ಅವೈಜ್ಞಾನಿಕ ಗ್ಯಾರಂಟಿಗಾಗಿ ದಲಿತರ ಹಣವೇ ಬೇಕೇ ಸಿದ್ದರಾಮಯ್ಯ?

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅವೈಜ್ಞಾನಿಕ ಗ್ಯಾರಂಟಿಗಾಗಿ ದಲಿತರ ಶ್ರೇಯೋಭಿವೃದ್ಧಿಯ ಹಣವೇ ಬೇಕೇ ಸಿದ್ದರಾಮಯ್ಯ? ಎಂದು ಜೆಡಿಎಸ್ ತೀಕ್ಷ್ಣವಾಗಿ ಪ್ರಶ್ನಿಸಿದೆ.

ದಲಿತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವುದು, ಬಳಿಕ ನಂಬಿಸಿ ಅವರ ಕತ್ತು ಹಿಸುಕುವುದು ಕರ್ನಾಟಕ ಕಾಂಗ್ರೆಸ್ ಪಕ್ಷದ ಅಜೆಂಡಾ.

- Advertisement - 

ಅಧಿಕಾರಕ್ಕೆ ಬಂದಾಗಿನಿಂದ ಕಾಂಗ್ರೆಸ್‌ಸರ್ಕಾರ ಕಳೆದ 2023-24ರಿಂದ 2025 -26 ಅವಧಿಯಲ್ಲಿ ಪರಿಶಿಷ್ಟರಿಗೆ ಮೀಸಲಾದ SCP- TSP ಅನುದಾನದಲ್ಲಿ ಗ್ಯಾರಂಟಿ ಯೋಜನೆಗಳಿಗೆ 24,832 ಕೋಟಿ ದುರ್ಬಳಕೆ ಮಾಡಿಕೊಂಡಿದೆ ಎಂದು ಜೆಡಿಎಸ್ ಆರೋಪಿಸಿದೆ.

ಇದನ್ನು ಸ್ವತಃ ಸಮಾಜ ಕಲ್ಯಾಣ ಸಚಿವ ಹೆಚ್.ಸಿ ಮಹಾದೇವಪ್ಪ ಅವರೇ ಸದನದಲ್ಲಿ ಒಪ್ಪಿಕೊಂಡಿದ್ದು, ಇದು ಕಾಂಗ್ರೆಸ್‌ಸರ್ಕಾರ ದಲಿತರಿಗೆ ಬಗೆದ ಮಹಾದ್ರೋಹ.

- Advertisement - 

ವಾಲ್ಮೀಕಿ ನಿಗಮ, ಭೋವಿ ನಿಗಮ, ಅಂಬೇಡ್ಕರ್‌ನಿಗಮಗಳಲ್ಲಿ ದಲಿತರ ಹಣ ಲೂಟಿ ಹೊಡೆದಿದ್ದೇ ದಲಿತ ವಿರೋಧಿ ಸಿದ್ದರಾಮಯ್ಯ ಸರ್ಕಾರದ 2.5 ವರ್ಷಗಳ ಮಹಾನ್‌ಸಾಧನೆ ಎಂದು ಜೆಡಿಎಸ್ ಟೀಕಾಪ್ರಹಾರ ಮಾಡಿದೆ.

 

 

Share This Article
error: Content is protected !!
";