂವಿಧಾನ ದಿನಾಚರಣೆ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
” ಸಂವಿಧಾನ ದಿನ”ದ ಆಚರಣೆಯನ್ನು ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲ್ಲೂಕಿನ ಕಣಜನಹಳ್ಳಿ ಗ್ರಾಮ ಪಂಚಾಯಿತಿ ಹಾಗೂ ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ” ಸಂವಿಧಾನ ದಿನ”ವನ್ನು ವಿಶೇಷವಾಗಿ ಆಚರಣೆ ಮಾಡಲಾಯಿತು.

ಈ ಆಚರಣೆಯಲ್ಲಿ ಚುನಾಯಿತ ಪ್ರತಿನಿಧಿಗಳು, ಗಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರದೀಪ್, ಸಿಬ್ಬಂದಿ ವರ್ಗ, ಫೌಂಡೇಶನ್ ಫಾರ್ ಇಕಲಾಜಿಕಲ್ ಸೆಕ್ಯೂರಿಟಿ (ಎಫ್ಇಎಸ್) ಸಂಸ್ಥೆಯ ಜಿಲ್ಲಾ ಸಂಯೋಜಕ ರಮೇಶ್, ಚುನಾಯಿತ ಪ್ರತಿನಿಧಿಗಳು, ಗ್ರಾಮಸ್ಥರು, ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರು ಹಾಗೂ ಶಾಲೆಯ ಮಕ್ಕಳು ಭಾಗವಹಿಸಿದ್ದರು.

- Advertisement - 

ಗಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರದೀಪ್ ಮಾತನಾಡಿ ಸಂವಿಧಾನ ದಿನಾಚರಣೆಯು ಭಾರತಿಯರಿಗೆ ಒಂದು ಹೆಮ್ಮಯ ದಿನ, ಈ ದಿನ ಸಂವಿಧಾನದ ಕರಡು ಸಮಿತಿ ಅಧ್ಯಕ್ಷ ಡಾ. ಬಿ.ಆರ್.  ಅಂಬೇಡ್ಕಕರ್ ರವರು ದೇಶಕ್ಕೆ ಪೂರಕವಾದ ಸಂವಿಧಾನವನ್ನು ದೇಶಕ್ಕೆ ಅರ್ಪಣೆ ಮಾಡಿದ ದಿನ ಎಂದು ತಿಳಿಸಿದರು.

ಫೌಂಡೇಶನ್ ಫಾರ್ ಇಕಲಾಜಿಕಲ್ ಸೆಕ್ಯೂರಿಟಿ ಸಂಸ್ಥೆಯ ಜಿಲ್ಲಾ ಸಂಯೋಜಕ  ರಮೇಶ್ ಮಾತನಾಡಿ ಸರ್ಕಾರಿ ಆಸ್ತಿಗಳನ್ನು ರಕ್ಷಣೆ ಮಾಡುವುದು ಪ್ರತಿಯೊಬ್ಬ ಭಾರತೀಯರ ಜವಬ್ಧಾರಿ. ಅದರಲ್ಲಿ ಮುಖ್ಯವಾಗಿ ನೀರು, ಗಿಡ, ಮರ ಹಾಗೂ ಭೂಮಿಯ ರಕ್ಷಣೆ, ಅಭಿವೃದ್ಧಿ ಮತ್ತು ಮೇಲ್ವಿಚಾರಣೆಯ ಮೂಲಕ ಪರಿಸರ ರಕ್ಷಣೆ ಮಾಡಬೇಕು ಇದಕ್ಕ ಪೂರಕವಾಗಿರುವ ಕಾನೂನಗಳನ್ನು ಅನುಪಾಲನೆ ಮಾಡಬೇಕು ಎಂದು ತಿಳಿಸಿದರು.

- Advertisement - 

ಈ ಶಾಲೆಯ ಪ್ರತಿ ನಿತ್ಯ ಪ್ರಾರ್ಥನೆ ಜೊತೆಯಲ್ಲಿ  ಸಂವಿಧಾನದ ಪೀಠಿಕೆ   ಹೇಳುತ್ತಾರೆ. ಈ ದಿನದ  ಆಚರಣೆಯಲ್ಲಿ ಶಾಲೆಯ 1 ರಿಂದ 7ನೇ ತರಗತಿಯ 94 ಮಕ್ಕಳು ಸಂವಿಧಾನದ ಪೀಠಿಕೆಯನ್ನು ಹೇಳಿದರು. ಮತ್ತು ಇದನ್ನು ಅರ್ಥೈಸಿಕೊಂಡು ಭಾಗವಹಿಸಿದವರಿಗೆ ನಮ್ಮ ದೇಶದ ಕಾನೂನುಗಳಿಗೆ ಗೌರವ ನೀಡಬೇಕು ಮತ್ತು ಅವುಗಳನ್ನು ಪಾಲನೆ ಮಾಡಬೇಕು ಎಂದು ತಿಳಿಸಿದರು.

 

 

Share This Article
error: Content is protected !!
";