ಎಟಿಎಂ ಮಷಿನ್ ಕದ್ದು ಕಸದ ಬುಟ್ಟಿ ಬಳಿ ಎಸೆದು ಹೋದ ಕಳ್ಳರು

News Desk

ಚಂದ್ರವಳ್ಳಿ ನ್ಯೂಸ್, ಮಧುಗಿರಿ:
ಕಳ್ಳರ ಗ್ಯಾಂಗ್ ಒಂದು ಎಟಿಎಂ ಮಷಿನ್ ಕದಿಯಲು ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ.
ತಡರಾತ್ರಿ ಪ್ಲ್ಯಾನ್ ಮಾಡಿಕೊಂಡು ಎಟಿಎಂ ಸೆಂಟರ್‌ಗೆ ನುಗ್ಗಿದ ಕಳ್ಳರು
, ಗ್ರೌಂಡಿಂಗ್ ಇಲ್ಲದಿರುವುದು ಗಮನಿಸಿ ಕಳುವಿಗೆ ಮುಂದಾಗಿರುವ ಘಟನೆ ತುಮಕೂರು ಜಿಲ್ಲೆಯ ಮಧುಗಿರಿಯ ಪುರವಾರ ಗ್ರಾಮದಲ್ಲಿ ಜರುಗಿದೆ.

ಆದರೆ ಎಟಿಎಂ ಮಷಿನ್ ತುಂಬಾ ಭಾರವಾಗಿರುವುದರಿಂದ ಹೊತ್ತುಕೊಂಡು ಹೋಗಲು ಸಾಧ್ಯವಾಗದೆ, ಮಧ್ಯದಲ್ಲೇ ಕಸದ ಬುಟ್ಟಿ ಬಳಿ ಎಸೆದು ಕಳ್ಳರು ಪರಾರಿಯಾಗಿದ್ದಾರೆ. ಈ ಕುರಿತು ಕೊಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement - 

ಘಟನೆ ನಂತರ ಪೊಲೀಸರು ಎಟಿಎಂ ಸೆಂಟರನ್ನು ಪರಿಶೀಲಿಸಿದ ವೇಳೆ, ಆರ್‌ಬಿಐ ಭದ್ರತಾ ನಿಯಮಗಳು ಪಾಲನೆಯಾಗದೇ ಇದ್ದುದು ಬಹಿರಂಗವಾಗಿದೆ.

ಎಟಿಎಂ ನಿರ್ವಹಣೆಯಲ್ಲಿ ಕೈಗೊಳ್ಳಬೇಕಾದ ಅನೇಕ ಭದ್ರತಾ ಕ್ರಮಗಳಲ್ಲಿ ಲೋಪ ಕಂಡುಬಂದಿದ್ದು, ತಕ್ಷಣವೇ ಎಟಿಎಂ ಕಾರ್ಯಚಟುವಟಿಕೆಯನ್ನು ಸ್ಥಗಿತಗೊಳಿಸಲಾಗಿದೆ. ಆರ್‌ಬಿಐ ಭದ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಿದ ನಂತರವೇ ಮರು ಕಾರ್ಯಾಚರಣೆ ಆರಂಭಿಸುವಂತೆ ಪೊಲೀಸರು ಎಟಿಎಂ ನಿರ್ವಹಣೆ ಸಂಸ್ಥೆಗೆ ಸೂಚಿಸಿದ್ದಾರೆ.

- Advertisement - 

Share This Article
error: Content is protected !!
";