ವಿಶ್ವಹಿಂದು ಪರಿಷತ್, ಬಜರಂಗದಳದಿಂದ ಅಹೋರಾತ್ರಿ ಧರಣಿ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯಿದೆ-೨೦೨೦ ರ ಪ್ರಸ್ತಾವಿತ ತಿದ್ದುಪಡಿಯು ಸಂವಿಧಾನದ ಆಶಯಕ್ಕೆ ರಾಜ್ಯ ಮತ್ತು ಹಿಂದೂ ಸಮಾಜದ ಹಿತಾಸಕ್ತಿಗೆ ವಿರೋಧಿಯಾಗಿರುವುದರಿಂದ ವಿಧಾನಸಭೆಯಲ್ಲಿ ಮಂಡಿಸದಂತೆ ಎರಡು ದಿನಗಳ ಕಾಲ ಜಿಲ್ಲಾಧಿಕಾರಿ ಕಚೇರಿ ವೃತ್ತದಲ್ಲಿ ವಿಶ್ವಹಿಂದು ಪರಿಷತ್ ಹಾಗೂ ಬಜರಂಗದಳದಿಂದ ಅಹೋರಾತ್ರಿ ನಡೆದ ಧರಣಿಯನ್ನು ಗುರುವಾರ ಅಂತ್ಯಗೊಳಿಸಲಾಯಿತು.

ಒಂದೆ ವಾಹನದಲ್ಲಿ ಮಿತಿಯಿಲ್ಲದೆ ಜಾನುವಾರುಗಳನ್ನು ಕಟುಕರು ಹಾಗೂ ಗೋಕಳ್ಳರಿಗೆ ಮಾರಾಟ ಮಾಡುತ್ತಿರುವುದು ನಿಲ್ಲಬೇಕಾದರೆ ೨೦೨೦ ರ ಕಾಯಿದೆಯನ್ನು ತಿದ್ದುಪಡಿ ಮಾಡುವುದನ್ನು ರಾಜ್ಯ ಸರ್ಕಾರ ತಕ್ಷಣವೆ ಕೈಬಿಡಬೇಕು. ಸಂವಿಧಾನದ ಆರ್ಟಿಕಲ್ ೫೧ ಎ. ಪ್ರಕಾರ ಜಾನುವಾರುಗಳಿಗೆ ಕರುಣೆ ತೋರಿಸುವುದು ಪ್ರತಿಯೊಬ್ಬ ಭಾರತೀಯನ ಮೂಲಭೂತ ಕರ್ತವ್ಯ. ಇದು ಕರ್ನಾಟಕ ಸರ್ಕಾರಕ್ಕೂ ಅನ್ವಯವಾಗಲಿದೆ. ಹಾಗಾಗಿ ಸದರಿ ತಿದ್ದುಪಡಿ ಸಂವಿಧಾನದ ಆಶಯಕ್ಕೆ ಧಕ್ಕೆ ತರುವುದರಿಂದ ತಿದ್ದುಪಡಿಯನ್ನು ವಿಧಾನಸಭೆಯಲ್ಲಿ ಮಂಡಿಸಬಾರದೆಂದು ಧರಣಿನಿರತರು ಆಗ್ರಹಿಸಿದರು.

- Advertisement - 

ಮಾಜಿ ಶಾಸಕ ಎಸ್.ಕೆ.ಬಸವರಾಜನ್, ಬಜರಂಗದಳ ಕರ್ನಾಟಕ ಪ್ರಾಂತ ಸಂಯೋಜಕ ಪ್ರಬಂಜನ್, ವಿಶ್ವ ಹಿಂದುಪರಿಷತ್ ಜಿಲ್ಲಾ ಕಾರ್ಯದರ್ಶಿ ಚನ್ನಕೇಶವ, ಸಂದೀಪ್, ದೀಪಕ್, ದಿನೇಶ್, ಕೃಷ್ಣ, ಬಿಜೆಪಿ.ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಜಿ.ಹೆಚ್.ಮೋಹನ್, ದ್ಯಾಮಣ್ಣ, ರೇಖ, ವಿಠಲ್ ಇನ್ನು ಮುಂತಾದವರು ಧರಣಿಯಲ್ಲಿ ಪಾಲ್ಗೊಂಡಿದ್ದರು.

 

- Advertisement - 

Share This Article
error: Content is protected !!
";