ಚಂದ್ರವಳ್ಳಿ ನ್ಯೂಸ್, ಹೊಳಲ್ಕೆರೆ:
ಹೊಳಲ್ಕೆರೆ ತಾಲ್ಲೂಕಿನ ಶ್ರೀ ದತ್ತಾಶ್ರಮದಲ್ಲಿ ಇದೇ ನ.30 ರಿಂದ ಡಿಸೆಂಬರ್ 04 ರವರೆಗೆ ಶ್ರೀ ದತ್ತರಾಜಯೋಗೀಂದ್ರ ಸರಸ್ವತೀ ಪರಮಹಂಸರವರ 91ನೇ ವರ್ಷದ ಆರಾಧನಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.
ನ.30ರಂದು ಗಣಪತಿ ಹೋಮ, ಡಿ.01ರಂದು ಗಾಯತ್ರಿ ಹೋಮ, ಡಿ.02ರಂದು ಸತ್ಯನಾರಾಯಣ ಪೂಜೆ, ಡಿ.03ರಂದು ದತ್ತ ಹೋಮ ಮತ್ತು ಶ್ರೀ ಗುರುಭಿಕ್ಷೆ, ಡಿ.04ರಂದು ಶ್ರೀಗಳವರ ಆರಾಧನಾ ಪೂಜಾ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಮತ್ತು ಸಂತರ್ಪಣೆ ನಡೆಯಲಿದೆ.
ಆರಾಧನಾ ಮಹೋತ್ಸವದ ಅಂಗವಾಗಿ ಪ್ರತಿದಿನ ಬೆಳಿಗ್ಗೆ ನಿತ್ಯ ಭಜನೆ, ಕಾಕಡಾರತಿ, ರುದ್ರಾಭಿಷೇಕ, ಕುಂಕುಮಾರ್ಚನೆ, ಪಾರಾಯಣ ಹೋಮ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಹಾಗೂ ಸಂಜೆ ಭಜನೆ, ಅಷ್ಟಾವಧಾನ ಸೇವಾ, ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ ಎಂದು ಶ್ರೀ ಶಂಕರಲಿಂಗ ಭಗವಾನ್ ಸರಸ್ವತೀ ಪರಮಹಂಸ ಟ್ರಸ್ಟ್ ಪ್ರಕಟಣೆ ತಿಳಿಸಿದೆ.

