ಶುದ್ಧ ಕುಡಿವ ನೀರಿನ ಘಟಕಕ್ಕೆ ಚಾಲನೆ 

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಸುಮಾರು 500 ಮಕ್ಕಳಿಗೆ ಅನುಕೂಲವಾಗುವಂತಹ ಶುದ್ಧ ನೀರಿನ ಸುಮಾರು 3.5ಲಕ್ಷ ರೂಪಾಯಿಗಳ 250LHP ಸಾಮರ್ಥ್ಯವುಳ್ಳ ಆರ್ ಓ ಘಟಕವನ್ನು  ಸಿಎಸ್ಆರ್ ಅನುದಾನದ ಅಡಿಯಲ್ಲಿ ತಾಲ್ಲೂಕಿನ ಜವಾಹರ್ ಲಾಲ್ ನವೋದಯ ಶಾಲೆಗೆ ನೀಡಲಾಗಿದ್ದು. ಮಕ್ಕಳ ವಿದ್ಯಾಭ್ಯಾಸಕ್ಕೆ ಹಾಗೂ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವಿಕೆಗೆ ಸಹಕಾರಿಯಾಗಲಿದೆ ಎಂದು ಪರ್ಲ್ ಗ್ಲೋಬಲ್ ಸಂಸ್ಥೆಯ ಮುಖ್ಯಸ್ಥ ಉದಯ್ ಕುಮಾರ್ ಶೆಟ್ಟಿ ತಿಳಿಸಿದರು.  

ತಾಲ್ಲೂಕಿನ ಹೊರವಲಯದ ಜವಾಹರ್ ಲಾಲ್ ನವೋದಯ ಶಾಲೆಗೆ ಪರ್ಲ್ ಗ್ಲೋಬಲ್ ಕಂಪನಿ ವತಿಯಿಂದ ಸಿ ಎಸ್ ಆರ್ ಅನುದಾನದ ಅಡಿಯಲ್ಲಿ ನೀಡಲಾಗಿದ್ದ  250ಎಲ್ ಎಚ್ ಪಿ  ಸಾಮರ್ಥ್ಯವುಳ್ಳ  ಆರ್ ಓ ನೀರಿನ ಘಟಕಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

- Advertisement - 

ಸಿಎಸ್ಆರ್ ಅನುದಾನದ ಅಡಿಯಲ್ಲಿ  ಪ್ರತಿ ವರ್ಷವೂ ಹಲವಾರು ಸಮಾಜಮುಖಿ  ಕಾರ್ಯಕ್ರಮಗಳನ್ನು ಕೈಗೊಳ್ಳುತ್ತೇವೆ ಅಂತೆಯೇ ಈ ಬಾರಿ ನವೋದಯ ವಸತಿ ಶಾಲೆಯಲ್ಲಿ ಶುದ್ಧ ನೀರಿನ ಘಟಕದ ಅವಶ್ಯಕತೆ ಇದೆ ಎಂದು ಮನವಿ ಬಂದ ಹಿನ್ನೆಲೆ  ನಮ್ಮ ಪರ್ಲ್ ಗ್ಲೋಬಲ್ ತಂಡವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ  ನಡೆಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಮೂಲಕ  ನೂತನ ಶುದ್ಧ ಕುಡಿಯುವ ನೀರಿನ ಘಟಕವನ್ನು ಕಲ್ಪಿಸಿದ್ದು ಇಂದು ಈ ಘಟಕಕ್ಕೆ ಚಾಲನೆ ನೀಡಿದ್ದೇವೆ ಎಂದರು. 

 ಶಾಲೆಯ ಪ್ರಾಂಶುಪಾಲರಾದ ಪಳನಿ ವೇಲು ಮಾತನಾಡಿ ಮಕ್ಕಳ ಆರೋಗ್ಯ ಸ್ಥಿತಿಯನ್ನು ಉತ್ತಮವಾಗಿಡಲು ಉತ್ತಮ ಗುಣಮಟ್ಟದ ನೀರು ಸಹಕಾರಿಯಾಗುತ್ತದೆ. ನಮ್ಮ ಶಾಲೆಯ ಮಕ್ಕಳಿಗೆ ಅಗತ್ಯವಾಗಿದ್ದ ಶುದ್ಧಕುಡಿಯುವ ನೀರಿನ ಘಟಕವನ್ನು  ಪರ್ಲ್ ಗ್ಲೋಬಲ್ ಸಂಸ್ಥೆಯು ಕೊಡುಗೆಯಾಗಿ ನೀಡಿದೆ ನಮ್ಮ ಮನವಿಯನ್ನು ಶೀಘ್ರವಾಗಿ ಪರಿಗಣಿಸಿ ಉತ್ತಮ ಗುಣಮಟ್ಟದ ಗಂಟೆಗೆ  250   ಲೀಟರ್ ನೀರನ್ನು ನೀಡುವ ಸಾಮರ್ಥ್ಯವುಳ್ಳ  ಆರ್ ಓ ನೀರಿನ ಘಟಕ ನೀಡಿರುವ ಸಂಸ್ಥೆಗೆ ನಾವು ಆಭಾರಿಯಾಗಿದ್ದೇವೆ  ಎಂದರು.

- Advertisement - 

ಈ ವೇಳೆ ಕಾರ್ಖಾನೆ ಸಿಬ್ಬಂದಿಗಳಾದ ವ್ಯವಸ್ಥಾಪಕ ವಿಜಯ್ ಎನ್ ಅಂಜನ್, ಮಾನವ ಸಂಪನ್ಮೂಲ ಅಧಿಕಾರಿ ಅಥಉಲ್ಲ ಖಾನ್, ಸಹಾಯಕ ವ್ಯವಸ್ಥಾಪಕ ಭವನೇಶ್ ಬಂಡಾರಿ, ರಂಜೀತ್ ಸಹೋ, ಮಂಜುನಾಥ್ ಕೆ, ರವಿ ಪೂಜಾರಿ, ಅಶ್ವಿನ್ ಕುಮಾರ್, ಸುಧೀರ್ಶ್ರೀನಿವಾಸ್ಸೇರಿದಂತೆ  ಶಾಲೆಯ ಬೋಧಕ ಹಾಗೂ ಬೋಧಕೇತರ  ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Share This Article
error: Content is protected !!
";