ಚಳ್ಳಕೆರೆ ಯುಜಿಡಿ ಕಾಮಗಾರಿಗೆ 213 ಕೋಟಿ ಅನುಮೋದನೆ: ರಘುಮೂರ್ತಿ

News Desk

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ :
ನಗರದ ಒಳಚರಂಡಿ ಕಲ್ಪಿಸುವ ಯೋಜನೆ ಜಾರಿಗೆ(ಯುಜಿಡಿ)ಗೆ ೧೯೮ಕೋಟಿ ವೆಚ್ಚದ ಕಾಮಗಾರಿಗೆ ಹಾಗೂ ನಗರದಲ್ಲಿ ೯ ಎಂಎಲ್‌ಡಿ ಸಾಮರ್ಥ್ಯದ ಬಳಸಿದ ನೀರು ನಿರ್ವಾಹಣ ಘಟಕ ನಿರ್ಮಿಸಲು ೧೫.೧೬ ಕೋಟಿ ಒಟ್ಟು ೨೧೩.೧೬ ಕೋಟಿ ವೆಚ್ಚದ ಯೋಜನೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಟೆಂಡರ್ ಪ್ರಕ್ರಿಯೆ ನಂತರ ಕಾಮಗಾರಿ ಆರಂಭವಾಗಲಿದೆ ಎಂದು ಶಾಸಕ
, ಸಣ್ಣಕೈಗಾರಿಕೆ ಅಭಿವೃದ್ದಿಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ತಿಳಿಸಿದರು.

ಅವರು ನಗರ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಸಭೆಯಲ್ಲಿ ಮಾಹಿತಿ ನೀಡಿ, ನಗರಾಭಿವೃದ್ದಿ ಇಲಾಖೆಯ ಕಾರ್ಯದರ್ಶಿ ಸರ್ಕಾರಕ್ಕೆ ವಿವರವಾದ ವರದಿ ನೀಡಿ ಯುಜಿಡಿ ಕಾಮಗಾರಿ ಹಣ ಬಿಡುಗಡೆ ಕುರಿತು ಪ್ರಸ್ತಾವನೆ ಸಲ್ಲಿಸಿದ್ದರು. ಇದೇ ಸಂದರ್ಭದಲ್ಲಿ ಅಧಿಕಾರಿಗಳು ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಸಂಪೂರ್ಣಮಾಹಿತಿಯನ್ನು ಸಭೆಯಲ್ಲಿ ನೀಡಿದರು. ಶಾಸಕರು ಚಳ್ಳಕೆರೆ ನಗರದ ಯುಜಿಡಿ ಕಾಮಗಾರಿಗೆ ಸರ್ಕಾರ ಅನುಮೋದನೆ ನೀಡಿದ್ದು, ನಗರದ ನಾಗರೀಕರ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ನಗರಾಭಿವೃದ್ದಿ ಸಚಿವ ಬೈರತಿಸುರೇಶ್, ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರವರನ್ನು ಅಭಿನಂದಿಸುವುದಾಗಿ ತಿಳಿಸಿದರು.

- Advertisement - 

ಚಳ್ಳಕೆರೆ ನಗರಕ್ಕೆ ಅವಶ್ಯಕತೆ ಇದ್ದ ಕಳೆದ ಸುಮಾರು ೧೩ ವರ್ಷಗಳಿಂದ ಸಾರ್ವಜನಿಕರ ಪ್ರಮುಖ ಬೇಡಿಕೆಯಾದ ಯುಜಿಡಿ ಕಾಮಗಾರಿ ಅನುಷ್ಠಾನಕ್ಕೆ ಸರ್ಕಾರ ಒಪ್ಪಿಗೆ ನೀಡಿದ್ದಲ್ಲಂತೆ ಸಂಪುಟಸಭೆಯಲ್ಲೂ ಅನುಮೋದನೆ ನೀಡಿ, ಸಂಬಂಧಪಟ್ಟ ಇಲಾಖೆಗೆ ಕಾಮಗಾರಿ ಅನುಷ್ಠಾನಕ್ಕೆ ಸೂಚನೆ ನೀಡಲಾಗಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ನಂತರ ಕಾಮಗಾರಿ ಜಾರಿಯಾಗಲಿದೆ ಎಂದರು.

ಯುಜಿಡಿ ಕಾಮಗಾರಿ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿದ ಶಾಸಕರು, ನಗರ ವ್ಯಾಪ್ತಿಯ ೧೭೦ ಕಿ.ಮೀ ವ್ಯಾಪ್ತಿಯಲ್ಲಿ ಈ ಕಾಮಗಾರಿ ಅನುಷ್ಠಾನಗೊಳ್ಳಲಿದೆ, ೧೨೩೦೭ ಮನೆಗಳನ್ನು ಒಳಗೊಳ್ಳಲಿದ್ದು, ೬೩೦೧ ಯಂತ್ರಗುಂಡಿಗಳು ಈ ವ್ಯಾಪ್ತಿಯಲ್ಲಿಬರಲಿವೆ. ಇದರ ಜೊತೆಯಲ್ಲಿ ಪೊಲೀಸ್ ಇಲಾಖೆ ಸಿಸಿ ಕ್ಯಾಮರ ಅಳವಡಿಕೆ ಮಾಡುವಂತೆ ಮನವಿ ನೀಡಿದ್ದು, ನಗರಸಭೆ ನಗರೋತ್ಥಾನ ನಿಧಿಯಿಂದ ಸಿಸಿ ಕ್ಯಾಮರ ಅಳವಡಿಕೆ ಹಾಗೂ ಕೊಟ್ಟ ಸಿಗ್ನಲ್ ದೀಪಗಳ ದುರಸ್ಥಿಗೊಳಿಸುವುದಾಗಿ ತಿಳಿಸಿದರು. ಇದರ ಜೊತೆಯಲ್ಲಿ ನಗರದ ಕೊಳಚೆ ನೀರು ಹಳ್ಳದ ಮೂಲಕ ನಗರಂಗೆರೆ ಕೆರೆ ಸೇರ್ಪಡೆಯಾಗುತ್ತಿದ್ದು ಈ ಬಗ್ಗೆ ಗ್ರಾಮಸ್ಥರು ನೀಡಿದ ಮನವಿಯನ್ನು ಪುರಸ್ಕರಿಸಿ ಯೋಜನೆ ಸಿದ್ದಪಡಿಸಿದ್ದು ಸದರಿ ಯೋಜನೆಗೂ ಅನುಮೋದನೆ ದೊರಕಿದೆ ಎಂದರು.

- Advertisement - 

ಕಾಟಪ್ಪನಹಟ್ಟಿ ಹಾದುಹೋಗುವ ರಾಜಕಾಲುವೆ ದುರಸ್ಥಿತಿ ಕುರಿತಂತೆ ಮಾತನಾಡಿದ ಶಾಸಕ, ಸಂಬಧಪಟ್ಟ ಅಧಿಕಾರಿಗಳ ಸೂಚನೆನೀಡಿ ಕಾನೂನಿನ ಪ್ರಕಾರ ಕ್ರಮಕೈಗೊಳ್ಳಬೇಕೆಂದು ತಿಳಿಸಿದರು. ಬಳ್ಳಾರಿ ಮತ್ತು ಪಾವಗಡ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಕಾನೂನು ತೊಡಕನ್ನು ಕೂಡಲೇ ನಿವಾರಿಸಿ ಕಾಮಗಾರಿ ಆರಂಭಿಸಲು ಸೂಚಿಸಿದರು. ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಡಿಯದ್ದರೆ ಸಂಬಂಧಪಟ್ಟವರಿಗೆ ಸೂಚನೆ ನೀಡಿ ತೆರವುಗೊಳಿಸುವ ಕೆಲಸಕ್ಕೆ ಮುಂದಾಗಿ ಎಂದರು. 

ರಾಜ್ಯ ಸರ್ಕಾರ ಗುರುವಾರ ನಡೆದ ಸಚಿವ ಸಂಪುಟಸಭೆಯಲ್ಲಿ ಚಳ್ಳಕೆರೆ ನಗರದ ಹಲವಾರು ಯೋಜನೆಗಳಿಗೆ ಅನುಮೋದನೆ ನೀಡಿದ್ದು ಸಂತಸ ತಂದಿದೆ. ಕಳೆದ ಸುಮಾರು ೧೩ ವರ್ಷಗಳಿಂದ ಈ ಭಾಗದ ಜನರಿಗೆ ನೀಡಿದ ಭರವಸೆ ಈಡೇರಿಸಿಲ್ಲವೆಂಬ ಕೊರಗು ನನ್ನನ್ನು ಕಾಡುತ್ತಿತ್ತು. ಕೊನೆಗೂ ಸರ್ಕಾರ ಯುಜಿಡಿ ಸೇರಿದಂತೆ ಎಲ್ಲಾ ಕಾಮಗಾರಿಗೆ ಅನುಮೋದನೆ ನೀಡಿದ್ದು ಸಂತಸ ತಂದಿದೆ ಎಂದರು.

Share This Article
error: Content is protected !!
";