ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಇತ್ತೀಚಿಗೆ ನಡೆದ ತಾಲ್ಲೂಕು ಮಟ್ಟದ ಪ್ರತಿಭಾಕಾರಂಜಿ ಕಾರ್ಯಕ್ರಮದಲ್ಲಿ ನಗರದ ಕುವೆಂಪು ಶಾಲೆಯ ವಿದ್ಯಾರ್ಥಿಗಳು ೯ ಬಹುಮಾನವನ್ನು ಪಡೆದಿದ್ದಾರೆಂದು ಆಡಳಿತಾಧಿಕಾರಿ ಎನ್.ತಿಪ್ಪೇಸ್ವಾಮಿ ತಿಳಿಸಿದ್ದಾರೆ.
ಅವರು ಈ ಬಗ್ಗೆ ಮಾಹಿತಿ ನೀಡಿ, ಪ್ರಬಂಧ ಸ್ಪರ್ಧೆಯಲ್ಲಿ ಪಿ.ಇಂದು ಪ್ರಥಮ, ಚಿತ್ರಕಲೆಯಲ್ಲಿ ಕೆ.ಎಂ.ಸಂಕಲ್ಪ ಪ್ರಥಮ, ಜಾನಪದ ಮತ್ತು ಭಾವಗೀತೆ ಸ್ಪರ್ಧೆ ಮೋಹಕವಿಸ್ಮಯಸಾಯಿ ಪ್ರಥಮ, ಅಭಿನಯ ಗೀತೆಯಲ್ಲಿ ರಂಜುಶ್ರೀ ಪ್ರಥಮ, ಚರ್ಚಾಸ್ಪರ್ಧೆಯಲ್ಲಿ ಧನಂಜಯ ದ್ವಿತೀಯ,
ಇಂಗ್ಲೀಷ್ ಕಂಠಪಾಠಸ್ಪರ್ಧೆ ಎಂ.ಮಹಾಲಕ್ಷ್ಮಿ ದ್ವಿತೀಯ, ಕವನವಾಚನ ಸ್ಪರ್ಧೆಯಲ್ಲಿ ಟಿ.ಮಂಜುನಾಥ ದ್ವಿತೀಯ, ಭರತನಾಟ್ಯದಲ್ಲಿ ಜೆ.ಎಚ್.ಮಾನಸ ದ್ವಿತೀಯ ಸ್ಥಾನ ಪಡೆದ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

