ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆ ಆರೋಪದ ಮೇರಗೆ 2025ರ ನವೆಂಬರ್18ರಿಂದ 5 ದಿನಗಳ ಕಾಲ ದಾಳಿ ನಡೆಸಿ, ದಾಖಲೆಗಳನ್ನು ವಶಪಡಿಸಿಕೊಂಡಿರುವ ಕ್ರಮ ಕಾನೂನುಬಾಹಿರ ಎಂದು ಘೋಷಿಸಲು ಕೋರಿ ಆನ್ಲೈನ್‌ಗೇಮಿಂಗ್ ಕಂಪನಿ ವಿನ್ಜೋ ಪ್ರೈವೇಟ್‌ಲಿಮಿಟೆಡ್‌ಸಲ್ಲಿಸಿರುವ ಅರ್ಜಿಯ ಸಂಬಂಧ ಹೈಕೋರ್ಟ್‌ಇಡಿಗೆ ನೋಟಿಸ್‌ಜಾರಿ ಮಾಡಿದೆ.
ನ್ಯಾಯಮೂರ್ತಿ ಸೂರಜ್‌ಗೋವಿಂದರಾಜು ಅವರಿದ್ದ ನ್ಯಾಯಪೀಠವು ವಿನ್ಜೋ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ, ಇಡಿಗೆ ನೋಟಿಸ್‌ಜಾರಿ ಮಾಡಿ ಆಕ್ಷೇಪಣೆ ಸಲ್ಲಿಸಲು ಸೂಚನೆ ನೀಡಿ ವಿಚಾರಣೆಯನ್ನು ಡಿಸೆಂಬರ್-15ಕ್ಕೆ ಮುಂದೂಡಿದೆ.
ವಂಚನೆ, ಖಾತೆಗಳ ಬ್ಲಾಕ್‌ಮಾಡುವುದು, ಪ್ಯಾನ್‌ಕಾರ್ಡ್‌ಗಳ ದುರುಪಯೋಗದ ಆರೋಪದಲ್ಲಿ ವಿನ್ಜೋ ಕಂಪನಿಯ ವಿರುದ್ಧ ಎಫ್‌ಐಆರ್‌ಗಳು ದಾಖಲಾಗಿದ್ದವು.
ಈ ಆರೋಪಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ವಿನ್ಜೋ ಕಂಪನಿಯ ಬೆಂಗಳೂರು ವಲಯ ಕಚೇರಿಯ ಮೇಲೆ ಈ ಹಿಂದೆ ವಿನ್ಜೋ ಗೇಮ್ಸ್‌ಪ್ರೈವೇಟ್‌ಲಿಮಿಟೆಡ್‌ನಿರ್ದೇಶಕ ಪವನ್‌ನಂದಾ ಮತ್ತು ಸೌಮ್ಯಾ ಸಿಂಗ್‌ರಾಥೋಡ್‌ಅವರನ್ನು ಅಕ್ರಮ ಗಣ ವರ್ಗಾವಣೆ ತಡೆಯುವಿಕೆ ಕಾಯ್ದೆಯಡಿ ಬಂಧಿಸಿತ್ತು. ಈ ವೇಳೆ ಬಂಧಿತರ ಮನೆಗಳ ಮೇಲೆ ದಾಳಿ ನಡೆಸಿ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದರು.
ಈ ಕುರಿತಂತೆ ನಡೆದ ತನಿಖೆ ಸಂದರ್ಭದಲ್ಲಿ ಅರ್ಜಿದಾರ ವಿನ್ಜೋ ಕಂಪನಿ, ವಂಚನೆ ಸೇರಿದಂತೆ ಅಪರಾಧ ಕೃತ್ಯಗಳಲ್ಲಿ ತೊಡಗಿದೆ. ಅಲ್ಲದೆ, ಈ ವಿನ್ಜೋ ಗೇಮಿಂಗ್‌ಅಪ್‌ನಲ್ಲಿ ಗ್ರಾಹಕರು ಹಣ ಹೂಡಿಕೆ ಮಾಡಿ ಎದುರುದಾರದೊಂದಿಗೆ (ಮತ್ತೊಬ್ಬ ವ್ಯಕ್ತಿಯೊಂದಿಗೆ) ಆಡುತ್ತಿರುವುದಾಗಿ ತಿಳಿಸಲಾಗಿತ್ತು. ಆದರೆ, ಸಾಫ್ಟವೇರ್‌ವಿರುದ್ಧ ಆಡುವಂತೆ ಮಾಡಲಾಗಿತ್ತು. ಇದರಿಂದ ಹಲವು ಗ್ರಾಹಕರು ಹಣ ಕಡೆದುಕೊಳ್ಳುವುದಕ್ಕೆ ಕಾರಣವಾಗಿತ್ತು. ಜತೆಗೆ, ವಿನ್ಜೋ ವಾಲೆಟ್‌ನಲ್ಲಿ ಗ್ರಾಹಕರು ಇಟ್ಟಿದ್ದ ಹಣ ಹಿಂಪಡೆಯುವುದಕ್ಕೆ ಸಾಧ್ಯವಾಗದಂತೆ ತಡೆಹಿಡಿಯಲಾಗುತ್ತಿತ್ತು ಎನ್ನುವ ಅಂಶ ಬೆಳಕಿಗೆ ಬಂದಿತ್ತು.
ಇಡಿ ಅಧಿಕಾರಿಗಳು ಈ ಸಂಬಂಧ ದಾಳಿ ನಡೆಸಿ, ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ 505 ಕೋಟಿ ರೂ.ಗಳ ಮೊತ್ತದ ಬ್ಯಾಂಕ್‌ಬ್ಯಾಲೆನ್ಸ್, ಬಾಂಡ್‌ಗಳು, ಎಫ್‌ಡಿ ಪತ್ರಗಳು, ಮ್ಯೂಚುವಲ್ ಫಂಡ್‌ಗಳನ್ನು ಸೀಜ್ ಮಾಡಿತ್ತು. ಇದನ್ನು ಪ್ರಶ್ನಿಸಿ ವಿನ್ಜೋ, ಇಡಿ ಅಧಿಕಾರಿಗಳ ದಾಳಿ ಮತ್ತು ದಾಖಲೆಗಳನ್ನು ವಶಪಡಿಸಿಕೊಂಡಿರುವ ಕ್ರಮ ಕಾನೂನುಬಾಹಿರ ಎಂಬುದಾಗಿ ಘೋಷಿಸಬೇಕು ಮತ್ತು ಮುಂದಿನ ತನಿಖೆಗೆ ತಡೆ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಬಿಎನ್‌ಎಸ್‌ಎಸ್‌ಸೆಕ್ಷನ್5ರಲ್ಲಿ ತಿಳಿಸಿರುವಂತೆ ಅರ್ಜಿದಾರ ಸಂಸ್ಥೆಯ ಮೇಲೆ ದಾಳಿ ಮಾಡುವುದಕ್ಕೆ ಸಂಬಂಧಿಸಿದಂತೆ ಯಾವುದೇ ಸೂಕ್ತ ದಾಖಲೆಗಳಿಲ್ಲ. ಹೀಗಾಗಿ ಇಡಿ ದಾಳಿ ಅಕ್ರಮವಾಗಿದೆ. ಜತೆಗೆ, ಇಡಿ ಅಧಿಕಾರಿಗಳು ಸಿಸಿಟಿವಿ ತುಣುಕುಗಳನ್ನು ವಶಪಡಿಸಿಕೊಂಡಿದ್ದು, ಇದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಸಿಸಿಟಿವಿ ದಾಖಲಿಸಿಕೊಂಡಿರುವ ಅಂಶಗಳನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಿ ಬಂಧಿತರ ವಿರುದ್ಧ ಜಾಮೀನು ಅರ್ಜಿಯ ವಿಚಾರಣೆ ವೇಳೆ ಬಳಕೆ ಮಾಡುವ ಸಾಧ್ಯತೆಯಿದೆ ಎಂದು ಪೀಠಕ್ಕೆ ತಿಳಿಸಿದರು.
ಇದಕ್ಕೆ ಪೀಠ, ಸಿಸಿಟಿವಿ ವಿಡಿಯೋಗಳ ಕುರಿತು ಅರ್ಜಿದಾರರ ಆತಂಕಕ್ಕೆ ಪರಿಹಾರ ಕಂಡುಕೊಳ್ಳಬೇಕಾಗಿದ್ದು, ಸಿಸಿಟಿವಿ ದೃಶ್ಯಗಳನ್ನು ಹಾಜರಿಪಡಿಸುವಂತೆ ಇಡಿ ಅಧಿಕಾರಿಗಳಿಗೆ ನಿರ್ದೇಶನ ನೀಡಬಹುದಾಗಿದೆ. ಜತೆಗೆ, ಅರ್ಜಿದಾರರಿಂದ ಅಗತ್ಯ ದಾಖಲೆಗಳನ್ನು ಪಡೆದು ಜಾಮೀನು ಅರ್ಜಿ ಕುರಿತು ನಿರ್ಧರಿಸಬಹುದಾಗಿದೆ ಎಂದು ತಿಳಿಸಿ ನ್ಯಾಯ ಪೀಠವು ವಿಚಾರಣೆ ಮುಂದೂಡಿ ಆದೇಶಿಸಿತು.

