ರಾಜ ಭವನ ಬದಲಿಗೆ ಲೋಕ ಭವನ ಎಂದು ಮರುನಾಮಕರಣ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೇಂದ್ರ ಗೃಹ ಸಚಿವಾಲಯದ ತೀರ್ಮಾನದಂತೆ ದೇಶದಾದ್ಯಂತ ಇರುವ ರಾಜ್ಯಪಾಲರುಗಳ ರಾಜ ಭವನ ಹೆಸರನ್ನು ಲೋಕಭವನ ಎಂದು ಮರು ನಾಮಕರಣ ಮಾಡಲಾಗಿದ್ದು
, ಕರ್ನಾಟಕದ  ರಾಜ ಭವನವನಕ್ಕೂ ಸಹ ಹೊಸ ಹೆಸರು ನಾಮಕರಣ ಮಾಡಿ ಆದೇಶಿಸಲಾಗಿದೆ.

ಭಾರತ ಸರ್ಕಾರದ ಗೃಹ ಸಚಿವಾಲಯದ ಸೂಚನೆ ಹಾಗೂ ರಾಜ್ಯಪಾಲರ ಅನುಮೋದನೆಯಂತೆ ಈ ಮಹತ್ವದ ಬದಲಾವಣೆ ಜಾರಿಗೆ ಬಂದಿದೆ.

- Advertisement - 

ಬೆಂಗಳೂರಿನಲ್ಲಿರುವ ರಾಜ್ಯಪಾಲರ ನಿವಾಸಕ್ಕೆ ರಾಜ ಭವನ ಎಂದು ಹೆಸರಿಡಲಾಗಿತ್ತು. ಈಗ ಆ ಹೆಸರಿನ ಬದಲಿಗೆ ಲೋಕ ಭವನ, ಕರ್ನಾಟಕ ಎಂದು ಮರು ನಾಮಕರಣ ಮಾಡಲಾಗಿದೆ.
ಈ ಹೊಸ ಹೆಸರು ತಕ್ಷಣದಿಂದಲೇ ಅನ್ವಯವಾಗಲಿದ್ದು
, ಇನ್ಮುಂದೆ ಅಧಿಕೃತವಾಗಿ ಲೋಕ ಭವನ ಕರ್ನಾಟಕ ಎಂದೇ ಕರೆಯಲಾಗುತ್ತದೆ.

ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಬುಧವಾರ ಪತ್ರ ಬರೆದಿರುವ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್ ಪ್ರಭುಶಂಕರ್, ಹೆಸರು ಬದಲಾವಣೆಗೆ ರಾಜ್ಯಪಾಲ ಥಾವರ್​ ಚಂದ್ ಗೆಹ್ಲೋಟ್ ಅವರು ಅನುಮೋದನೆ ನೀಡಿದ್ದು, ತಕ್ಷಣದಿಂದ ಜಾರಿಗೆ ಬರಲಿದೆ.

- Advertisement - 

ಮುಂದಿನ ದಿನಗಳಲ್ಲಿ ಸರ್ಕಾರದ ಎಲ್ಲ ಇಲಾಖೆಗಳು, ಸರ್ಕಾರಿ ಆದೇಶಗಳು, ಅಧಿಕೃತ ಪತ್ರ ವ್ಯವಹಾರಗಳು, ವೆಬ್​​ಸೈಟ್​​​ಗಳು ಹಾಗೂ ಫಲಕಗಳಲ್ಲಿ ರಾಜಭವನ ಕರ್ನಾಟಕ ಬದಲು ಲೋಕಭವನ ಕರ್ನಾಟಕ ಅಂತ ಬಳಸಬೇಕೆಂದು ಪತ್ರದಲ್ಲಿ ತಿಳಿಸಿದ್ದಾರೆ.

ಕೇಂದ್ರ ಗೃಹ ಇಲಾಖೆ ನವೆಂಬರ್ 25, 2025ರಂದು ಎಲ್ಲ ರಾಜ್ಯಗಳ ರಾಜ್ಯಪಾಲರು ಮತ್ತು ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗವರ್ನರ್‌ಗಳಿಗೆ ಪತ್ರ ಬರೆದು, ರಾಜಭವನಗಳನ್ನು ಲೋಕಭವನಎಂದು ಮರುನಾಮಕರಣ ಮಾಡುವಂತೆ ಶಿಫಾರಸು ಮಾಡಿತ್ತು.

ಇದರ ಬೆನ್ನಲ್ಲೇ ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದಲ್ಲಿ ಜಾರಿಗೆ ತರಲಾಗಿದ್ದು ಕೋಲ್ಕತ್ತಾ ಮತ್ತು ಡಾರ್ಜಿಲಿಂಗ್‌ನ ರಾಜಭವನಗಳನ್ನು ಲೋಕಭವನಎಂದು ಮರುನಾಮಕರಣ ಮಾಡಲಾಗಿತ್ತು. ಈಗ ಕರ್ನಾಟಕದ ರಾಜಭವನಕ್ಕೂ ಮರುನಾಮಕರಣ ಮಾಡಲಾಗಿದೆ.

Share This Article
error: Content is protected !!
";