ಮತದಾರರ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಡಿಸೆಂಬರ್ 10 ರವರೆಗೆ ಅವಕಾಶ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಪಶ್ಚಿಮ ಮತ್ತು ಆಗ್ನೇಯ ಪದವೀಧರ ಕ್ಷೇತ್ರಗಳು ಮತ್ತು ಕರ್ನಾಟಕ ಈಶಾನ್ಯ ಮತ್ತು ಬೆಂಗಳೂರು ಶಿಕ್ಷಕರ ಕ್ಷೇತ್ರಗಳ  ಕರಡು ಮತದಾರರ  ಪಟ್ಟಿಯನ್ನು  ಪ್ರಕಟಿಸಲಾಗಿದೆ  ಎಂದು  ರಾಜ್ಯ ಮುಖ್ಯ  ಚುನಾವಣಾಧಿಕಾರಿ ಕಛೇರಿಯ  ಜಂಟಿ ಮುಖ್ಯ ಚುನಾವಣಾಧಿಕಾರಿ (ಮತದಾರರ ಪಟ್ಟಿ) ಯೋಗೇಶ್ವರ ಎಸ್ ಅವರು  ತಿಳಿಸಿದ್ದಾರೆ.

ಭಾರತ ಚುನಾವಣಾ ಆಯೋಗದ ವೇಳಾ ಪಟ್ಟಿಯಂತೆ  ಸೆಪ್ಟೆಂಬರ್ 30 ರಂದು ಸಾರ್ವಜನಿಕ ಪ್ರಕಟಣೆ ಹೊರಡಿಸಲಾಗಿದ್ದು, ನಮೂನೆ 18 ಅಥವಾ 19 ರಲ್ಲಿ ಅರ್ಜಿಗಳನ್ನು ಸ್ವೀಕರಿಸಲು ನವೆಂಬರ್ 6 ಕೊನೆಯ ದಿನಾಂಕವಾಗಿತ್ತು.

- Advertisement - 

ಅದರಂತೆ ಮತದಾರರ ಕರಡು ಪಟ್ಟಿಯನ್ನು  ನವೆಂಬರ್ 25 ರಂದು ಪ್ರಕಟಿಸಲಾಗಿದೆ.
ಮತದಾರರ ಕರಡು ಪಟ್ಟಿಗೆ ಸಂಬಂಧಿಸಿದಂತೆ ನವೆಂಬರ್ 25 ರಿಂದ ಡಿಸೆಂಬರ್ 10 ರವರೆಗಿನ  ಹಕ್ಕು ಮತ್ತು ಆಕ್ಷೇಪಣೆಗಳ ಅವಧಿಯಲ್ಲಿ ಎಲ್ಲಾ ಅರ್ಹ ಪದವೀಧರರು ಮತ್ತು ಶಿಕ್ಷಕರು ತಮ್ಮ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದ್ದು, ಅಂತಿಮ ಮತದಾರರ ಪಟ್ಟಿಯನ್ನು ಡಿಸೆಂಬರ್ 30 ರಂದು ಪ್ರಕಟಿಸಲಾಗುವುದು  ಎಂದು ಅವರು  ತಿಳಿಸಿದ್ದಾರೆ.

ನವೆಂಬರ್ 25 ರಂದು  ಪ್ರಕಟಿಸಲಾದ ಕರಡು ಮತದಾರರ  ಪಟ್ಟಿಯಂತೆ  ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ  ಒಟ್ಟು 21496 ಮತದಾರರು  ನೋಂದಾಯಿಸಿಕೊಂಡಿದ್ದಾರೆ.  ಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ  ಒಟ್ಟು ನೋಂದಾಯಿತ ಮತದಾರರ ಸಂಖ್ಯೆ 28984, ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರದಲ್ಲಿ ನೋಂದಾಯಿತ ಮತದಾರರ ಸಂಖ್ಯೆ 151374  ಮತ್ತು ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರದಲ್ಲಿ  ಒಟ್ಟು 74311 ಮತದಾರರು ನೋಂದಾಯಿಸಿಕೊಂಡಿದ್ದಾರೆ.

- Advertisement - 

ಕರಡು ಮತದಾರರ ಪಟ್ಟಿಗಳಿಗೆ ಸಂಬಂಧಪಟ್ಟಂತೆ ಚುನಾವಣಾ ನೋಂದಣಿ ಅಧಿಕಾರಿಗಳು ಮತ್ತು ಪ್ರಾದೇಶಿಕ ಆಯುಕ್ತರು, ಸಹಾಯಕ ಚುನಾವಣಾ ನೋಂದಣಿ ಅಧಿಕಾರಿಗಳು ಮತ್ತು ಜಿಲ್ಲಾ ಚುನಾವಣಾ ಅಧಿಕಾರಿಗಳ ಕಚೇರಿಗಳಲ್ಲಿ

ಮತ್ತು ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿಗಳ ಅಧಿಕೃತ ವೆಬ್ ಸೈಟ್ https://ceo.karnataka.gov.in ನಲ್ಲಿ ಮತ್ತು ಸಂಬಂಧಪಟ್ಟ ಪ್ರಾದೇಶಿಕ ಆಯುಕ್ತರು ಮತ್ತು ಜಿಲ್ಲಾ ಚುನಾವಣಾ ಅಧಿಕಾರಿಗಳ ವೆಬ್ ಸೈಟ್ ಗಳಲ್ಲಿ  ಲಭ್ಯವಿದೆ ಎಂದು ಕರ್ನಾಟಕ, ಮುಖ್ಯ  ಚುನಾವಣಾಧಿಕಾರಿ ಕಛೇರಿಯ  ಜಂಟಿ ಮುಖ್ಯ ಚುನಾವಣಾಧಿಕಾರಿ (ಮತದಾರರ ಪಟ್ಟಿ) ಯೋಗೇಶ್ವರ ಎಸ್ ಅವರು ಅಧಿಕೃತ ಪಕ್ರಟಣೆಯಲ್ಲಿ  ತಿಳಿಸಿದ್ದಾರೆ.

 

 

Share This Article
error: Content is protected !!
";