ಎಲೆಕ್ಟ್ರಿಕ್​ ವಾಹನ ಮಾರಾಟದಿಂದ 5 ಕೋಟಿ ಉದ್ಯೋಗ

News Desk

ಚಂದ್ರವಳ್ಳಿ ನ್ಯೂಸ್, ನವದೆಹಲಿ:
ದೇಶಾದ್ಯಂತ ಎಲೆಕ್ಟ್ರಿಕ್​ ವಾಹನ (ಇವಿ)ಗಳ ಮಾರುಕಟ್ಟೆಯ ಒಟ್ಟಾರೆ ಮೌಲ್ಯವು 2030ರ ಹೊತ್ತಿಗೆ 20 ಲಕ್ಷ ಕೋಟಿ ರೂ. ದಾಟಲಿದ್ದು
5 ಕೋಟಿ ಹೊಸ ಉದ್ಯೋಗ ಸೃಷ್ಟಿಸಲಿದೆ ಎಂದು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್​ ಗಡ್ಕರಿ ತಿಳಿಸಿದರು.

ಕೇಂದ್ರ ಭೂ ಸಾರಿಗೆ ಸಚಿವ ನಿತೀಶ್ ಗಡ್ಕರಿ ಅವರು ಬಿಜೆಪಿ ಸಂಸದ ಪಿಸಿ ಮೋದಿ ಅವರ ಪ್ರಶ್ನೆಗೆ ಉತ್ತರಿಸಿ, ಭಾರತದಲ್ಲಿ 57 ಲಕ್ಷ ಇವಿಗಳು ನೋಂದಾಯಿಸಲ್ಪಟ್ಟಿದ್ದು, 2024-25ರಲ್ಲಿ ಇದರ ಮಾರಾಟ ವೇಗ ಪಡೆದಿದೆ ಎಂದು ಸಚಿವರು ತಿಳಿಸಿದರು.

- Advertisement - 

ಪೆಟ್ರೋಲ್​ ಮತ್ತು ಡಿಸೇಲ್​ ಕಾರಿನ ಮಾರಾಟ ಶೇ 4.2ರಷ್ಟು ಹೆಚ್ಚಾದರೆ ಇವಿ ಕಾರಿನ ಮಾರಾಟ 20.8ರಷ್ಟು ಹೆಚ್ಚಾಗಿದೆ. ಪೆಟ್ರೋಲ್​ ಮತ್ತು ಡಿಸೇಲ್​ ದ್ವಿಚಕ್ರ ವಾಹನಗಳ ಮಾರಾಟ ಶೇ 14ರಷ್ಟಾಗಿದ್ದರೆ, ಇವಿಗಳ ಶೇ. 33ರಷ್ಟು ಹೆಚ್ಚಾಗಿದೆ. ಇನ್ನು ತ್ರಿಚಕ್ರ ವಾಹದಲ್ಲಿ ಪೆಟ್ರೋಲ್​ ಮತ್ತು ಡಿಸೇಲ್​ ವಾಹನ ಮಾರಾಟದಲ್ಲಿ ಶೇ. 6ರಷ್ಟು ಏರಿಕೆ ಕಂಡರೆ, ಇವಿ ವಾಹನದಲ್ಲಿ ಶೇ. 18ರಷ್ಟು ಏರಿಕೆ ಕಂಡಿದೆ ಎಂದು ಮಾಹಿತಿ ನೀಡಿದರು.

2030ರ ಹೊತ್ತಿಗೆ ಭಾರತದ ಇವಿ ಮಾರುಕಟ್ಟೆ ಸಾಮರ್ಥ್ಯ ವಾರ್ಷಿಕ 1 ಕೋಟಿ ವಾಹನ ಮಾರಾಟದೊಂದಿಗೆ 20 ಲಕ್ಷ ಕೋಟಿ ತಲುಪಲಿದ್ದು, 5 ಕೋಟಿ ಹೊಸ ಉದ್ಯೋಗ ಸೃಷ್ಟಿಸಲಿದೆ. 400ಕ್ಕೂ ಹೆಚ್ಚು ಸ್ಟಾರ್ಟ್​ಅಪ್​ಗಳು ದ್ವಿಚಕ್ರ ವಾಹನ ಮಾರುಕಟ್ಟೆ ಉದ್ಯಮ ಆರಂಭಿಸಿದ್ದು 2024ರಲ್ಲಿ ಇದು ಶೇ 21ರಷ್ಟು ಏರಿಕೆ ಕಂಡಿದೆ ಎಂದು ನಿತಿನ್ ಗಡ್ಕರಿ ತಿಳಿಸಿದರು.

- Advertisement - 

ಲಿಥಿಯಂ-ಐಯಾನ್ ಬ್ಯಾಟರಿಗಳ ಬೆಲೆ ಪ್ರತಿ ಕಿಲೋವ್ಯಾಟ್-ಗಂಟೆಗೆ 55 ಡಾಲರ್‌ಗಳಿಗೆ ಇಳಿದಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿರುವ 6 ಮಿಲಿಯನ್ ಟನ್ ಲಿಥಿಯಂ ನಿಕ್ಷೇಪಗಳು ದೇಶಕ್ಕೆ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ ಎಂದು ಸಚಿವರು ಇದೇ ವೇಳೆ ತಿಳಿಸಿದರು.

ಇವಿಗಳಿಗೆ ನಿರ್ಧಾರ ತೆಗೆದುಕೊಂಡಾಗ ಲಿಥಿಯಂ-ಐಯಾನ್ ಬ್ಯಾಟರಿಯ ಬೆಲೆ ಪ್ರತಿ ಕಿಲೋವ್ಯಾಟ್-ಗಂಟೆಗೆ 150 ಡಾಲರ್​ನಷ್ಟಿತು. ಆದರೆ ಈಗ ಅದು ಪ್ರತಿ ಕಿಲೋವ್ಯಾಟ್-ಗಂಟೆಗೆ 55 ಡಾಲರ್​ಗೆ ಇಳಿದಿದೆ. ಇದು ಉತ್ತಮ ಸೂಚನೆ. ಒಳ್ಳೆಯ ಸುದ್ದಿ ಎಂದರೆ, ಜಮ್ಮು ಮತ್ತು ಕಾಶ್ಮೀರವು 6 ಮಿಲಿಯನ್ ಟನ್ ಲಿಥಿಯಂ ನಿಕ್ಷೇಪಗಳನ್ನು ಹೊಂದಿದೆ. ಇದು ವಿಶ್ವದ ಒಟ್ಟು ಲಿಥಿಯಂ ನಿಕ್ಷೇಪದ ಆರು ಪ್ರತಿಶತಷ್ಟಿದೆ.

ಗಣಿಗಾರಿಕೆ ಸಚಿವಾಲಯವು ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ನಾವು ಲಿಥಿಯಂ ಅಯಾನ್, ಸೋಡಿಯಂ ಅಯಾನ್, ಅಲ್ಯೂಮಿನಿಯಂ ಅಯಾನ್ ಮತ್ತು ಸತು ಅಯಾನ್ ಬಗ್ಗೆಯೂ ಸಂಶೋಧನೆ ನಡೆಸುತ್ತಿದ್ದೇವೆ ಎಂದು ಕೇಂದ್ರ ಸಚಿವರು ತಿಳಿಸಿದರು.

ಭವಿಷ್ಯದ ಇಂಧನವೆಂದರೆ ಹೈಡ್ರೋಜನ್. ಇಂದು ನಾವು ಇಂಧನವನ್ನು ಅಮದು ಮಾಡುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ, ಆತ್ಮನಿರ್ಭರ ಭಾರತದ ಅಡಿಯಲ್ಲಿ, ನಾವು ರಫ್ತುದಾರರಾಗುತ್ತೇವೆ ಎಂಬ ವಿಶ್ವಾಸವಿದೆ ಎಂದು ನಿತಿನ್ ಗಡ್ಕರಿ ತಿಳಿಸಿದರು.

 

Share This Article
error: Content is protected !!
";