ನಗರಸಭೆ ಆಡಳಿತ ಸರಿದಾರಿಗೆ-ಶಾಸಕ ರಘುಮೂರ್ತಿ

News Desk

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ
ನಗರಸಭೆಯ ಆಡಳಿತದ ಬಗ್ಗೆ ಸಾರ್ವಜನಿಕರೂ ಸೇರಿದಂತೆ ವಿವಿಧ ಮೂಲಗಳಿಂದ ಆರೋಪಗಳ ಸುರಿಮಳೆಯೇ ವ್ಯಕ್ತವಾಗುತ್ತಿದೆ
, ಹಲವಾರು ಬಾರಿಶಾಸಕ ಟಿ.ರಘುಮೂರ್ತಿ ಸಭೆ ನಡೆಸಿ ಪೌರಾಯುಕ್ತ ಜಗರೆಡ್ಡಿ ಸೇರಿದಂತೆ ಎಲ್ಲರಿಗೂ ಕಟ್ಟುನಿಟ್ಟಿನ ನಿರ್ದೇಶನ ನೀಡಿದರೂ ನಗರಭೆ ಆಡಳಿತದಲ್ಲಿ ಯಾವುದೇ ಬದಲಾವಣೆ ಇದುವರೆಗೂ ಕಂಡುಬಂದಿಲ್ಲ.
ಈ ಬಗ್ಗೆ ನಗರಸಭೆ ಆಡಳಿತಕ್ಕೆ ಚುರುಕುಮುಟ್ಟಿಸಿ ಸುಲಲಿತ ಆಡಳಿತ ಜನರಿಗೆ ನೀಡಬೇಕೆಂಬ ದೃಷ್ಠಿಯಿಂದ ಮತ್ತೊಮ್ಮೆ ಶಾಸಕರು ಆಡಳಿತಾಧಿಕಾರಿಯಾದ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಉಪಸ್ಥಿತಿಯಲ್ಲಿ ಶುಕ್ರವಾರ ಮತ್ತೊಮ್ಮೆ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಪ್ರಗತಿಪರಿಶೀಲನಾ ಸಭೆ ನಡೆಸಿದರು.

ಶಾಸಕ, ಸಣ್ಣಕೈಗಾರಿಕೆ ಅಭಿವೃದ್ದಿಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ನಗರಸಭೆಯ ಪೌರಾಯುಕ್ತ ಎಚ್.ಜಿ.ಜಗರೆಡ್ಡಿಯವರಿಗೆ ಈಗಾಗಲೇ ಹಲವಾರು ಬಾರಿ ನಿರ್ದೇಶನ ನೀಡಿದರೂ ಯಾವುದೇ ಬದಲಾವಣೆಯಾಗಿಲ್ಲ. ವಿಶೇಷವಾಗಿ ಪೌರಾಯುಕ್ತರು, ಸಿಬ್ಬಂದಿ ಹಾಗೂ ಸಾರ್ವಜನಿಕರೊಂದಿಗೆ ಸೌಹಾರ್ದಿತವಾಗಿ ವರ್ತಿಸುತ್ತಿಲ್ಲ.

- Advertisement - 

ಕಾನೂನಿನಡಿಯಾಗಬೇಕಾದ ಕೆಲಸಕಾರ್ಯಗಳು ಆಗುತ್ತಿಲ್ಲ, ಎಲ್ಲಾ ಹಂತದಲ್ಲೂ ವಿಫಲತೆ ಎದ್ದುಕಾಣುತ್ತಿದೆ. ಪೌರಾಯುಕ್ತರಿಗೆ ಇರಬೇಕಾದ ವೃತ್ತಿ, ಘನತೆ, ಗೌರವ ಕಾಣುತ್ತಿಲ್ಲ. ಆದ್ದರಿಂದ ಈ ಸಭೆಯ ಮೂಲಕ ಇವರಿಗೆ ಮತ್ತೊಮ್ಮೆ ಕೊನೆ ಅವಕಾಶ ನೀಡಿದ್ದು ಬದಲಾಗದೇ ಇದ್ದಲ್ಲಿ ಇವರನ್ನೂ ಸೇರಿದಂತೆ ಲೋಪವೆಸಗುವ ಸಿಬ್ಬಂದಿಯನ್ನು ನಿದ್ರಾಕ್ಷಣ್ಯವಾಗಿ ವರ್ಗಾವಣೆ ಮಾಡುವಂತೆ ಸೂಚಿಸಿದರು.

ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾತನಾಡಿ, ಪೌರಾಯುಕ್ತ ಜಗರೆಡ್ಡಿಗೆ ಹತ್ತಾರು ಬಾರಿ ವಿವಿಧಹಂತದಲ್ಲಿ ನಿರ್ದೇಶನ ನೀಡಿದ್ದೇನೆ. ಕಚೇರಿಗೂ ಆಗಮಿಸಿದ ಸಂದರ್ಭದಲ್ಲೂ ಅವರಿಗೆ ಕಾನೂನಿನ ತಿಳುವಳಿ, ಸಾರ್ವಜನಿಕರ ಕೆಲಸಕಾರ್ಯ ನಿಬಾಯಿಸುವ ಬಗ್ಗೆ ಸೂಚಿಸಿದ್ದೇನೆ.ಕಾನೂನಿನ ಪ್ರಕಾರ ಕೆಲಸಮಾಡಿದರೆ ಯಾವುದೇ ತೊಂದರೆಯಾಗದು. ಅನಗತ್ಯವಾಗಿ ವಿವಾದವನ್ನು ಎಳೆದುಕೊಳ್ಳುವುದು ಬೇಡ, ಯಾವುದೇ ಸಂದರ್ಭದಲ್ಲಿ ನಮ್ಮನ್ನು ಸಂಪರ್ಕಿಸಿದರು ಸರಿಪಡಿಸುವ ಭರವಸೆ ನೀಡಿದ್ದೇನೆ. ಆದರೆ, ಯಾವುದೇ ಸೂಚನೆಗಳನ್ನು ಅಳವಡಿಸಿಕೊಂಡು ಪಾಲಿಸುತ್ತಿಲ್ಲ.

- Advertisement - 

ನಗರಸಭೆಯ ಒಟ್ಟು ೬ಕೋಟಿಗೂ ಹೆಚ್ಚು ಕಂದಾಯ ಬಾಕಿ ಇದೆ, ವಸೂಲಾತಿಗೆ ಯಾವುದೇ ಕ್ರಮವಿಲ್ಲ. ನಗರ ವ್ಯಾಪ್ತಿಯಲ್ಲಿ ಒಟ್ಟು ೩೪೨ ಟ್ರೇಡ್‌ಲೈಸನ್ಸ್ ನೀಡಿದ್ದು, ಬಹುತೇಕರು ಟ್ರೇಡ್‌ಲೈಸನ್ಸ್ ಪಡೆದಿಲ್ಲ. ಆದರೂ ಸಹ ಆರೋಗ್ಯ ನಿರೀಕ್ಷಕರು ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಸಭೆಯ ಮೂಲಕ ಅವರಿಗೆ ವಾರ್ನಿಂಗ್ ನೀಡಿದ್ದು ಪಾಲನೆಯಾಗದೇ ಇದ್ದಲ್ಲಿ ಕಾನೂನು ಕ್ರಮಕ್ಕೆ ಶಿಫಾರಸ್ಸು ಮಾಡುವುದಾಗಿ ತಿಳಿಸಿದರು.

ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ಹೋಗುವಾಗ ಪಕ್ಕದಲ್ಲೇ ಹತ್ತಾರು ಅಂಗಡಿಗಳಿದ್ದು ವಾಹನ ಓಡಾಡಲು ತೊಂದರೆಯಾಗುತ್ತಿದೆ. ಈ ಬಗ್ಗೆ ಕ್ರಮಕೈಗೊಳ್ಳುವಂತೆ ಸೂಚಿಸಿದರು. ಪೌರಾಯುಕ್ತರು ಪ್ರತಿನಿತ್ಯ ವಾರ್ಡ್‌ಗಳುಗೆ ಭೇಟಿ ನೀಡಿ ಸಾರ್ವಜನಿಕರಿಂದ ಬರುವ ಸಮಸ್ಯೆಗಳಿಗೆ ಉತ್ತಮ ನೀಡುವಂತೆ ಸೂಚಿಸಿದರು.

ಸಾರ್ವಜನಿಕರ ಹಿತದೃಷ್ಠಿಯಿಂದ ಜಿಲ್ಲಾಮಟ್ಟದಲ್ಲಿ ಯಾವುದೇ ರೀತಿಯ ಕ್ರಮ ಅವಶ್ಯಕತೆ ಇದ್ದಲ್ಲಿ ಕೂಡಲೇ ಮಾಡಿಕೊಡುವ ಭರವಸೆ ನೀಡಿದರು. ಅನಗತ್ಯವಾಗಿ ಜನರನ್ನು ಕಚೇರಿಗೆ ಓಡಾಡಿಸಬಾರದು ಎಂದು ನಿರ್ದೇಶನ ನೀಡಿದರು. ಮಳೆ ಹಾಗೂ ಇನ್ನಿತರ ಸಂದರ್ಭದಲ್ಲಿ ಇಲ್ಲಿನ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ದೂರವಾಣಿ ಮೂಲಕ ನನ್ನನ್ನು ಸಂಪರ್ಕಿಸುತ್ತಾರೆ. ಆದರೆ, ಪೌರಾಯುಕ್ತರು ಮಾತ್ರ ಈ ಬಗ್ಗೆ ಯಾವುದೇ ಕ್ರಮಕೈಗೊಳ್ಳದೇ ಇರುವುದು ಸರಿಯಲ್ಲ. ನಾವೆಲ್ಲರೂ ಸೇರಿ ನಗರಸಭೆ ಆಡಳಿತವನ್ನು ಸುಲಲಿತಗೊಳಿಸೋಣ, ಕರ್ತವ್ಯನಿರ್ವಹಿಸದೆ ನಿರ್ಲಕ್ಷ್ಯೆ ತೋರಿದರೆ ಅಂತಹವರ ವಿರುದ್ದ ಯಾವುದೇ ಮುಲಾಜಿಲ್ಲದೆ ಕಾನೂನುಕ್ರಮಕೈಗೊಳ್ಳುವ ಎಚ್ಚರಿಕೆ ನೀಡಿದರು.

ಜಿಲ್ಲಾ ಯೋಜನಾ ನಿರ್ದೇಶಕರಿಗೆ ಸೂಚನೆ ನೀಡಿದ ಶಾಸಕರು, ಕಡೆಪಕ್ಷ ನೀವಾದರೂ ನಗರಸಭೆಗೆ ಭೇಟಿ ನೀಡಿ ಸಾರ್ವಜನಿಕ ಸಮಸ್ಯೆಯ ಬಗ್ಗೆ ಪೌರಾಯುಕ್ತರು ಕ್ರಮಕೈಗೊಳ್ಳುವ ಕುರಿತು ಮಾರ್ಗದರ್ಶನ ನೀಡಬೇಕೆಂದರು. ಪೌರಾಯುಕ್ತರ ಬಗ್ಗೆ ಹಲವಾರು ದೂರುಗಳಿದ್ದರೂ ಸಹ ತಿದ್ದಿಕೊಂಡು ನಡೆಯಲಿ ಎಂಬ ಉದ್ದೇಶದಿಂದ ಮತ್ತೊಮ್ಮೆ ಅವಕಾಶ ಮಾಡಿಕೊಡುವುದಾಗಿ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಯೋಜನಾ ನಿರ್ದೇಶಕಿ ರೇಷ್ಮಹಾನಗಲ್, ಕಾರ್ಯಪಾಲಕ ಇಂಜಿನಿಯರ್ ಮತ್ತಿಗಟ್ಟಿ, ತಹಶೀಲ್ಧಾರ್ ರೇಹಾನ್‌ಪಾಷ, ಡಿವೈಎಸ್ಪಿ ಎಂ.ಜಿ.ಸತ್ಯನಾರಾಯಣರಾವ್ ಉಪಸ್ಥಿತರಿದ್ದರು. ಕಂದಾಯ ಇಲಾಖೆ ಮತ್ತು ನಗರಸಭೆಯ ಅಧಿಕಾರಿಗಳು ಸಹ ಭಾಗವಹಿಸಿದ್ದರು.

 

Share This Article
error: Content is protected !!
";