ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಾಸ್ತವ ಸಾಧನೆಗಳಿಗೆ ಈಗ ಘನತೆವೆತ್ತ ನ್ಯಾಯಮೂರ್ತಿಗಳೂ ಷರಾ ಬರೆಯುವಂತಾಗಿದೆ. ಕಾಂಗ್ರೆಸ್ ಸರ್ಕಾರದ 2.5 ವರ್ಷಗಳ ಭ್ರಷ್ಟಾಚಾರ, ದುರಾಡಳಿತಕ್ಕೆ ಇದಕ್ಕಿಂತ ದೊಡ್ಡ ಸಾಕ್ಷ್ಯ ಬೇಕೇ? ಕೋಟಿ ಕೋಟಿ ಹಗರಣ, ಖಜಾನೆ ಲೂಟಿ ಮತ್ತು
ದುರಾಡಳಿತದ ಸಾರಾಂಶವೇ ‘ಶೇ.63‘ ರಷ್ಟು ಭ್ರಷ್ಟಾಚಾರ! ಭ್ರಷ್ಟಾಚಾರದ ಪಟ್ಟಿಯಲ್ಲಿ ರಾಜ್ಯವನ್ನು 5ನೇ ಸ್ಥಾನಕ್ಕೇರಿಸಿದ ಕರ್ನಾಟಕ ಕಾಂಗ್ರೆಸ್ ಸರ್ಕಾರದ ‘ಸಾಧನೆ‘ಯನ್ನೇ ಉಪಲೋಕಾಯುಕ್ತರು ಹೇಳಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.
ರಾಜ್ಯದ ಮಾನ ಹೋದರೂ ಇವರಿಗೆ ಚಿಂತೆಯಿಲ್ಲ. ಈ ಮಹಾಸಾಧನೆಯನ್ನು ಮುಂದುವರಿಸಿಕೊಂಡು ಹೋಗಲು ಇವರುಗಳು ಕುರ್ಚಿ ಕದನ ನಡೆಸುತ್ತಿದ್ದಾರೆಯೇ? ಭ್ರಷ್ಟಾಚಾರದಲ್ಲಿ ಶೇ 63 ರಿಂದ ಶೇ 100 ‘ಸಾಧನೆ‘ ಮಾಡಬೇಕು ಎನ್ನುವುದೇ ಇವರ ಗುರಿಯೇ?
ಈ ಕಾಂಗ್ರೆಸ್ ಸರ್ಕಾರಕ್ಕೆ ಜನಸೇವೆ, ರಾಜ್ಯದ ಪ್ರತಿಷ್ಠೆಗಿಂತಲೂ ಭ್ರಷ್ಟಾಚಾರವೇ ಮುಖ್ಯವಾಗಿದೆ. ಕಡುಭ್ರಷ್ಟ, ಜನವಿರೋಧಿ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.

