ಹಿರಿಯೂರು ಪತ್ರ ಬರಹಗಾರರ ಲೇಖನಿ ಸ್ಥಗಿತ ಧರಣಿ ಸತ್ಯಾಗ್ರಹ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ರಾಜ್ಯ ಸರ್ಕಾರ ಪತ್ರ ಬರಹಗಾರರ ವೃತ್ತಿಯನ್ನು ಹತ್ತಿಕ್ಕುತ್ತಿರುವ ಧೋರಣೆ ಖಂಡಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಡಿ.15ರ ಸೋಮವಾರ ಲೇಖನಿ ಸ್ಥಗಿತಗೊಳಿಸಿ ಹಿರಿಯೂರು ತಾಲೂಕು ದಸ್ತಾವೇಜು ಪತ್ರ ಬರಹಗಾರರ ಸಂಘ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಯಿತು.

ಲೇಖನಿ ಸ್ಥಗಿತ ಮಾಡಿ ಬೆಳಿಗ್ಗೆ ಸಂಜೆಯವರೆವಿಗೂ ಧರಣಿ ನಡೆಸಿದ ಪತ್ರ ಬರಹಗಾರರು ರಾಜ್ಯ ಸರ್ಕಾರವು ಜಾರಿ ಮಾಡಲು ಉದ್ದೇಶಿಸಿರುವ ಪೇಪರ್‌ಲೆಸ್ ನೊಂದಣಿ ಕಾವೇರಿ ತಂತ್ರಾಂಶ 3.0 ಅನುಷ್ಠಾನದಿಂದ ಪತ್ರ ಬರಹಗಾರರ ಬದುಕು ಸಂಕಷ್ಟಕ್ಕೆ ಸಿಲುಕಲಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿ ಕೂಡಲೇ ತಂತ್ರಾಂಶ 3.0 ಜಾರಿಯಿಂದ ಹಿಂದೆ ಸರಿಯಬೇಕೆಂದು ಆಗ್ರಹ ಮಾಡಿದರು.

- Advertisement - 

ಪತ್ರ ಬರಹಗಾರರ ಆತಂಕ ದೂರ ಮಾಡದಿದ್ದರೆ ಅನಿರ್ದಿಷ್ಟಾವಧಿ ಲೇಖನಿ ಸ್ಥಗಿತ ಮುಷ್ಕರಕ್ಕೆ ಚಾಲನೆ ನೀಡಲಾಗುತ್ತದೆ ಎಂದು ಎಚ್ಚರಿಸಿದರು.
ಅಧಿಕೃತ ಪತ್ರ ಬರಹಗಾರರ ಬೇಡಿಕೆಗಳ ಈಡೇರಿಕೆಗೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಹಿರಿಯೂರು ಉಪ ನೋಂದಣಾಧಿಕಾರಿಗಳ ಕಚೇರಿ ಮುಂಭಾಗ ಲೇಖನಿ ಸ್ಥಗಿತ ಧರಣಿ ಸತ್ಯಾಗ್ರಹ ನಡೆಸಿದರು.

ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ಪತ್ರ ಬರಹಗಾರರಲ್ಲದ ಹಾಗೂ ಪರವಾನಿಗೆ ಪಡೆಯದ ವ್ಯಕ್ತಿಗಳಿಂದ ಪರವಾನಿಗೆ ಪಡೆದ ಅಧಿಕೃತ ಪತ್ರ ಬರಹಗಾರರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಅಲ್ಲದೆ ದಿನದಿಂದ ದಿನಕ್ಕೆ ಈ ಸಮಸ್ಯೆ ಉಲ್ಬಣವಾಗುತ್ತಿದೆ.

- Advertisement - 

ಇತ್ತೀಚೆಗೆ ಕಾವೇರಿ ೨.೦ ತಂತ್ರಾಂಶದಲ್ಲಿ ಸಿಟಿಜನ್ ಲಾಗಿನ್ ಅಳವಡಿಸಿದ್ದು, ಇದರ ಮೂಲಕವಾಗಿ ದಸ್ತಾವೇಜುಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲದ ಅನಧಿಕೃತ ವ್ಯಕ್ತಿಗಳು ಪತ್ರಗಳನ್ನು ಅಪ್ಲೋಡ್ ಮಾಡುತ್ತಿದ್ದು, ಇದರಿಂದ ವೃತ್ತಿ ನಂಬಿ ಬುದುಕುತ್ತಿರುವ ಅಧಿಕೃತ ಪತ್ರ ಬರಹಗಾರರ ಜೀವನ ನಿರ್ವಹಣೆ ಮಾಡುವುದು ಕಷ್ಟಕರವಾಗಲಿದೆ ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದರು.

ಈಗಾಗಲೇ ಈ ಸಂಬಂಧ ಹಲವಾರು ಬಾರಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಳಲು ತೋಡಿಕೊಂಡರು.

ಹೊರ ರಾಜ್ಯಗಳಲ್ಲಿರುವಂತೆ ರಾಜ್ಯದಲ್ಲಿಯೂ ಸಹ ಪತ್ರ ಬರಹಗಾರರಿಗೆ ಪ್ರತ್ಯೇಕ ಲಾಗಿನ್ ನೀಡುವುದು. ನೋಂದಣಿಯಾಗುವ ಎಲ್ಲಾ ದಸ್ತಾವೇಜುಗಳಿಗೆ ಕಡ್ಡಾಯವಾಗಿ ಅಧಿಕೃತ ಪತ್ರ ಬರಹಗಾರರ ಅಥವಾ ವಕೀಲರ ಬಿಕ್ಕಲಂ ಕಡ್ಡಾಯಗೊಳಿಸುವುದು.

ಅಧಿಕೃತ ಪತ್ರ ಬರಹಗಾರರಿಗೆ ಏಕ ರೂಪದ ಅಧಿಕೃತ ಗುರುತಿನ ಚೀಟಿ ನೀಡುವುದು ಹಾಗೂ ಪತ್ರ ಬರಹಗಾರರ ಹೆಸರಿನಲ್ಲಿ ಇಲಾಖೆಗೆ ಬರುವ ಅನಧಿಕೃತ ವ್ಯಕ್ತಿಗಳಿಗೆ ಕಡಿವಾಣ ಹಾಕುವಂತೆ ಆಗ್ರಹಿಸಿದರು.

ನಮ್ಮ ಬೇಡಿಕೆಗಳ ಈಡೇರಿಕೆಗಾಗಿ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಮನವಿ ಮಂಡಣೆ ಮಾಡಲು ಹಾಗೂ ಸರ್ಕಾರ ಗಮನ ಸೆಳೆಯುವ ಉದ್ದೇಶದಿಂದ ಡಿ.೧೬ರಂದು ಬೆಳಗಾವಿ ಚಲೋ ಹಾಗೂ ಸುವರ್ಣ ಸೌಧದ ಮುಂದೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಪತ್ರ ಬರಹಗಾರರ ಪ್ರತಿಭಟನಾಕಾರರು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಪತ್ರ ಬರಹಗಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಹಶೀಲ್ದಾರ್ ಸಿದ್ದೇಶ್ ರವರಿಗೆ ಹಾಗೂ ಉಪನೋಂದಣಾಧಿಕಾರಿ ಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ಹಿರಿಯೂರು ತಾಲೂಕು ದಸ್ತಾವೇಜು ಪತ್ರ ಬರಹಗಾರರ ಸಂಘದ ಅಧ್ಯಕ್ಷ ಜಿ ದೇವರಾಜ್, ಉಪಾಧ್ಯಕ್ಷ ಬಿ.ಎಂ ಶಿವಣ್ಣ, ಖಜಾಂಚಿ ಜಿ.ಕುಮಾರಸ್ವಾಮಿ, ಕಾರ್ಯದರ್ಶಿ ಟಿ.ಎನ್ ವೀರೇಶ್, ಸಹ ಕಾರ್ಯದರ್ಶಿ ಎ.ನಾಗರಾಜ, ಸಂಚಾಲಕ ಬಿ.ಸುಧಾಕರ್, ಆರ್. ಕೆ ಅಬ್ದುಲ್ ರಹೀಮ್, ನಿರ್ದೇಶಕರಾದ ಮಲ್ಲಾಚಾರಪ್ಪ, ಎಸ್.ಆರ್ ಉಮೇಶ್, ಬಿ.ರಾಜಶೇಖರ್, ಎಚ್.ಶಶಿಧರ್, ಎ.ರಮೇಶ್, ಆರ್ ಸೆಲ್ವರಾಜ್ ಸೇರಿದಂತೆ ಮತ್ತಿತರ ಪತ್ರ ಬರಹಗಾರರು ಇದ್ದರು.

 

 

Share This Article
error: Content is protected !!
";