ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಆಧ್ಯಾತ್ಮಿಕ ಜೀವನಕ್ಕೆ ಅತಿಯಾದ ಕೋಪ ಒಳ್ಳೆಯದಲ್ಲ ಎಂದು ಚಳ್ಳಕೆರೆಯ ಶಿವನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಮುಖ್ಯಸ್ಥರಾದ ಶ್ರೀಮತಿ ಜಿ ಯಶೋಧಾ ಪ್ರಕಾಶ್ ತಿಳಿಸಿದರು.
ಶಿವನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ ಕಾರ್ಯಕ್ರಮ ಮಾಡುತ್ತ ಮಾತನಾಡುತ್ತಿದ್ದರು.
ಈ ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಶ್ರೀದೇವಿಸ್ತುತಿ ಪಠಣ ಮತ್ತು ವಿಶೇಷ ಭಜನಾ ಕಾರ್ಯಕ್ರಮ ನಡೆಯಿತು.
ಸತ್ಸಂಗ ಕಾರ್ಯಕ್ರಮದಲ್ಲಿ ಸದ್ಭಕ್ತರಾದ ಲೀಲಾವತಿ ಬಸವರಾಜ, ಸುಧಾಮಣಿ, ಗೀತಾಲಕ್ಷ್ಮೀ, ರಶ್ಮಿ ವಸಂತ, ಪಿ.ಎಸ್.ಮಾಣಿಕ್ಯ, ಸತ್ಯನಾರಾಯಣ, ರಶ್ಮಿ ರಮೇಶ್, ಶೈಲಜಾ, ಕೃಷ್ಣವೇಣಿ, ಸಂಗೀತ, ನಾಗರತ್ನಮ್ಮ, ಶಾರದಾಮ್ಮ, ವೀರಮ್ಮ, ಕವಿತಾ, ಗುರುಮೂರ್ತಿ, ಯತೀಶ್ ಎಂ ಸಿದ್ದಾಪುರ, ಸರಸ್ವತಿ, ಭ್ರಮರಂಭಾ, ದ್ರಾಕ್ಷಾಯಣಿ, ಮಂಗಳಾ ಪಾಲ್ಗೊಂಡಿದ್ದರು.

