ಕಾಲೇಜ್, ಹಾಸ್ಟೆಲ್ ಕ್ಯಾಂಪಸ್ ಗಳಲ್ಲಿ ವಿದ್ಯಾರ್ಥಿನಿಯರ ರಕ್ಷಣೆ ಮಾಡಿ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸರ್ಕಾರಿ ಕಲಾ ಕಾಲೇಜು ಮತ್ತು ವಿಜ್ಞಾನ ಕಾಲೇಜು ಪಾಲಿಟೆಕ್ನಿಕ್ ಕಾಲೇಜ್, ಐಟಿಐ, ಎಸ್ ಜೆಎಂ, ಕಾನೂನು ಕಾಲೇಜಿನ ವಿದ್ಯಾರ್ಥಿಗಳು ನಮ್ಮ ಕಾಲೇಜಿನ ಪ್ರಾಂತ್ಯದಲ್ಲಿ ಬಹಳ ವರ್ಷಗಳ ಕಾಲ ವಿದ್ಯಾರ್ಥಿಗಳ ಸುರಕ್ಷತೆ, ಸಾರಿಗೆ ವ್ಯವಸ್ಥೆ, ಸಾರ್ವಜನಿಕ ಶಾಂತಿಗೆ ಸಮಸ್ಯೆಗಳು ಹೆಚ್ಚುತ್ತಿವೆ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಚಿತ್ರದುರ್ಗ ಆತಂಕ ವ್ಯಕ್ತಪಡಿಸಿದೆ.

ಅನಧಿಕೃತ ತಂಗಾಟ, ಬೈಕ್ ಸ್ಟಂಟ್ ಗಳು ಹಲ್ಲೆ, ಜಗಳ ವಿಶೇಷವಾಗಿ ಕಾಲೇಜು ಬೆಳಗ್ಗೆ ಮತ್ತು ಸಂಜೆ ಬಿಡುವಿನ ಸಮಯದಲ್ಲಿ ಅನಗತ್ಯವಾಗಿ ಗುಂಪುಗೂಡುವುದು ಹಾಗೂ ಕೆಲವೊಂದು ಅಸಭ್ಯ ವರ್ತನೆಗಳು ಕಂಡು ಬರುತ್ತವೆ.

- Advertisement - 

ಪ್ರಮುಖವಾಗಿ ಸರ್ಕಾರಿ ಕಲಾ ಕಾಲೇಜಿನ ಪ್ರಾಂತ್ಯದಲ್ಲಿರುವ ಬಿಸಿಎಂ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಮೈನಾರಿಟಿ, ಬಾಲ ಮಂದಿರ ಸೇರಿದಂತೆ ಮಹಿಳಾ ಮತ್ತು ಪುರುಷ ಹಾಸ್ಟೆಲ್ ಗಳಿದ್ದು ಇದರಿಂದ ವಿದ್ಯಾರ್ಥಿಗಳು ಪೋಷಕರು ಮತ್ತು ಸಿಬ್ಬಂದಿಗಳು ಆತಂಕಗೊಂಡಿರುವ ಪರಿಸ್ಥಿತಿ ಉಂಟಾಗಿದೆ.

ಇದನೆಲ್ಲ ಪರಿಗಣಿಸಿ ಕಾಲೇಜಿನ ಸುತ್ತ ಮುತ್ತ ಪೊಲೀಸ್ ಬೀಟ್ ನೇಮಿಸಿ, ವಿಶೇಷವಾಗಿ ಸ್ವಾಮಿ ವಿವೇಕಾನಂದ ರಸ್ತೆ ಜಿಲ್ಲಾ ಪಂಚಾಯತ್ ರಸ್ತೆ, ಟೀಚರ್ ಕಾಲೋನಿ ರಸ್ತೆ, ಎಸ್ಸಿ, ಎಸ್ಟಿ ಬಾಲಕಿಯರ ಹಾಸ್ಟೆಲ್ ರಸ್ತೆ , ಈ ನಾಲ್ಕು ರಸ್ತೆ ಹಾದು ಹೋಗುವ ಮಧ್ಯದಲ್ಲಿ ಚೌಕ ಮತ್ತು ಸಿ ಸಿ ಕ್ಯಾಮೆರಾ ಅಳವಡಿಸಬೇಕು ಎಂದು ಎಬಿವಿಪಿ ಆಗ್ರಹಿಸಿದೆ.

- Advertisement - 

 ಈ ಸಂದರ್ಭದಲ್ಲಿ ಪ್ರಾಂತ ಸಮಿತಿ ಸದಸ್ಯರಾದ ಕನಕ ರಾಜ್ ಕೋಡಿಹಳ್ಳಿ, ಕಾರ್ಯಕರ್ತರಾದ ಕೆ ಟಿ ತರುಣ್ ಕುಮಾರ್, ಕುಬೇರ, ಚರಣ್, ರಾಜು, ಮಧು, ನವೀನ್, ಗುರು ಕಿರಣ್, ಅಮಿತ್ ಉಪಸ್ಥಿತರಿದ್ದರು.

 

 

Share This Article
error: Content is protected !!
";