ಕಡಿಮೆ ತೂಕದ ಮಗುವಿಗೆ ಕಾಂಗರೋ ಮದರ್ ಕೇರ್ ರಾಮಬಾಣ-ಡಾ.ರಂಜಿತಾ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಕಡಿಮೆ ತೂಕದ ಮಗುವಿಗೆ ಕಾಂಗರೋ ಮದರ್ ಕೇರ್ ರಾಮಬಾಣ ಎಂದು ಹಿರಿಯೂರು ತಾಲ್ಲೂಕು ಯರಬಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರಂಜಿತಾ ಹೇಳಿದರು.

ಹಿರಿಯೂರು ತಾಲ್ಲೂಕಿನ ಯರಬಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಜಿಲ್ಲಾ ಆರೋಗ್ಯ ಇಲಾಖೆ, ಕೆಹೆಚ್‍ಪಿಟಿ, ಐಸಿಎಂಆರ್, ಸೆಂಟ್ ಜಾನ್ ಆಸ್ಪತ್ರೆ ಸಹಯೋಗದಲ್ಲಿ ತಾಯಿ ಮತ್ತು ಮಕ್ಕಳ ಆರೋಗ್ಯದ ಕುರಿತು ಹಮ್ಮಿಕೊಂಡಿದ್ದ ಒಂದು ದಿನದ ತರಬೇತಿಯಲ್ಲಿ ಅವರು ಮಾತನಾಡಿದರು.

- Advertisement - 

  ಶಿಶು ಮರಣ ಮತ್ತು ತಾಯಿ ಮರಣವನ್ನು ಕಡಿಮೆ ಮಾಡುವ ಕೆಲಸ ನಾವೆಲ್ಲರೂ ಮಾಡೋಣ ಎಂದು ಹೇಳಿದರು.
ನರ್ಸ್ ಮೆಂಟರ್ ಗುರುಪ್ರಸಾದ್ ಹಾಗೂ ಅಬ್ಬಾಸ್ ಅವರು, ಮುಂಗಡ ಗರ್ಭಿಣಿಯರ ನೊಂದಣಿ, ಗಂಡಾತರ ಗರ್ಭಿಣಿಯರು, ಹೆರಿಗೆಯ ಪೂರ್ವ ಸಿದ್ಧತೆ, ತಡವಾಗಿ ಗರ್ಭಿಣಿಯರ ನೊಂದಣಿ, ಸ್ತನ್ಯಪಾನ ಹಾಗೂ ವೈಯುಕ್ತಿಕ ಸ್ವಚ್ಛತೆಯ ಕುರಿತು ಶಿಬಿರಾರ್ಥಿಗಳಿಗೆ ಮನಮುಟ್ಟುವಂತೆ ತರಬೇತಿ ನೀಡಿದರು.

ಕಾರ್ಯಕ್ರಮದಲ್ಲಿ ಐಸಿಎಂಆರ್ ತಂಡದ ಎನ್.ಉಮೇಶ್, ಮೇಘ, ಗುರುಪ್ರಸಾದ್, ಅಬ್ಬಾಸ್, ವೆಂಕಪ್ಪ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿಗಳು, ಆಸ್ಪತ್ರೆಯ ಸಿಬ್ಬಂದಿ ವರ್ಗದವರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.

- Advertisement - 

 

 

 

Share This Article
error: Content is protected !!
";