ಭದ್ರಾ ನಾಲೆ ದುರಸ್ತಿಗೆ ಸ್ಪಂದನೆಯಿಲ್ಲ; ಶಾಸಕ ಹರೀಶ್

News Desk

ಚಂದ್ರವಳ್ಳಿ ನ್ಯೂಸ್, ಹರಿಹರ :
ಹಾಳಾಗಿರುವ ಭದ್ರಾ ನಾಲೆಯ ದುರಸ್ತಿ ಸಲುವಾಗಿ ಹಲವಾರು ಬಾರಿ ಸರ್ಕಾರಕ್ಕೆ ಮನವಿ ಮಾಡಿದರೂ ಜಿಲ್ಲಾ ಸಚಿವರು
,ಸಂಸದರು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಶಾಸಕ ಬಿ.ಪಿ ಹರೀಶ್ ಬೇಸರ ವ್ಯಕ್ತಪಡಿಸಿದರು.

ತಾಲೂಕಿನ ಮಲೆಬೆನ್ನೂರು ಸಮೀಪ ಹಾಳಾಗಿರುವ ಭದ್ರಾ ನಾಲೆಯನ್ನು ಸಂಬಂಧಿತ ಅಧಿಕಾರಿಗಳ ಜೊತೆ ವೀಕ್ಷಣೆ  ಮಾಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರಿಗಳು,ಇಂಜಿನಿಯರ್ಗಳು 3-4 ಬಾರಿ ಅಂದಾಜು ಪಟ್ಟಿ ತಯಾರಿಸಿ ಜಿಲ್ಲಾ ಉಸ್ತುವಾರಿ ಮಂತ್ರಿ ಹಾಗೂ ಸಂಸದರು ಮೂಲಕ ಸರ್ಕಾರಕ್ಕೆ ಕಳುಹಿಸಿದ್ದರು ಯಾವುದೇ ಪ್ರಯೋಜನ ವಾಗಿಲ್ಲ ಎಂದು ಖೇದ ವ್ಯಕ್ತಪಡಿಸಿದರು.

- Advertisement - 

ಹರಿಹರ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಭದ್ರಾನಾಲೆಯು ಸಂಪೂರ್ಣವಾಗಿ ಹಾಳಾಗಿದೆ ಬೇಸಿಗೆ ಬೆಳೆಗಳಿಗೆ ಕೊನೆಯ ಭಾಗಕ್ಕೆ ನೀರು ತಲುಪದೇ ಇರುವ ಸ್ಥಿತಿ ನಿರ್ಮಾಣವಾಗಿದೆ. ದುರಸ್ತಿಯನ್ನು ಕೂಡಲೇ ಸರಿಪಡಿಸುವ ನಿಟ್ಟಿನಲ್ಲಿ ಸಚಿವರು ಹಾಗೂ ಸಂಸದರು ತಮ್ಮ ಪ್ರಯತ್ನಗಳನ್ನು ನಡೆಸಬೇಕು ಎಂದು ಒತ್ತಾಯಿಸಿದರು.

ಸರ್ಕಾರ ಕೂಡಲೇ ಅನುದಾನ ಬಿಡುಗಡೆ ಮಾಡಬೇಕು ರೈತರ ಹಿತದೃಷ್ಟಿಯಿಂದ ನಾಲೆಗಳ ದುರಸ್ತಿಗೆ ತುರ್ತಾಗಿ ಆಗ್ರಹಿಸಿದ ಶಾಸಕರು, 2009ರಲ್ಲಿ ಭದ್ರಾ ನಲಯ ಆಧುನಿಕರಣದ ನಂತರ ನಾಲೆ ಲೈನಿಂಗ್ ಡ್ರಾಪ್, ಪೈಪ್ ಔಟ್ಲೆಟ್ ಅನುಪಾಲನೆಯನ್ನು ಸರಿಯಾಗಿ ನಿರ್ವಹಣೆ ಮಾಡದ ಕಾರಣ ಹಾಳಾಗಿ ಕಾಲುವೆಯುವುದಕ್ಕೂ ಹೂಳು ತುಂಬಿಕೊಂಡಿದೆ ಜೊತೆಗೆ ಜಂಗಲ್ ಕೂಡ ಬೆಳೆದಿದೆ.

- Advertisement - 

ಪ್ರಸ್ತುತ ವಿಧಾನಸಭೆ ಅಧಿವೇಶನ ನಡೆಯುತ್ತಿದ್ದು ನಾಲೆ ವಿಚಾರವಾಗಿ ಅಧಿವೇಶನದಲ್ಲಿ ಅವಕಾಶ ದೊರೆತರೆ ಖಂಡಿತ ಪ್ರಸ್ತಾಪಿಸುತ್ತೇನೆ. ರೈತರ ಹಿತ ಕಾಯುವ ನಿಟ್ಟಿನಲ್ಲಿ ನಾಲೆ ಸಮಸ್ಯೆ ಕುರಿತು ಜಲಸಂಪನ್ಮೂಲ ಸಚಿವರು, ಮುಖ್ಯಮಂತ್ರಿ ಗಳು ಹಾಗೂ ಕೇಂದ್ರ ಜಲ ಶಕ್ತಿ ರಾಜ್ಯ ಸಚಿವ ಸೋಮಣ್ಣ ಅವರೊಟ್ಟಿಗೆ ಮಾತನಾಡುವುದಾಗಿ ಇದೇ ವೇಳೆ ಶಾಸಕರು ತಿಳಿಸಿದರು.

ಮಲೆಬೆನ್ನೂರು ವ್ಯಾಪ್ತಿಯಲ್ಲಿ ಭದ್ರನಾಲೆಯುತ್ತಕ್ಕೂ ಸಾರ್ವಜನಿಕರು ಸುರಿದಿರುವ ತ್ಯಾಜ್ಯ ವಸ್ತು, ಸತ್ತ ಪ್ರಾಣಿಗಳು, ಕಸಕಡ್ಡಿ, ತಿಪ್ಪೆಗಳ ದುರ್ವಾಸನೆಯನ್ನು ಗಮನಿಸಿ ಜೊತೆ ಇದ್ದ  ಜಲಸಂಪನ್ಮೂಲ ಇಲಾಖೆಯ ಇಂಜಿನಿಯರ್, ಪುರಸಭೆ ಸದಸ್ಯರು,ಪರಿಸರ ಇಂಜಿನಿಯರ್ ಮುಖ್ಯಾಧಿಕಾರಿ,ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಪರಿಸರ ಮಾಲಿನ್ಯದ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.

 ಈ ಸಮಯದಲ್ಲಿ ಇಂಜಿನಿಯರ್ ಪ್ರವೀಣ್, ಸಹಾಯಕ ಕಾರ್ಯ ಪಾಲಕ ಇಂಜಿನಿಯರ್ ಕೃಷ್ಣಮೂರ್ತಿ, ರೈತರುಗಳಾದ ಪರಮೇಶ್ವರಪ್ಪ, ಜಿಗಣಿ ಚಂದ್ರಪ್ಪ, ಪುರಸಭೆ ಸದಸ್ಯ ಬೆಣ್ಣೆಹಳ್ಳಿ ಸಿದ್ದೇಶ್, ತಾಲೂಕ ಗ್ರಾಮಂತರ ಬಿಜೆಪಿ ಅಧ್ಯಕ್ಷ ಇಂಡಸ್ ಘಟ್ಟ ಲಿಂಗರಾಜ್,ಪ್ರಧಾನ ಕಾರ್ಯದರ್ಶಿ ಐರಣಿ ಅಣ್ಣಪ್ಪ,ಆದಪುರ ವೀರೇಶ್,ಹುಗ್ಗಿ ಮಹಾಂತೇಶ್,ಸಿರಿಗೆರಿ ತಿಪ್ಪೇರುದ್ರಪ್ಪ,ಬಂಡೇರ ಪ್ರಭು,ಒ.ಜಿ ಮಂಜುನಾಥ್ ಸೇರಿದಂತೆ ಹಲವು ರೈತರುಗಳು ಹಾಜರಿದ್ದರು.

 

 

Share This Article
error: Content is protected !!
";