ಇಂದು ಹುಲೇಗೊಂದಿ ಶ್ರೀ ಸಿದ್ದೇಶ್ವರಸ್ವಾಮಿಯ ಕಡೇ ಕಾರ್ತಿಕ, ದೀಪೋತ್ಸವ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹುಲೇಗೊಂದಿ ಶ್ರೀ ಸಿದ್ದೇಶ್ವರಸ್ವಾಮಿ
, ಶ್ರೀ ಪಂಚಲಿಂಗೇಶ್ವಸ್ವಾಮಿ ಮತ್ತು ಶ್ರೀ ದವಳೇಶ್ವರಸ್ವಾಮಮಿಗಳವರ ಕಡೇ ಕಾರ್ತಿಕ ಮಹೋತ್ಸವ ಡಿಸೆಂಬರ್-14ರ ಭಾನುವಾರ ಸಂಜೆ 6 ಗಂಟೆಗೆ ಚಿತ್ರದುರ್ಗ ನಗರದ ಚಂದ್ರವಳ್ಳಿಯಲ್ಲಿ ದೀಪೋತ್ಸವ ಮಹಾಮಂಗಳಾರತಿ ಪ್ರಸಾದ ವಿನಿಯೋಗವಿರುತ್ತದೆ.

ಕಡೇ ಕಾರ್ತಿಕ ಮಹೋತ್ಸವ ಅಂಗವಾಗಿ ಬೆಳಿಗ್ಗೆ 11 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ.

- Advertisement - 

ಮಹತ್ವದ ಕಾರ್ಯಕ್ರಮಕ್ಕೆ ಶ್ರೀ ಬಸವ ಕುಮಾರಸ್ವಾಮಿ ಮತ್ತು ಡಾ. ಬಸವ ಪ್ರಭು ಸ್ವಾಮೀಜಿ ಅವರು ಆಗಮಿಸಲಿದ್ದಾರೆ.
ನಂದಿಪುರ
, ಉಪ್ಪನಾಯಕಹಳ್ಳಿ, ಸೊಂಡೇಕೊಳ, ಗೊಡಬನಾಳ್, ಸಿದ್ದಾಪುರ, ಅನ್ನೇಹಾಳ್, ಕಾಟೇಹಳ್ಳಿ ಸೇರಿದಂತೆ ಜಿಲ್ಲೆಯ ಅನೇಕ ಭಾಗಗಳಿಂದ ಭಕ್ತರು ಭಾಗವಹಿಸಲಿದ್ದು,

ಹುಲೇಗೊಂದಿ ಶ್ರೀ ಸಿದ್ದೇಶ್ವರಸ್ವಾಮಿಯ ಕಡೇ ಕಾರ್ತಿಕ ಮಹೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ.

- Advertisement - 

 

Share This Article
error: Content is protected !!
";