ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದೊಡ್ಡಬಳ್ಳಾಪುರ ತಾಲೂಕು ಇವರ ವತಿಯಿಂದ ತೂಬಗೆರೆ ವೃದ್ಧಾಶ್ರಮದಲ್ಲಿ ಸಾಮಾಜಿಕ ಅರಣೀಕರಣ ಕಾರ್ಯಕ್ರಮದಡಿಯಲ್ಲಿ ಹಣ್ಣಿನ ಗಿಡ ನಾಟಿ ಮಾಡಲಾಯಿತು.
ಯೋಜನಾಧಿಕಾರಿ ದಿನೇಶ್ ಗಿಡ ನಾಟಿ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷ ಧನಂಜಯ್, ಒಕ್ಕೂಟದ ಪದಾಧಿಕಾರಿ ಸವಿತಾ, ತಾಲೂಕು ಕೃಷಿ ಮೇಲ್ವಿಚಾರಕ ಲೋಹಿತ್ ಗೌಡ, ಮೇಲ್ವಿಚಾರಕ ಈರಣ್ಣ,
ವೃದ್ಧಾಶ್ರಮ ಟ್ರಸ್ಟಿನ ಚಂದ್ರಮೋಹನ್ ಮತ್ತು ಸಿಬ್ಬಂದಿಗಳು, ಶಿವಪುರ ಶೌರ್ಯ ಘಟಕದ ಪದಾಧಿಕಾರಿಗಳು, ವೃದ್ಧಾಶ್ರಮ ಟ್ರಸ್ಟಿನ ಸದಸ್ಯರುಗಳು, ಸೇವಾಪ್ರತಿನಿಧಿ ರಿಜ್ವಾನ್, ರತ್ನಮ್ಮ ಮತ್ತಿತರರು ಉಪಸ್ಥಿತರಿದ್ದರು.

