ಚಂದ್ರವಳ್ಳಿ ನ್ಯೂಸ್, ಬೆಳಗಾವಿ:
ರಾಜ್ಯದಲ್ಲೇ ಅತಿ ದೊಡ್ಡ ಜಿಲ್ಲೆ ಎನ್ನುವ ಖ್ಯಾತಿ ಪಡೆದಿರುವ ಬೆಳಗಾವಿ ಜಿಲ್ಲೆಯನ್ನು ವಿಭಜಿಸುವ ಕುರಿತು ಸದನದ ಸಮಯದಲ್ಲಿ ಸಭೆ ಕರೆದು ಚರ್ಚಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ ಎಂದು ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಸುವರ್ಣ ವಿಧಾನಸೌಧದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನೂತನ ಜಿಲ್ಲಾ ರಚನೆ ಬಗ್ಗೆ ಸಿಎಂ ಸಭೆ ಕರೆಯುವುದಾಗಿ ಹೇಳಿದ್ದಾರೆ. ಇದೇ ಅಧಿವೇಶನದ ವೇಳೆಯೇ ಸಭೆ ನಡೆಸಿ ಶಾಸಕರೊಂದಿಗೆ ಚರ್ಚಿಸುವುದಾಗಿಯೂ ತಿಳಿಸಿದ್ದಾರೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.
ಸರ್ಕಾರದಲ್ಲಿ ನಾಯಕತ್ವ ಗೊಂದಲ ಇದೆ ಎಂದು ಬಿಜೆಪಿಯವರು ಹೇಳುತ್ತಲೇ ಇದ್ದಾರೆ. ಸರ್ಕಾರ ಆಯಸ್ಸು ಮೂರು, ಆರು ತಿಂಗಳು ಅಂತ ಮಾತನಾಡುತ್ತಿದ್ದಾರೆ. ಆದರೆ, ಸರ್ಕಾರ ಸುಭದ್ರವಾಗಿ ನಡೆಯುತ್ತಿದೆ. ಪಕ್ಷದಲ್ಲಿ ಯಾವ ಗೊಂದಲವೂ ಇಲ್ಲ ಎಂದರು.
ಅಹಿಂದ ನಾಯಕತ್ವದಸಾರಥ್ಯ ವಿಚಾರಕ್ಕೆ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, ಅವಕಾಶ ಸಿಕ್ಕಾಗ ನೋಡೋಣ, ಅದರಭಾಗವಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಸಚಿವರು ಹೇಳಿದರು.
ಆರಂಭದಲ್ಲೇ ಉತ್ತರ ಕರ್ನಾಟಕ ಭಾಗದ ಚರ್ಚೆ ಮಾಡುವಂತೆ ಬಿಜೆಪಿ ಆಗ್ರಹದ ವಿಚಾರವಾಗಿ ಮಾತನಾಡಿ, ಆದ್ರೆ ಒಳ್ಳೆಯದು,ಸ್ಪೀಕರ್ ನಿಯಮಾವಳಿ ಪ್ರಕಾರ ಮಾಡುತ್ತಾರೆ. ನಾವೂ ಕೂಡ ಒತ್ತಡ ಹಾಕುತ್ತೇವೆ ಎಂದು ತಿಳಿಸಿದರು.

