ಶೋಷಿತ ಸಮುದಾಯಗಳ ಭವಿಷ್ಯದ ಬೆಳಕು ಅಂಬೇಡ್ಕರ್: ಶಾಸಕ ರಘುಮೂರ್ತಿ

News Desk

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ನಾಡಿನೆಲ್ಲೆಡೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ರವರ ಪರಿನಿಬ್ಬಾಣ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸುತ್ತಿದ್ದೇವೆ. ವಿಶ್ವವೇ ಮೆಚ್ಚುವಂತಹ ಸಂವಿಧಾನವನ್ನು ನೀಡಿ ರಾಷ್ಟ್ರದ ಆಡಳಿತ ಸುಲಲಿತವಾಗಿ ನಡೆಯಲು ಅಂಬೇಡ್ಕರ್ ಸಂವಿಧಾನ ಕಾರಣ. ಅಂಬೇಡ್ಕರ್ ಆದರ್ಶಗಳೇ ನಮಗೆ ಶ್ರೀರಕ್ಷೆ ಎಂದು ಶಾಸಕ, ಸಣ್ಣಕೈಗಾರಿಕೆ ಅಭಿವೃದ್ದಿಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ತಿಳಿಸಿದರು.

ಅವರು, ಶನಿವಾರ ನಗರದ ಅಂಬೇಡ್ಕರ್ ವೃತ್ತದಲ್ಲಿ ತಾಲ್ಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ ಹಾಗೂ ದಲಿತ ಸಂಘಟನೆಗಳು ಆಯೋಜಿಸಿದ್ದ ೬೯ನೇ ಪರಿನಿಬ್ಬಾಣ ದಿನಾಚರಣೆ ಕಾರ್ಯಕ್ರಮವನ್ನು ಅಂಬೇಡ್ಕರ್ ಪುತ್ಥಳಿಗೆ ಮಾರ್ಲಾಪಣೆ ಮಾಡಿ ಮಾತನಾಡಿದರು.

- Advertisement - 

ದೇಶದ ಇತಿಹಾಸದಲ್ಲಿ ಶೋಷಿತ ಸಮುದಾಯದ ಬಗ್ಗೆ ಜಾಗೃತಿಯನ್ನುಂಟು ಮಾಡಿದ್ದಲ್ಲದೆ, ಆ ಸಮುದಾಯಕ್ಕೆ ನ್ಯಾಯಕೊಡಿಸುವ ನಿಟ್ಟಿನಲ್ಲಿ ಹೋರಾಡಿದ ಧೀಮಂತ ಏಕೈಕ ವ್ಯಕ್ತಿ ಡಾ.ಬಿ.ಆರ್.ಅಂಬೇಡ್ಕರ್. ತಮ್ಮ ಬದುಕಿನುದ್ದಕ್ಕೂ ಅವಮಾನ, ಅವಹೇಳನಗಳನ್ನು ಸಹಿಸಿಕೊಂಡು ಸಂವಿಧಾನವನ್ನು ರಚಿಸಿ ಇಡೀ ವಿಶ್ವವೇ ಅವರನ್ನು ಕೊಂಡಾಡುವಂತಹ ಕೆಲಸ ಮಾಡಿದ್ಧಾರೆ ಎಂದರು.

ಇಒ ಶಶಿಧರ, ಸಮಾಜಕಲ್ಯಾಣಾಧಿಕಾರಿ ದೇವಲನಾಯ್ಕ, ಪೌರಾಯುಕ್ತ ಜಗರೆಡ್ಡಿ, ಮಾಜಿ ನಗರಸಭೆ ಸದಸ್ಯರಾದ ಕೆ.ವೀರಭದ್ರಪ್ಪ, ರಮೇಶ್‌ಗೌಡ, ಟಿ.ವಿಜಯಕುಮಾರ್, ಎಂ.ಜೆ.ರಾಘವೇಂದ್ರ, ಶಶಿಧರ, ಕೃಷ್ಣಮೂರ್ತಿ, ಪ್ರಹ್ಲಾದ್, ಬಸವರಾಜು, ಸೈಯದ್, ಹನುಮಂತರಾಯ, ಚೌಳೂರುಪ್ರಕಾಶ್, ಮೈತ್ರಿದ್ಯಾಮಣ್ಣ, ಡಿ.ಶ್ರೀನಿವಾಸ್ ಮುಂತಾದವರು ಉಪಸ್ಥಿತರಿದ್ದರು.

- Advertisement - 

 

 

Share This Article
error: Content is protected !!
";