ನ್ಯಾಯ ಒದಗಿಸುವಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ದೇಶದಲ್ಲೇ ಪ್ರಥಮ ಸ್ಥಾನ : ಡಾ.ಪರಮೇಶ್ವರ್

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಇಂಡಿಯಾ ಜಸ್ಟೀಸ್ ವರದಿ-2025ರ ಪ್ರಕಾರ ಕರ್ನಾಟಕ ರಾಜ್ಯ ಪೊಲೀಸ್ ನ್ಯಾಯ ಒದಗಿಸುವಲ್ಲಿ ಇಡೀ ದೇಶದಲ್ಲೇ ಪ್ರಥಮ ಸ್ಥಾನ ಪಡೆದು
, ಹಿಂದಿನ ವರ್ಷದ ಹಿರಿಮೆಯನ್ನು ಕಾಯ್ದುಕೊಂಡಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ವತಿಯಿಂದ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಹಮ್ಮಿಕೊಂಡಿದ್ದ, ರಾಜ್ಯ ಪೊಲೀಸ್ ಇಲಾಖೆಯ ಎರಡು ವರ್ಷಗಳ ಪ್ರಗತಿಯ ಸ್ಥಂಭಗಳು, ಧೈರ್ಯ ಮತ್ತು ಬದ್ಧತೆಯ ಪಥದಲ್ಲಿಎಂಬ ಪುಸ್ತಕ ಬಿಡಗಡೆ ಮಾಡಿ, ಪತ್ರಿಕಾ ಗೋಷ್ಠಿ ಉದ್ದೇಶಿಸಿ ಮಾತನಾಡಿದ ಗೃಹಸಚಿವರು, ನಮ್ಮ ರಾಜ್ಯವು ನ್ಯಾಯ ನೀಡಿಕೆಯಲ್ಲಿ 10 ಅಂಕಗಳಿಗೆ 6.78 ಅಂಕಗಳನ್ನು ಗಳಿಸಿದ್ದು, ಪೊಲೀಸ್ ಮತ್ತು ನ್ಯಾಯಾಂಗ ಎರಡರಲ್ಲೂ ವಿಶೇಷವಾಗಿ ಶೋಷಿತ ಸಮುದಾಯಗಳಿಗೆ ನ್ಯಾಯ ಒದಗಿಸುವಲ್ಲಿ, ನೊಂದವರಿಗೆ ನ್ಯಾಯ ಕೊಡುವಲ್ಲಿ  ಎಸ್‍ಸಿ, ಎಸ್‍ಟಿ ಮತ್ತು ಓಬಿಸಿ ಸಮುದಾಯಗಳಿಗೆ ಮೀಸಲಾತಿ ಕೋಟಾಗಳನ್ನು ಪೂರೈಸಿದ ಏಕೈಕ ರಾಜ್ಯ ನಮ್ಮ ಕರ್ನಾಟಕ ಎಂದರು.

- Advertisement - 

ಹೊಸ ಮಂಜೂರಾತಿಗಳು:
ರಾಜ್ಯದಲ್ಲಿ 33 ಹೊಸ ಡಿ.ಸಿ.ಆರ್.ಇ ಪೊಲೀಸ್ ಠಾಣೆ.  12 ಹೊಸ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸಂಚಾರ ಪೊಲೀಸ್ ಠಾಣೆ
, ಎರಡು ಹೊಸ ಯ.ಆರ್.ಬಿ. ಬೆಟಾಲಿಯನ್‍ಗಳ ಸ್ಥಾಪನೆ ಮಾಡಿದ್ದೇವೆ.  ಕೋಮು ಗಲಭೆಗಳನ್ನು ಪರಿಣಾಮಕಾರಿಯಾಗಿ ನಿಗ್ರಹಿಸಲು ವಿಶೇಷ ಕಾರ್ಯಪಡೆ ಸ್ಥಾಪಿಸಲಾಗಿದೆ. ಎಲ್ಲಾ ಸೆನ್ ಪೊಲೀಸ್ ಠಾಣೆಗಳನ್ನು ಡಿ.ವೈ.ಎಸ್.ಪಿ ಡರ್ಜೆಗೆ ಉನ್ನತೀಕರಿಸಿ, ಅವುಗಳನ್ನು ಸೈಬರ್ ಪೊಲೀಸ್ ಠಾಣೆಗಳಾಗಿ ಮರುನಾಮಕರಣ ಮಾಡಲಾಗಿದೆ. ಬೆಂಗಳೂರು ನಗರದಲಲಿ 3 ಹೊಸ ಕಾನೂನು ಮತ್ತು ಸುವ್ಯಸ್ಥೆ ವಿಭಾಗಳನ್ನು ರಚಿಸಲಾಗಿದೆ ಎಂದರು.

ಎಮರ್ಜೆನ್ಸಿ ರೆಸ್ಪಾನ್ಸ್ ಸಪೋರ್ಟ್ ಸಿಸ್ಟಮ್ ಜಾರಿಗೆ ತರಲಾಗಿದೆ:
ಇದರಿಂದ ಪ್ತತಿನಿತ್ಯ 24 ಸಾವಿರ ಸಾರ್ವಜನಿಕ ಕರೆಗಳು ಬರುತ್ತಿದ್ದು
, ಇವುಗಳಲ್ಲಿ 1400 ಕರೆಗಳಿಗೆ ಪ್ರತಿಕಿಯೆ ನೀಡಬೇಕಾಗಿದೆ.  ತುರ್ತು ಪರಿಸ್ಥಿತಿಗಳಿಗೆ ಸ್ಪಂದಿಸಲು ರಾಜ್ಯಾದ್ಯಂತ 457 ತುರ್ತು ಪ್ರತಿಕ್ರಿಯೆ ವಾಹನಗಳು ಹಾಗೂ 267 ಹೆದ್ದಾರಿ ಗಸುತ ವಾಹನಗಳನ್ನು ನಿಯೋಜಿಸಲಾಗಿದೆ.

- Advertisement - 

ತುರ್ತು ಪ್ರತಿಕ್ರಿಯೆ ವಾಹನಗಳು ಗ್ರಾಮೀಣ ಪ್ರದೇಶಗಳಲ್ಲಿ ಸರಾಸರಿ 13 ನಿಮಿಷ 58 ಸೆಕೆಂಡುಗಳಲ್ಲಿ ಸ್ಪಂದಿಸುತ್ತದೆ.  ನಗರ ಪ್ರದೇಶಗಳಲ್ಲಿ ಸರಾಸರಿ 06 ನಿಮಿಷ 59 ಸೆಕೆಂಡುಗಳಲ್ಲಿ ಸಾರ್ವಜನಿಕರ ದೂರುಗಳಿಗೆ ಸ್ಪಂದಿಸುತ್ತದೆ ಎಂದರು.

ಸಮುದಾಯ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸಲು ಮನೆ ಮನೆಗೆ ಪೊಲೀಸ್ ಉಪಕ್ರಮ ಜಾರಿಗೊಳಿಸಿದೆ.  ಸಾರ್ವಜನಿಕರಿಂದ ಉತ್ತಮ ಅಭಿಪ್ರಾಯಗಳು ಬರುತ್ತಿವೆ. ಮಹಿಳಾ ಭದ್ರತೆಗಾಗಿ ತಂತ್ರಜ್ಞಾನ ಸಾಮಥ್ರ್ಯ ಬಳಕೆ ಮಾಡಲಾಗಿದೆ. ಎಂದರು.

ಮಾದಕ ವಸ್ತು ಮುಕ್ತ ಕರ್ನಾಟಕ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿರುವಂತೆ ಕರ್ನಾಟಕ ರಾಜ್ಯವನ್ನು ಮಾದಕ ವಸ್ತು ಮುಕ್ತ  ಕರ್ನಾಟಕವನ್ನಾಗಿಸಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.  ರಾಜ್ಯದ್ಯಾದಂತ ಯುವಜನರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿರುವ ಮಾದಕ ವಸ್ತು ವ್ಯಸನದ ಪಿಡುಗನ್ನು ವ್ಯವಸ್ಥಿತವಾಗಿ ನಿವಾರಸಲು ಪೊಲೀಸ್ ಸಿಬ್ಬಂದಿಯು
, ವ್ಯಸನಿಗಳಿಗೆ ಮಿತ್ರರಾಗಿ ಅವರನ್ನು ವ್ಯಸನ ಮುಕ್ತರನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ರಾಜ್ಯ ಪೊಲೀಸ್ ಇಲಾಖಯು ಸನ್ಮಿತ್ರಇಂಬ ಯೋಜನೆಯನ್ನು ಪ್ರಾರಂಭಿಸಿದೆ ಎಂದರು.

ನಗರ ಪೊಲೀಸರು ಮಾದಕ ದ್ರವ್ಯ ಅಪರಾಧಗಳನ್ನು ಎದುರಿಸುವಲ್ಲಿ ಅತ್ಯುತ್ತಮ ಪ್ರಗತಿ ಸಾಧಿಸಿದ್ದಾರೆ.  2025 ರಲ್ಲಿ 1491 ಭಾರತೀಯ ಪ್ರಜೆಗಳು ಮತ್ತು 52 ವಿದೇಶಿ ಪ್ರಜೆಗಳ ಬಂಧನ ಮಾಡಲಾಗಿದೆ. ಸುಮಾರು 160 ಕೋಟಿ ಮೌಲ್ಯದ ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

ರಾಜ್ಯ ಪೊಲೀಸರು ಅತ್ಯಂತ ಪ್ರಾಮಾಣಿಕತೆ ಮತ್ತು ಕರ್ತವ್ಯ ಬದ್ಧತೆಯಿಂದ ಸರ್ಕಾರದ ಜೊತೆ ಕೆಲಸ ನಿರ್ವಹಿಸುತ್ತಿದ್ದಾರೆ.  ಪೊಲೀಸ್ ಇಲಾಖೆಯ ಉದ್ದೇಶ ಜನ ಸ್ನೇಹಿಯಾಗಿರಬೇಕು ಮತ್ತು ಯಾವುದೇ ರೀತಿ ನಾಗರೀಕರಿಗೆ ತೊಂದರೆ ಆಗದಂತೆ ನಾಗರೀಕರಿಗೆ ಕೇಂದ್ರಕೃರಾಗಿರಬೇಕು. ಸಮಾಜದಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದು ಎನ್ನುವ ಉದ್ದೇಶದಿಂದ ಕೆಲಸ ಮಾಡುತ್ತಿದ್ದು ಹೊಸ ಹೊಸ ಅವಿಷ್ಕಾರಗಳನ್ನು ಜಾರಿಗೆ ತಂದಿದ್ದು, ಅನೇಕ ಬದಲಾವಣೆಗಳನ್ನು ಮಾಡಿದ್ದೇವೆ. ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಲ್ಲಿ ಅನ್ಯರಿಗೆ ತೊಂದರೆ ಆಗದೆ ಅಪರಾಧ ಮಾಡಿದವರಿಗೆ ಸೀಮಿತವಾಗಿರಬೇಕು.  ಬದಲಾದ ಯುಗದಲ್ಲಿ ತಾಂತ್ರಕತೆ ಉಪಯೋಗಿಸಿಕೊಂಡು ಅಪರಾಧ ಕಂಡು ಹಿಡಿಯುವ ರೀತಿಯಲ್ಲಿ ಕಳೆದ ಎರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದೇವೆ ಎಂದರು.

ಪತ್ರಿಕಾ ಗೋಷ್ಠಿಯಲ್ಲಿ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ ಕುಮಾರ್ ಸಿಂಗ್, ಗೃಹರಕ್ಷಕದಳ ಹಾಗೂ ಅಗ್ನಿಶಾಮಕ ಸೇವೆಗಳ ಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್, ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಡಾ. ಪ್ರಣವ ಮೊಹಾಂತಿ, ಗೃಹ ರಕ್ಷಕ  ಮತ್ತು ಸುಧಾರಣಾ ಇಲಾಖೆಯ ಎಡಿಜಿಪಿ ಆರ್ ಹಿತೇಂದ್ರ, ಗೃಹ ರಕ್ಷಕ ಮತ್ತು ಸುಧಾರಣಾ ಸೇವೆಗಳ ಎಡಿಜಿಪಿ ಬಿ.ದಯಾನಂದ, ಎಡಿಜಿಪಿ ಪಿ ಹರಿಶೇಖರನ್, ಆಡಳಿತ ವಿಭಾಗದ ಎಡಿಜಿಪಿ ಸೌಮೆಂದು ಮುಖರ್ಜಿ ಮತ್ತಿತರು ಉಪಸ್ಥಿತರಿದ್ದರು.

 

 

Share This Article
error: Content is protected !!
";