ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಧಾರವಾಡದ ಪ್ರೊ. ಕಾಳಗೌಡ ಬಸಪ್ಪ ಗುಡಸಿ ಅವರಿಂದು ಅಧಿಕಾರ ವಹಿಸಿಕೊಂಡರು.
ಗುಡಸಿ ಅವರಿಗೆ ಈ ಹಿಂದೆ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಯಾಗಿ ಹಾಗು ವಿವಿಧ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ ಅನುಭವವಿದೆ. ಈ ಸಂದರ್ಭದಲ್ಲಿ ಎಸ್.ಜೆ.ಎಂ. ಸಂಸ್ಥೆಯ ಶಾಲಾ-ಕಾಲೇಜುಗಳ ಮುಖ್ಯಸ್ಥರುಗಳು ಉಪಸ್ಥಿತರಿದ್ದರು.

ಶ್ರೀಮಠ ಹಾಗು ಎಸ್.ಜೆ.ಎಂ. ವಿದ್ಯಾಪೀಠ ಆಡಳಿತ ಮಂಡಳಿಯ ಅಧ್ಯಕ್ಷರಾದ ಶಿವಯೋಗಿ ಸಿ.ಕಳಸದ, ಸದಸ್ಯರಾದ ಡಾ. ಬಸವ ಕುಮಾರ ಸ್ವಾಮಿಗಳು, ಡಾ.ಪಿ.ಎಸ್. ಶಂಕರ್, ಎಸ್.ಎನ್. ಚಂದ್ರಶೇಖರ್, ಅವರುಗಳು ನೂತನ ಕುಲಪತಿಗಳನ್ನು ಅಭಿನಂದಿಸಿದ್ದಾರೆ.

