ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಗಿನೆಲೆ ಕನಕ ಗುರುಪೀಠದ ಪರಮಪೂಜ್ಯ ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮೀಜಿಗಳವರು ನವದೆಹಲಿಯ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವರಾದ ಹೆಚ್.ಡಿ ಕುಮಾರಸ್ವಾಮಿ ಅವರ ನಿವಾಸಕ್ಕೆ ಆಗಮಿಸಿ ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಹಾಲುಮತ ಸಮಾಜದ ಅಭ್ಯುದಯದ ಬಗ್ಗೆ ಪರಮಪೂಜ್ಯರು ಚರ್ಚಿಸಿದರು. ಮಾಜಿ ಮಂತ್ರಿಗಳಾದ ಬಂಡೆಪ್ಪ ಕಾಶೆಂಪೂರ್,
ಸಂಸತ್ ಸದಸ್ಯರಾದ ರಾಜಶೇಖರ್ ಹಿಟ್ನಾಳ, ಮಾಜಿ ಸಂಸದರಾದ ವಿರೂಪಾಕ್ಷಪ್ಪ, ಮಾಜಿ ಸ್ಪೀಕರ್ ರಘುನಾಥ ಮಲ್ಕಾಪುರೆ ಅವರು ಸೇರಿ ಹಾಲುಮತ ಮಹಾಸಭಾದ ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು ಎಂದು ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.


