ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ರೈತರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಒಂದು ದಿನದ ಉಪವಾಸ ಧರಣಿ ಸತ್ಯಾಗ್ರಹವನ್ನು ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಈಚಘಟ್ಟ ಸಿದ್ದವೀರಪ್ಪ ಇವರ ನೇತೃತ್ವದಲ್ಲಿ ಹಮ್ಮಿಕೊಳ್ಳುವ ಮುಖಾಂತರ ಒತ್ತಾಯಿಸಿದರು.
2022-23 ಸಾಲಿನ ಹವಾಮಾನ ಆಧಾರಿತ ಅಡಿಕೆ ಬೆಳೆಗೆ ವಿಮೆ ಹಣ ರೈತರ ಖಾತೆಗೆ ಜಮಾ ಆಗಬೇಕು. ಜಿಲ್ಲೆಯ ಆರು ತಾಲೂಕಿನ ರೈತರಿಗೆ 20 ಕೋಟಿ ಹಣ ಕೂಡಲೇ ಜಮಾ ಮಾಡಬೇಕು.
2023-24 ನೇ ಸಾಲಿನ ಅತಿವೃಷ್ಟಿಯಿಂದಾಗಿ ಉಂಟಾದ ಬೆಳೆ ನಷ್ಟ ಪರಿಹಾರವನ್ನು ಬೇನಾಮಿ ಖಾತೆಗಳಿಗೆ ಜಮಾ ಮಾಡಿ 46 ಕೋಟಿ ಹಣ ನುಂಗಿದವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು. ಆ ಹಣವನ್ನು ಪುನಃ ರೈತರ ಖಾತೆಗೆ ಜಮಾ ಆಗಬೇಕು.
2024-25ನೇ ಸಾಲಿನಲ್ಲಿ ಬಿತ್ತನೆ ಮಾಡಲು ಮಳೆ ಬಂದಿರುವುದಿಲ್ಲ ಇಂಥ ಸಮಯದಲ್ಲಿ ಎಲ್ಲ ರೈತರಿಗೂ ಶೇ 25ರಷ್ಟು ಬೆಳೆ ವಿಮೆ ನೀಡಬೇಕು. ಮಳೆ ಬಾರದೇ ಬೆಳೆ ಕುಂಠಿತವಾಗಿದ್ದು ಬರ ಪರಿಹಾರ ಮತ್ತು ಬೆಳೆ ನಷ್ಟ ಪರಿಹಾರ ರೈತರಿಗೆ ನೀಡಬೇಕು.
ಕೊಳವೆ ಬಾವಿ ಕೊರೆಯುವ ಯಂತ್ರಗಳಿಗೆ ಅಡಿ ಲೆಕ್ಕದಲ್ಲಿ ದರ ನಿಗದಿ ಮಾಡಬೇಕು.
ಖಾಸಗಿ ಶಾಲೆಗಳು ನಿಯಮಬಾಹಿರವಾಗಿ ಶುಲ್ಕ ಪಡೆಯುತ್ತಿದ್ದು ಕಡಿವಾಣ ಹಾಕಬೇಕು. ಈಚಘಟ್ಟದ ಸೋಲಾರ್ ಪ್ಲಾಂಟ್ ಬಾಡಿಗೆ ಮೊತ್ತವನ್ನು ಅದೇ ಗ್ರಾಮದ ಅಭಿವೃದ್ಧಿಗೆ ಬಳಸಬೇಕು.
ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಘೋಷಿಸಬೇಕು ಮತ್ತು ರೈತರಿಗೆ ಲಾರಿ ಬಾಡಿಗೆ ನೀಡಬೇಕು ಎಂದು ರೈತರು ಒತ್ತಾಯಿಸಿದರು.
ದರಣಿ ಸತ್ಯಾಗ್ರಹದಲ್ಲಿ ಜಿಲ್ಲಾಧ್ಯಕ್ಷ ಕೆ ಟಿ ಕೆಪೆಸ್ವಾಮಿ, ಹಿರಿಯೂರು ತಾಲೂಕು ಅಧ್ಯಕ್ಷ ಸಿದ್ದರಾಮಣ್ಣ, ಅರಳಿಕೆರೆ ತಿಪ್ಪೇಸ್ವಾಮಿ, ಲೋಕೇಶ್, ಸಣ್ಣ ತಿಮ್ಮಪ್ಪ, ಹೊಸದುರ್ಗ ಅಧ್ಯಕ್ಷ ಚಿತ್ತಪ್ಪ, ಕಾರ್ಯದರ್ಶಿ ನಿರಂಜನ್, ಸಂಪನ್ಮೂಲ ಸಮಿತಿ ಸದಸ್ಯ ಎಂ ಎಸ್ ಕರೆಸಿದ್ದಯ್ಯ,
ಹೊಳಲ್ಕೆರೆ ತಾಲೂಕ ಅಧ್ಯಕ್ಷ ರಂಗಸ್ವಾಮಿ, ಜಿಲ್ಲಾ ಹಸಿರು ಸೇನೆ ಪ್ರಸನ್ನ, ವೀರಭದ್ರಪ್ಪ, ತುಂಗಪ್ಪ, ಗಿಲಕೇನಹಳ್ಳಿ ರಾಜಪ್ಪ, ತಿಮ್ಮಣ್ಣ, ಮಲ್ಲಿಕಾರ್ಜುನ್, ಸತೀಶ್, ಚಂದ್ರಮೌಳಿ, ತುಳಿಜಮ್ಮ, ವಿಜಯಪ್ರಕಾಶ್ ನಾಗರಾಜ್, ಸದಾಶಿವಪ್ಪ,ಅನ್ನಪೂರ್ಣ ಇನ್ನು ಅನೇಕ ಜಿಲ್ಲೆಯ ತಾಲೂಕಿನ ಪದಾಧಿಕಾರಿಗಳು ಕಾರ್ಯಕರ್ತರು ಭಾಗವಹಿಸಿದ್ದರು.

