ಅದ್ಧೂರಿಯಾಗಿ ನಡೆದ ಕಸಾಪ ನೂತನ ಘಟಕದ ಪದಗ್ರಹಣ, ಕನ್ನಡ ರಾಜ್ಯೋತ್ಸವ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಜೆ.ಜಿ.ಹಳ್ಳಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ನೂತನ ಘಟಕದ ಪದಗ್ರಹಣ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲಾಯಿತು.

ಹೋಬಳಿ ಘಟಕದ ನೂತನ ಅಧ್ಯಕ್ಷರಾಗಿ ನೇಮಕ ಆಗಿರುವ ವೀರೇಶ್ ರವರಿಗೆ ಹೋಬಳಿ ಘಟಕದ ನಿಕಟಪೂರ್ವ ಅಧ್ಯಕ್ಷ ನಿರಂಜನಮೂರ್ತಿ.ಬಿ ರವರು ಕನ್ನಡ ಭಾವುಟ ಹಸ್ತಾಂತರಿಸುವ ಮೂಲಕ ಜವಾಬ್ದಾರಿ ಹಸ್ತಾಂತರಿಸಿ ಮಾತನಾಡಿ ಹೋಬಳಿ ವ್ಯಾಪ್ತಿಯಲ್ಲಿ ಯುವ ಬರಹಗಾರರಿಗೆ ಉತ್ತೇಜನ ನೀಡುತ್ತಾ ಕನ್ನಡದ ಸಂಘಟನೆಯನ್ನು ಉತ್ತಮವಾಗಿ ನಡೆಸಿಕೊಂಡು ಹೋಗುವಂತೆ ನೂತನ ಅಧ್ಯಕ್ಷ ವೀರೇಶ್ ರವರಿಗೆ ಅಭಿನಂದಿಸಿದರು.

- Advertisement - 

ತಾಲೂಕು ಕಸಾಪ ಕೋಶಾಧ್ಯಕ್ಷ ಜಿ ಪ್ರೇಮಕುಮಾರ್ ಮಾತನಾಡಿ ನಾಡು ನುಡಿ ಭಾಷೆಗಾಗಿ ಸದಾಕಾಲ ಕನ್ನಡಪರ ಹೋರಾಟಗಳಿಗೆ ಜೆಜ್ಜಿಹಳ್ಳಿ ಹೋಬಳಿ ಘಟಕ ಮುಂಚೂಣಿಯಲ್ಲಿದ್ದು ತಾಲೂಕು ಘಟಕದೊಂದಿಗೆ ಸಹಕರಿಸಬೇಕೆಂದು ಸೂಚಿಸಿದರು.

ತಾಲೂಕು ಕಸಾಪ ಅಧ್ಯಕ್ಷ ರಾಮಚಂದ್ರಪ್ಪ ಮಾತನಾಡಿ ಎಲ್ಲಾ ಭಾಷೆಗಳಿಗೂ ಕನ್ನಡ ಭಾಷೆ ರಾಣಿ ಭಾಷೆ ಇದ್ದಂತೆ ಇಂಥ ಶ್ರೀಮಂತಿಕೆ ಇರುವ ನಮ್ಮ ಕನ್ನಡ ಭಾಷೆಯನ್ನು ಉತ್ತುಂಗಕ್ಕೆ ಕೊಂಡೊಯ್ಯಲು ನಾವೆಲ್ಲರೂ ಶ್ರಮಿಸೋಣ ಎಂದರು.

- Advertisement - 

ಈ ಸಂದರ್ಭದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಕರಿಯೋಬನಹಳ್ಳಿ ಪ್ರಹ್ಲಾದ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪ್ರಶಸ್ತಿ ಪುರಸ್ಕೃತೆ ಸರಸ್ವತಿ ರವರನ್ನು ಸನ್ಮಾನಿಸಲಾಯಿತು. ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಶಿವಣ್ಣ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ನಗರಸಭೆ ಮಾಜಿ ಸದಸ್ಯ ರವಿಚಂದ್ರ, ಜೆ.ಜಿ.ಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅಲ್ತಾಫ್ ಅಹಮದ್ ಹಾಲಿ ಅಧ್ಯಕ್ಷ ಮಹಾಲಿಂಗಪ್ಪ, ಐಮಂಗಳ ಹೋಬಳಿ ಕಸಾಪ ಅಧ್ಯಕ್ಷ ತಿಪ್ಪೇಸ್ವಾಮಿ, ಸಾಹಿತಿ ಕರಿಯೋಬನಹಳ್ಳಿ ಪ್ರಹ್ಲಾದ್, ಮುಖ್ಯ ಶಿಕ್ಷಕ ತಿಪ್ಪೇಸ್ವಾಮಿ, ಬಳ್ಳಾರಿ ರಘು, ನರಸಿಂಹಮೂರ್ತಿ, ಈಶ್ವರಪ್ಪ, ನಾಗರಾಜ, ಚಿತ್ತಯ್ಯ, ಈರಣ್ಣ, ಶಶಿಕುಮಾರ್, ಸದಾಕತ್, ಉಜ್ಜಯಿನಿ, ಚಿತ್ರಲಿಂಗಪ್ಪ , ವೀರಭದ್ರಪ್ಪ, ಮಂಜುನಾಥ್, ಕೃಷ್ಣಮೂರ್ತಿ ಮುಂತಾದವರು ಉಪಸ್ಥಿದ್ದರು.

 

 

Share This Article
error: Content is protected !!
";